Private Employees: ಖಾಸಗಿ ಉದ್ಯೋಗಿಗಳಿಗೆ ಬ್ಯಾಂಕಿನಿಂದ ಎಚ್ಚರಿಕೆ, ಬ್ಯಾಂಕ್ ಖಾತೆಯಲ್ಲಿ ಯಾವಾಗಲು ಇಷ್ಟು ಹಣ ಇರಲೇಬೇಕು.
ಖಾಸಗಿ ಉದ್ಯೋಗಿಗಳು ಬ್ಯಾಂಕ್ ನಲ್ಲಿ ಇಂತಿಷ್ಟು ಹಣ ಇರಿಸುದು ಕಡ್ಡಾಯವಾಗಿದೆ.
Private Employees Emergency Fund: ನೀವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರತಿ ತಿಂಗಳು ಕೂಡ ಸಂಬಳ ವನ್ನು ಪಡೆಯುತ್ತೀರಿ. ಹಲವರು ಸಂಬಳ ಬಂದ ತಕ್ಷಣ ಅದನ್ನು ಸಂಪೂರ್ಣ ವಾಗಿ ಖರ್ಚು ಮಾಡುತ್ತಾರೆ. ತಿಂಗಳ ಕೊನೆಗೆ ಅವರ ಹತ್ತಿರ 1 ರೂಪಾಯಿ ಕೂಡ ಇರುದಿಲ್ಲ. ನಂತರ ಇನ್ನೊಬ್ಬರ ಹತ್ತಿರ ಸಾಲ ಪಡೆಯುತ್ತಾರೆ. ಅಥವಾ ಕ್ರೆಡಿಟ್ ಕಾರ್ಡ್ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಆರ್ಥಿಕ ಬಿಕ್ಕಟನ್ನು ಸರಿ ಮಾಡುವ ಸಲುವಾಗಿ ಬ್ಯಾಂಕ್ ಉದ್ಯೋಗಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ. ಅದೇನೆಂದು ನಾವೀಗ ತಿಳಿಯೋಣ.
ತುರ್ತು ನಿಧಿಯನ್ನು ಏಕೆ ಸಂಗ್ರಹಿಸಬೇಕು
ನೀವು ನಿಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರೆ ಮತ್ತು ಖಾಸಗಿ ಉದ್ಯೋಗವನ್ನು ಮಾಡುತ್ತಿದ್ದರೆ ತುರ್ತು ನಿಧಿಯನ್ನು ಸಂಗ್ರಹಿಸಬೇಕು. ಏಕೆಂದ್ರೆ ಇದು ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಮುಂದೆ ನೀವು ಮಾಸಿಕ ವೇತನ ಪಡೆಯದಿದ್ದಾಗ ಈ ತುರ್ತು ನಿಧಿಯನ್ನು ಬಳಸಲು ಸಾಧ್ಯವಾಗುತ್ತದೆ.
ಪ್ರತಿಯೊಬ್ಬರಿಗೂ ತುರ್ತು ನಿಧಿ ಅಗತ್ಯ
ತುರ್ತು ನಿಧಿ ನಿಮ್ಮ ಸಂಬಳದ ಮೂರು ಪಟ್ಟು ಇರಬೇಕು. ತಿಂಗಳ ಸಂಬಳ 50 ಸಾವಿರ ಆಗಿದ್ದರೆ ಅವರು ಕನಿಷ್ಠ 1.5 ಲಕ್ಷ ರೂಪಾಯಿಗಳನ್ನು ತುರ್ತು ನಿಧಿಯಾಗಿ ಇಟ್ಟುಕೊಳ್ಳಬೇಕು. ಮಾಸಿಕ ವೇತನ 1 ಲಕ್ಷ ಆಗಿದ್ದರೆ ತುರ್ತು ನಿಧಿಯಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ 3 ರಿಂದ 5 ಲಕ್ಷ ರೂ. ಇರಿಸಬೇಕು.
ಈ ಹಣವನ್ನು ಉಳಿತಾಯ ಖಾತೆಯಲ್ಲಿ ಇರಿಸುದು ಉತ್ತಮ ಏಕೆಂದರೆ ಅಗತ್ಯವಿದ್ದಾಗ ಹಿಂಪಡೆಯಬಹುದು. ನೀವು ನಿಮ್ಮ ಕೆಲಸವನ್ನು ಕಳೆದುಕೊಂಡರೆ ಅಥವಾ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದಂತಹ ಸಂದರ್ಭಗಳಲ್ಲಿ ಈ ತುರ್ತು ನಿಧಿ ಸಹಾಯವಾಗುತ್ತದೆ.
ತುರ್ತು ನಿಧಿ ರಚನೆ
*ಮೊದಲು ನಿಮ್ಮ ಆದಾಯದ 30 ಪ್ರತಿಶತವನ್ನು ಉಳಿಸಬೇಕು.
* ಅದರಲ್ಲಿ 15 ಪ್ರತಿಶತ ಹೂಡಿಕೆ ಮಾಡಿ, ಉಳಿದ 15 ಪ್ರತಿಶತವನ್ನು ತುರ್ತು ನಿಧಿ ಖಾತೆಗೆ ವರ್ಗಾವಣೆ ಮಾಡಬೇಕು
*ನಿಮ್ಮ ಸಂಬಳವನ್ನು ಮೂರು ಪಟ್ಟು ತುರ್ತು ನಿಧಿ ಖಾತೆಯಲ್ಲಿ ಠೇವಣಿ ಮಾಡುವವರೆಗೆ ಈ ಪ್ರವೃತ್ತಿಯನ್ನು ಮುಂದುವರೆಸಬೇಕು.