Child Adoption: ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಪಾಲು ಸಿಗುತ್ತಾ, ಕಾನೂನು ಇದರ ಬಗ್ಗೆ ಹೇಳುವುದೇನು.

ದತ್ತು ಮಕ್ಕಳಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ, ಅಸ್ತಿ ವಿಭಜನೆಯ ಬಗ್ಗೆ ಕಾನೂನು ಹೇಳುವುದೇನು ತಿಳಿಯಿರಿ.

Property Right For an Adopted Child: ದೇಶದೆಲ್ಲೆಡೆ ಆಸ್ತಿಯ (Property) ವಿಚಾರವಾಗಿ ಅನೇಕ ಪ್ರಕರಣಗಳು ನಡೆಯುತ್ತಿದೆ. ರಕ್ತ ಸಂಬಂಧಗಳ ನಡುವೆಯೇ ಆಸ್ತಿಯ ವಿಚಾರವಾಗಿ ವಿವಾದಗಳು ಉಂಟಾಗುತ್ತಿದೆ. ಇನ್ನು ಭಾರತದ ಕಾನೂನಿನಲ್ಲಿ ಆಸ್ತಿಯ ಹಕ್ಕುಗಳ ಬಗ್ಗೆ ಸಾಕಷ್ಟು ತೀರ್ಪುಗಳನ್ನು ನೀಡಲಾಗಿದೆ.

ಮಕ್ಕಳಿಗೆ ಹೆತ್ತವರ ಆಸ್ತಿಯಲ್ಲಿ ಎಷ್ಟು ಪಾಲು ಇರುತ್ತದೆ ಎನ್ನುವ ಬಗ್ಗೆ ಕಾನೂನು ಈಗಾಗಲೇ ಮಾಹಿತಿಯನ್ನು ನೀಡಿದೆ. ಇದೀಗ ದತ್ತು ಮಕ್ಕಳಿಗೆ (Adopted Child) ದತ್ತು ಪಡೆದವರ ಆಸ್ತಿಯಲ್ಲಿ ಎಷ್ಟರ ಮಟ್ಟಿಗೆ ಪಾಲು ಇರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Property Right For an Adopted Child
Image Credit: orfonline

ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಪಾಲು ಎಷ್ಟು
ಭಾರತೀಯ ಕಾನೂನಿನ ಪ್ರಕಾರ ಹೆತ್ತವರ ಆಸ್ತಿಯಲ್ಲಿ ಮಕ್ಕಳಿಗೆ ಸಮಪಾಲು ನೀಡಲಾಗುತ್ತದೆ. ಹೆಣ್ಣು ಮಗುವಿಗೂ ಕೂಡ ತಂದೆ ತಾಯಿಯ ಆಸ್ತಿಯ ಸಮಪಾಲನ್ನು ನೀಡಬೇಕು ಎಂದು ಕೋರ್ಟ್ ಈಗಾಗಲೇ ಆದೇಶವನ್ನು ಹೊರಡಿಸಿದೆ.

ಇನ್ನು ದೇಶದೆಲ್ಲೆಡೆ ಸಾಕಷ್ಟು ಜನರು ಮಕ್ಕಳನ್ನು ದತ್ತು ಪಡೆಯುತ್ತಾರೆ. ಈ ಹಿಂದೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನು ಇತ್ತು. ಆದರೆ ಇದೀಗ ನ್ಯಾಯಾಲಯ ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಆದೇಶವನ್ನು ಹೊರಡಿಸಿದೆ.

Find out what the law says about property division, how much share in the property the adopted children have.
Image credit: inventiva

ದತ್ತು ಮಕ್ಕಳು ಕಾನೂನು ಬದ್ದ ಉತ್ತರಾಧಿಕಾರಿಯಾಗುತ್ತಾರೆ
ಕಾನೂನಿನ ಪ್ರಕಾರ ಮಕ್ಕಳನ್ನು ದತ್ತು ಪಡೆದ ಮೇಲೆ ಮಗ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುತ್ತಾನೆ. ಹಾಗೆಯೇ ತಾಯಿ ಕೂಡ ದತ್ತು ಮಗನ ಆಸ್ತಿಯಲ್ಲಿ ಹಕ್ಕುದಾರಳಾಗಿರುತ್ತಾಳೆ. ದತ್ತು ಮಕ್ಕಳಿಗೆ ದತ್ತು ಪಡೆದವರ ಆಸ್ತಿಯಲ್ಲಿ ಪಾಲು ಇರುತ್ತದೆ. ದತ್ತು ಪಡೆದ ಮಗು ಹೆಣ್ಣಾಗಲಿ ಗಂಡಾಗಲಿ ದತ್ತು ಪಡೆದವರ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿರುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ.

Join Nadunudi News WhatsApp Group

Join Nadunudi News WhatsApp Group