Property Documents: ಡಿ. 1 ರಿಂದ ಆಸ್ತಿ ಪತ್ರಗಳಿಗೆ ಜಾರಿಗೆ ಬರಲಿದೆ ಹೊಸ ನಿಯಮ, ಸ್ವಂತ ಆಸ್ತಿ ಮತ್ತು ಜಮೀನು ಇದ್ದವರಿಗೆ ಹೊಸ ರೂಲ್ಸ್.

ಬ್ಯಾಂಕ್ ನಲ್ಲಿ ಸ್ವಂತ ಆಸ್ತಿ ಮತ್ತು ಜಮೀನು ಅಡಮಾನವಾಗಿರಿಸಿದವರಿಗೆ RBI ಮಹತ್ವದ ಮಾಹಿತಿ ಹೊರಡಿಸಿದೆ.

Property Documents Rules Change: ದೇಶದಲ್ಲಿ Reserve Bank Of India ಅನೇಕ ರೀತಿಯ ಬ್ಯಾಂಕಿಂಗ್ ನಿಯಮವನ್ನು ಬದಲಿಸಿದೆ. RBI ಇತ್ತೀಚಿಗೆ ಗ್ರಾಹಕರಿಗೆ ನೀಡುವ ಸಾಲದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈ ವರೆಗೆ ಗ್ರಾಹಕರಿಗೆ ಎದುರಿಗಿರುವ ಕೆಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು RBI ಹೊಸ ಹೊಸ ನಿಯಮ ರೂಪಿಸುತ್ತಿದೆ.

ಇದೀಗ RBI ಬ್ಯಾಂಕ್ ನಲ್ಲಿ ಇರಿಸಿದ ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಬ್ಯಾಂಕ್ ನಲ್ಲಿ ಸ್ವಂತ ಆಸ್ತಿ ಮತ್ತು ಜಮೀನು ಅಡಮಾನವಾಗಿರಿಸಿದವರಿಗೆ RBI ಮಹತ್ವದ ಮಾಹಿತಿ ಹೊರಡಿಸಿದೆ. ಈ ಮೂಲಕ ಬ್ಯಾಂಕುಗಳಿಗೆ ಸಾಲ ಮರುಪಾವತಿಗೆ ಹೊಸ ನಿಯಮವನ್ನು ಪರಿಚಯಿಸಿದೆ.

Property Documents Rules Change
Image Credit: Informalnewz

ಸಾಲ ಮರುಪಾವತಿಗೆ RBI ಹೊಸ ನಿಯಮ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಇನ್ನು ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅಡಮಾನವಾಗಿ ಇರಿಸಿಕೊಂಡ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸಬೇಕಿದೆ.

ಡಿ. 1 ರಿಂದ ಆಸ್ತಿ ಪತ್ರಗಳಿಗೆ ಜಾರಿಗೆ ಬರಲಿದೆ ಹೊಸ ನಿಯಮ
December 1 ರಿಂದ RBI ನ ಈ ಹೊಸ ನಿಯಮ ಜಾರಿಗೆ ಬರಲಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎಂದು ಆದೇಶ ಹೊರಡಿಸಿದೆ. ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

Property Documents Rules
Image Credit: Goodreturns

ಸ್ವಂತ ಆಸ್ತಿ ಮತ್ತು ಜಮೀನು ಇದ್ದವರಿಗೆ ಹೊಸ ರೂಲ್ಸ್
ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ. ನಿಗದಿತ ದಿನಗಳ ಒಳಗೆ ಬ್ಯಾಂಕ್ ಸಾಲಗಾರರಿಗೆ Property Documents ಗಳನ್ನೂ ನೀಡದಿದ್ದರೆ ದಿನಕ್ಕೆ 5000 ರೂ ದಂಡವನ್ನ ನೀಡಬೇಕಾಗುತ್ತದೆ.

Join Nadunudi News WhatsApp Group

ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ 30 ದಿನಗಳ ವಿಸ್ತರಣೆಯನ್ನು ನೀಡಲಾಗುತ್ತದೆ. RBI ಈ ಸೂಚನೆಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 21, 35A ಮತ್ತು 56, Reserve Bank Of India Act 1934 ರ ಸೆಕ್ಷನ್ 45JA ಮತ್ತು 45L ಮತ್ತು National Housing Bank Act 1987 ರ ಸೆಕ್ಷನ್ 30A ಅಡಿಯಲ್ಲಿ ನೀಡಿದೆ.

Join Nadunudi News WhatsApp Group