Price Hike: ಉಚಿತ ವಿದ್ಯುತ್ ಬೆನ್ನಲ್ಲೇ ಜನತೆಗೆ ಶಾಕ್ ನೀಡಿದ ಸರ್ಕಾರ, ಬೇಸರದಲ್ಲಿ ಜನರು.

ಉಚಿತ ವಿದ್ಯುತ್ ನೀಡಿದ ಸರ್ಕಾರ ಈಗ ಜನರ ಮೇಲೆ ಇನ್ನೊಂದು ಹೊರೆ ಹೇರಲು ತಯಾರಾಗಿದೆ.

Price Hike From August First: ದೇಶದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತವಾಗುದು ಸಹಜವಾಗಿದೆ. ಸರ್ಕಾರದ ಕೆಲವು ನಿರ್ಧಾರಗಳು ಜನಸಾಮಾನ್ಯರಿಗೆ ಸಮಾಧಾನ ತಂದರೆ ಇನ್ನು ಕೆಲವು ನಿರ್ಧಾರಗಳು ಬಿಸಿ ಮುಟ್ಟಿಸುವಂತಿರುತ್ತದೆ.

ಬೆಲೆ ಏರಿಕೆ ಜನಸಾಮಾನ್ಯರನ್ನು ಕಂಗಾಲು ಮಾಡುತ್ತದೆ. ಇದೀಗ ಜನ ಜೀವನದ ಮೇಲೆ ಪರಿಣಾಮ ಬೀರುವ ಸರ್ಕಾರದ ಒಂದಿಷ್ಟು ತೀರ್ಮಾನಗಳು ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ.

Price Hike From August First
Image Credit: Digit

ವಿದ್ಯುತ್ ಉಚಿತ
ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಲ್ಲಿ ಗರಿಷ್ಠ 200 ಯೂನಿಟ್  ಒಳಗೆ ವಿದ್ಯುತ್ ಬಳಸಿದರೆ ವಿದ್ಯುತ್ ಬಿಲ್  ಗೆ ಹಣ ಪಾವತಿ ಮಾಡುವಂತಿಲ್ಲ. 200 ಯೂನಿಟ್ ಗಿಂತ ಅಧಿಕ ವಿದ್ಯುತ್ ಬಳಸಿದರೆ ವಿದ್ಯುತ್ ಬಿಲ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ.
ಹೋಟೆಲ್ ತಿನಿಸು ದುಬಾರಿ
ಅಕ್ಕಿ, ತರಕಾರಿ, ಹಾಲು, ಸೇರಿ ವಿವಿಧ ಪದಾರ್ಥಗಳ ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರು ಊಟ ತಿಂಡಿಗಳ ದರ ಏರಿಸಲು ಮುಂದಾಗಿದ್ದಾರೆ. ಆಗಸ್ಟ್ 1 ರಿಂದ ಟೀ, ಕಾಫಿ ಬೆಲೆ ಕೂಡ ಹೆಚ್ಚಳವಾಗಲಿದೆ. ಅಕ್ಕಿ ದರ ಏರಿರುವುದರಿಂದ ಇಡ್ಲಿ, ದೋಸೆ ಬೆಲೆ ಕೂಡ ದುಬಾರಿಯಾಗಲಿದೆ.

The government has hiked the price of milk by Rs 3
Image Credit: Deccanherald

ಹಾಲಿನ ದರದಲ್ಲಿ ಏರಿಕೆ
ಹಾಲು ಒಕ್ಕೂಟಗಳ ಒತ್ತಡಕ್ಕೆ ಮಣಿದ ಸರ್ಕಾರ ಹಾಲಿನ ದರದಲ್ಲಿ  3 ರೂಪಾಯಿ ಏರಿಸಲು ಒಪ್ಪಿಗೆ ನೀಡಿತು. ಒಂದೊಂದು ಹಾಲು ಮಹಾಮಂಡಳದಲ್ಲಿ ಪ್ರತಿ ಲೀಟರ್ ಹಾಲಿಗೆ ಒಂದೊಂದು ದರ ಇದ್ದು, ಹಾಲಿನ ದರಕ್ಕೆ ಹೆಚ್ಚುವರಿಯಾಗಿ ಮೂರು ರೂಪಾಯಿ  ಸೇರಿಸಿ ಮಾರಾಟ ಮಾಡುತ್ತಾರೆ ಹಾಗೆ ಆ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಬೇಕೆಂದು ಸರ್ಕಾರ ಷರತ್ತು ಹಾಕಿದೆ. ಹಾಲಿನ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಹೆಚ್ಚುವರಿ ಮೊತ್ತ ಸಿಗುತ್ತದೆ ಹಾಗೆ ಹಾಲು ಖರೀದಿಸುವವರಿಗೆ ಬೆಲೆ ಸ್ವಲ್ಪ ಅಧಿಕವಾಗಲಿದೆ.

ವಾಹನಗಳ ತೆರಿಗೆಯಲ್ಲಿ ಹೆಚ್ಚಳ
ಹೊಸ ತೆರಿಗೆ ಪದ್ಧತಿ ಆಗಸ್ಟ್ ನಿಂದ ಜಾರಿಗೆ ಬರುತ್ತಿದೆ. ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಹೆಚ್ಚಳವಾಗಲಿದೆ. ಶಾಲಾ ಮಕ್ಕಳು ತೆರಳುವ ವಾಹನಗಳ ಪ್ರತಿ ಚದರ ಮೀಟರ್ ತೆರಿಗೆಯನ್ನು 20 ರೂ.ನಿಂದ 100ಕ್ಕೆ ಏರಿಕೆ ಮಾಡಲಾಗಿದೆ. ಕ್ಯಾಬ್ ಗಳಿಗೆ ಶೇಕಡಾ 9 ರಷ್ಟು ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group

income tax deadline
Image Credit: Herofincorp

ಆದಾಯ ತೆರಿಗೆ (Income Tax)
ಆದಾಯ ತೆರಿಗೆ ಪಾವತಿಸುವವರಿಗೆ ಜುಲೈ 31 ಕೊನೆಯ ದಿನ. ಆಗಸ್ಟ್ ಒಂದರಿಂದ ತೆರಿಗೆ ಪಾವತಿ ಮೇಲೆ ದಂಡ ವಿಧಿಸಲಾಗುತ್ತದೆ. ವಾರ್ಷಿಕವಾಗಿ 5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ನಿಗದಿತ ಗಡುವಾದ ಜುಲೈ 31ರೊಳಗೆ ಆದಾಯ ತೆರಿಗೆ ಸಲ್ಲಿಸದಿದ್ದರೆ ದಂಡ ಕಟ್ಟುವುದು ಅನಿವಾರ್ಯ.

Price Hike From August First
Image Credit: Wavecity

ಎತ್ತರದ ಕಟ್ಟಡಕ್ಕೆ ಶುಲ್ಕ
ಎತ್ತರದ ಕಟ್ಟಡಗಳು ಇನ್ನು ಮುಂದೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ನಿರಾಕ್ಷೇಪಣಾ ಪತ್ರ ಪಡೆಯುವಾಗ ನಿಯಮ ಪಾಲಿಸುವ ಜೊತೆ ಕಟ್ಟಡ ಮಾಲಿಕರು ಶುಲ್ಕವನ್ನೂ ಕಟ್ಟಬೇಕಾಗುತ್ತದೆ. ಶುಲ್ಕ, ನಿಯಮದ ಮಾಹಿತಿ ಶೀಘ್ರವೇ ಸ್ಪಷ್ಟವಾಗಲಿದೆ.

Join Nadunudi News WhatsApp Group