School Fess: ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಬೇಸರದ ಸುದ್ದಿ, ಶುಲ್ಕದಲ್ಲಿ ಇಷ್ಟು ಹೆಚ್ಚಳ

ಹೊಸ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ

Private School Fess Hike: ಇನ್ನೇನು ಕೆಲವೇ ದಿನಗಳಲ್ಲಿ 2024 -25 ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಬಾರಿಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇನ್ನು ಶಿಕ್ಷಣ ಇಲಾಖೆಯು ಈಗಾಗಲೇ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ನೀಡಿದೆ. ಈ ಬಾರಿ ಪಠ್ಯ ಕ್ರಮದಿಂದ ಹಿಡಿದು ಎಲ್ಲ ರೀತಿಯ ನಿಯಮಗಳಲ್ಲಿಯೂ ಬದಲಾವಣೆ ಆಗಲಿದೆ.

ಇನ್ನು ಶಾಲಾ ಆರಂಭಕ್ಕೂ ಮುನ್ನವೇ ಪೋಷಕರಿಗೆ ಶಾಲಾ ಫೀಸ್ ಗಳ ಬಗ್ಗೆ ಯೋಚನೆ ಶುರುವಾಗಿದೆ. ಇನ್ನು ಖಾಸಗಿ ಶಾಲಾ ಶುಲ್ಕಗಳು ಈ ಬಾರಿ ಬದಲಾಗಲಿವೆ. ನಿಮಗೆ ತಿಳಿದಿರುವ ಹಾಗೆ ಸರ್ಕಾರೀ ಶಾಲೆಗಳಿಗೆ ಹೋಲಿಸದರೆ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಿರುತ್ತದೆ. ಸದ್ಯ ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಮಹತ್ವದ ಮಾಹಿತಿ ಹೊರಬಿದ್ದಿದೆ.

Private School Fees Hike
Image Credit: Informalnewz

ಹೊಸ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ
ರಾಜ್ಯದ ಖಾಸಗಿ ಶಾಲೆಗಳ ಶುಲ್ಕದ ವಿಚ್ಛ್ರಾವಾಗಿ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯ ಖಾಸಗಿ ಶಾಲೆಗಳ ಶುಲ್ಕವು 2024 -25 ರ ಶೈಕ್ಷಣಿಕ ವರ್ಷದಿಂದ ಶೇ. 10 ರಿಂದ ಶೇ. 15 ರಷ್ಟು ಶುಲ್ಕ ಹೆಚ್ಚಳಕ್ಕೆ ನಿರ್ಧರಿಸಿದೆ. ಶಾಲೆಗಲ್ಲಿನ ಮೂಲ ಸೌಕರ್ಯ, ಶಿಕ್ಷಕರ ವೇತನ, ತಂತ್ರಜ್ಞಾನ ಆಧಾರಿತ ಉಪಕರಣಗಳು ಮತ್ತು ಭದ್ರತೆ ಸುರಕ್ಷತೆ ಸೇರಿ ಎಲ್ಲ ಆಯಾಮಗಳಲ್ಲಿಯೂ ಬೆಲೆ ಏರಿಕೆ ಆಗುತ್ತಿದೆ. ಈ ಕಾರಣಕ್ಕೆ ಶಾಲಾ ಶುಲ್ಕಗಳ ಹೆಚ್ಚಳ ಅನಿವಾರ್ಯ ಎಂದು ಖಾಸಗಿ ಶಾಲೆಗಳು ಹೇಳುತ್ತಿವೆ.

ಶೇ. 10 ರಿಂದ ಶೇ. 15 ರಷ್ಟು ಶುಲ್ಕ ಹೆಚ್ಚಳ
ಪ್ರತಿ ವರ್ಷ ಶುಲ್ಕ ಹೆಚ್ಚಳದಿಂದ ಪೋಷಕರು ತೊಂದರೆ ಅನುಭವಿಸುವಂತಾಗಿದೆ. ಶಾಲೆಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಹೆಚ್ಚಿನ ಹಣ ಅಗತ್ಯವಾಗಿದೆ. ಈಗಂತೂ ರಾಜ್ಯದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಕಾರಣ ಶುಲ್ಕ ಹೆಚ್ಚಳ ಪ್ರಕ್ರಿಯೆ ಅನಿವಾರ್ಯ ಎನ್ನಲಾಗುತ್ತಿದೆ. ಮೂಲ ಸೌಕರ್ಯ, ವೇತನ ಭದ್ರತೆ ಸಂಬಂದಿಸಿದ ಖರ್ಚುಗಳು ಹೆಚ್ಚಾಗುತ್ತಿರುವುದರಿಂದ ಶುಲ್ಕ ಹೆಚ್ಚಿಸುವುದು ಅಗತ್ಯವಾಗಲಿದೆ. ಪ್ರತಿ ವರ್ಷ ಪೋಷಕರಿಗೆ ಶುಲ್ಕ ಬರೆ ತಪ್ಪದಂತಾಗಿದೆ. ಇನ್ನು 2024 -25 ರಿಂದ ಖಾಸಗಿ ಶಾಲೆಗಳಿಗೆ ಹೆಚ್ಚಿನ ಶುಲ್ಕವನ್ನು ಕಟ್ಟಬೇಕಾಗುಗ್ತದೆ.

Private School Fees
Image Credit: Knskashmir

Join Nadunudi News WhatsApp Group

Join Nadunudi News WhatsApp Group