Priyanka Shivanna: ನಾಗಿಣಿಯಾದ ನಟಿ ಪ್ರಿಯಾಂಕಾ ಶಿವಣ್ಣ, ಫೋಟೋ ವೈರಲ್.
Actress Priyanka Shivanna In Nagapanchami Serial: ಕಿರುತೆರೆಯ ಖ್ಯಾತ ನಟಿ ಪ್ರಿಯಾಂಕಾ ಶಿವಣ್ಣ (Priyanka Shivanna) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಪ್ರಿಯಾಂಕಾ ಅಗ್ನಿಸಾಕ್ಷಿ ಧಾರವಾಹಿ ಮೂಲಕ ಚಂದ್ರಿಕಾ ಎಂಬ ವಿಲನ್ ಪಾತ್ರದಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು.
ನಟಿ ಪ್ರಿಯಾಂಕಾ ಶಿವಣ್ಣ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸೀರಿಯಲ್ ನಲ್ಲಿ ಸಹ ನಟಿಸುತ್ತಿದ್ದಾರೆ. ಕೃಷ್ಣಾ ಸುಂದರಿ, ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಇದೀಗ ಹೊಸ ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ.
ನಾಗಿಣಿಯಾದ ನಟಿ ಪ್ರಿಯಾಂಕಾ ಶಿವಣ್ಣ
ನಟಿ ಪ್ರಿಯಾಂಕಾ ಶಿವಣ್ಣ ಇತ್ತೀಚಿಗೆ ಹೊಸ ಹೊಸ ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ನಟಿ ಪ್ರಿಯಾಂಕಾ ಅವರು ಧಾರಾವಾಹಿಯಲ್ಲಿ ಅಕ್ಕನ ಪಾತ್ರ, ವಿಲನ್ ಪಾತ್ರವನ್ನು ಹೆಚ್ಚಾಗಿ ಮಾಡುತ್ತಿದ್ದರು.
ಇದೀಗ ಅವರು ನಾಗಿಣಿಯಾಗಿ ಪ್ರೇಕ್ಷಕರ ಎದುರು ಬರಲಿದ್ದಾರೆ. ನಟಿ ಪ್ರಿಯಾಂಕಾ ನಾಗಿಣಿ ವೇಷ ಹಾಕಿದ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ನಾಗಿಣಿ ಪಾತ್ರಕ್ಕೆ ಜೀವತುಂಬಲು ರೆಡಿಯಾದ ನಟಿ ಪ್ರಿಯಾಂಕಾ ಶಿವಣ್ಣ
ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿ ಜನರ ಮನ ಗೆದ್ದ ನಟಿ ಪ್ರಿಯಾಂಕಾ ಇದೀಗ ನಾಗಿಣಿ ರೂಪದಲ್ಲಿ ಮತ್ತಷ್ಟು ಅಭಿಮಾನಿಗಳನ್ನು ಪಡೆದುಕೊಳ್ಳಲು ಬರುತ್ತಿದ್ದಾರೆ.
ತೆಲುಗಿನ ನಾಗಪಂಚಮಿ ಎಂಬ ಧಾರಾವಾಹಿಗೆ ವಿಶೇಷ ಪಾತ್ರದಲ್ಲಿ ನಟಿ ಪ್ರಿಯಾಂಕಾ ಶಿವಣ್ಣ ನಟಿಸಲಿದ್ದಾರೆ. ಈ ಧಾರಾವಾಹಿಯ ಪ್ರೊಮೊ ಈಗಾಗಲೇ ಬಿಡಿಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ನಟಿ ಪ್ರಿಯಾಂಕಾ ಶಿವಣ್ಣ ಅವರು ನಾಗಿಣಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.