Privatization Of Banks: ಈ ಬ್ಯಾಂಕುಗಳನ್ನ ಖಾಸಗೀಕರಣ ಮಾಡಲು ತೀರ್ಮಾನ ಮಾಡಿದ ಕೇಂದ್ರ ಸರ್ಕಾರ, ಆತಂಕದಲ್ಲಿ ಖಾತೆದಾರರು.

ಈ ಬ್ಯಾಂಕುಗಳನ್ನ ಖಾಸಗೀಕರಣ ಮಾಡಲು ಮುಂದಾದ ಕೇಂದ್ರ ಸರ್ಕಾರ.

Bank Privatization 2023: ಬ್ಯಾಂಕ್ ಖಾತೆ ಎಲ್ಲಾ ಜನರಿಗೂ ಬೇಕೇ ಬೇಕು. ಸದ್ಯ ದೇಶದಲ್ಲಿ ಬ್ಯಾಂಕ್ ಖಾತೆ ಇಲ್ಲದಡೆ ಇರುವ ವ್ಯಕ್ತಿಯನ್ನು ಹುಡುಕುವುದು ಬಹಳ ಕಷ್ಟವೆಂದು ಹೇಳಬಹುದು. ಹೌದು ಹಣದ ವಹಿವಾಟು ಮಾಡಲು ಬ್ಯಾಂಕ್ ಖಾತೆ ಅವಶ್ಯಕ ಎಂದು ಹೇಳಿದರೆ ತಪ್ಪಾಗಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಡಿಜಿಟಲ್ ಪಾವತಿಯನ್ನ ಅಳವಡಿಸಿಕೊಂಡಿರುವ ಕಾರಣ ಪ್ರತಿಯೊಬ್ಬರೂ ಯಾವುದಾದರೂ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುತ್ತಾರೆ.

ಸದ್ಯ ಬ್ಯಾಂಕುಗಳಿಗೆ ಸಂಬಂಧಿಸಿದಂತೆ RBI ದಿನದಿಂದ ದಿನಕ್ಕೆ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಹೌದು ಈಗಾಗಲೇ ಕೆಲವು ಬ್ಯಾಂಕುಗಳ ಲೈಸನ್ಸ್ ರದ್ದು ಮಾಡಿರುವ RBI ಕೆಲವು ಸರ್ಕಾರೀ ಬ್ಯಾಂಕುಗಳನ್ನ ಖಾಸಗಿ ಮಾಡಲು ತೀರ್ಮಾನ ಮಾಡಿದೆ.

Privatization Of Banks
Image Credit: Swarajyamag

ಬ್ಯಾಂಕುಗಳನ್ನ ಖಾಸಗಿ ಮಾಡಲು ನಿರ್ಧಾರ ಮಾಡಿದ RBI
ಹೌದು RBI ಕೆಲವು ಸರ್ಕಾರೀ ಬ್ಯಾಂಕುಗಳನ್ನ ಖಾಸಗಿ ಮಾಡಲು ತೀರ್ಮಾನವನ್ನ ಮಾಡಿದ್ದು ಇದು ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಲಾಭದಾಯಕವಲ್ಲದ ಕೆಲವು ಬ್ಯಾಂಕುಗಳನ್ನ ಈಗ ಕೇಂದ್ರ ಸರ್ಕಾರ ಖಾಸಗಿ ಮಾಡಲು ತೀರ್ಮಾನವನ್ನ ಮಾಡಿದ್ದು ಆ ಬ್ಯಾಂಕುಗಳನ್ನ ಪಟ್ಟಿಯನ್ನ ಕೂಡ ಬಿಡುಗಡೆ ಮಾಡಿದೆ ಎಂದು ಹೇಳಬಹುದು. RBI ಮತ್ತು ನೀತಿ ಆಯೋಗ ಕೆಲವು ಬ್ಯಾಂಕುಗಳ ಪಟ್ಟಿಯನ್ನ ಕೇಂದ್ರಕ್ಕೆ ನೀಡಿದ್ದು ಈ ಬ್ಯಾಂಕುಗಳನ್ನ ಖಾಸಗಿ ಮಾಡಲು ಕೇಂದ್ರ ಮುಂದಾಗುತ್ತಿದೆ ಎಂದು ಹೇಳಬಹುದು.

ಬ್ಯಾಂಕ್ ಖಾತೆ ಇದ್ದವರು ಗೊಂದಲದಲ್ಲಿ
ಸದ್ಯ ಕೇಂದ್ರ ಸರ್ಕಾರ ಕೆಲವು ಲಾಭದಾಯಕವಲ್ಲದ ಬ್ಯಾಂಕುಗಳನ್ನ ಖಾಸಗಿ ಮಾಡಲು ತೀರ್ಮಾನವನ್ನ ಮಾಡಲು ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಜನರು ಆತಂಕಕ್ಕೆ ಒಳಗಾಗಿದ್ದರು. ಇನ್ನು ಇದರ ಬಗ್ಗೆ ಸ್ಪಷ್ಟನೆ ನೀಡಿರುವ RBI ಮತ್ತು ನೀತಿ ಆಯೋಗ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಮತ್ತು ಬ್ಯಾಂಕ್ ಖಾಸಗೀಕರಣ ನಿಮ್ಮ ವಹಿವಾಟಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. ಈಗಾಗಲೇ ಕೆಲವು ಸಾರ್ವಜನಿಕ ಬ್ಯಾಂಕುಗಳನ್ನ ವಿಲೀನ ಮಾಡಿರುವ ಕೇಂದ್ರ ಸರ್ಕಾರ ಈಗ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನ ಖಾಸಗಿ ಮಾಡಲು ತೀರ್ಮಾನವನ್ನ ಮಾಡಿದೆ.

Bank Privatization 2023
Image Credit: Businessleague

ಈ ಬ್ಯಾಂಕುಗಳು ಆಗಲ್ಲ ಖಾಸಗೀಕರಣ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, UCO ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಸಾಗರೋತ್ತರ ಬ್ಯಾಂಕುಗಳು ಖಾಸಗಿ ಆಗಲ್ಲ ಎಂದು ಕೇಂದ್ರ ಸ್ಪಷ್ಟನೆಯಲ್ಲಿ ತಿಳಿಸಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಬ್ಯಾಂಕುಗಳು ಮಾತ್ರ ಖಾಸಗಿಯಾಗಲಿದೆ ಎಂದು ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group