land Registration: ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ, ಜೇಬಿಗೆ ಬಿತ್ತು ಕತ್ತರಿ.
ಆಸ್ತಿ ಖರೀದಿ ಮತ್ತು ಮಾರಾಟ ವಿಷಯವಾಗಿ ಕೇಂದ್ರದಿಂದ ಹೊಸ ಆದೇಶ ಪ್ರಕಟ.
Property Purchase Price Hike: ಸಾಮನ್ಯವಾಗಿ ಜನರು ತಮ್ಮ ಬಳಿ ಇರುವ ಉಳಿತಾಯದ ಹಣವನ್ನು ಆಭರಣ ಖರೀದಿ, ಸಣ್ಣ ಉಳಿತಾಯ ಯೋಜನೆಯಲ್ಲಿನ ಹೂಡಿಕೆ ಅಥವಾ ಆಸ್ತಿ ಖರೀದಿ ಮಾಡಲು ಬಯಸುತ್ತಾರೆ. ಹೆಚ್ಚಿನ ಜನರು ತಮ್ಮ ಉಳಿತಾಯದ ಹಣವನ್ನು Property ಖರೀದಿಗೆ ವ್ಯಯಿಸುತ್ತಾರೆ.
ಹಣ ಇದ್ದ ಸಮಯದಲ್ಲಿ ಆಸ್ತಿಯನ್ನು ಖರೀದಿಸಿದರೆ (Land Purchase) ಮುಂದೆ ಉತ್ತಮ ಬೆಲೆಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಜನರು ಹೆಚ್ಚಾಗಿ ಆಸ್ತಿ ಖರೀದಿಗೆ ಮನಸ್ಸು ಮಾಡುತ್ತಾರೆ. ಇನ್ನು ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಕೂಡ ಕಾನೂನಿನಲ್ಲಿ ಅನೇಕ ನಿಯಮಗಳಿವೆ. ಅಧಿಕಾರ ಇಲ್ಲದವರು ಯಾವುದೇ ಆಸ್ತಿಯನ್ನು ಮಾರಾಟ ಮಾಡಬಾರದು, ಆಸ್ತಿ ಖರೀದಿಯಲ್ಲಿ ಆಗುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ ವಿವಿಧ ರೀತಿಯ ಆಸ್ತಿಯ ಕಾನೂನನ್ನು ಜಾರಿಗೊಳಿಸಲಾಗಿದೆ.
ಆಸ್ತಿ ಖರೀದಿ ನಿಯಮದಲ್ಲಿ ಬದಲಾವಣೆ
ಇನ್ನು ಯಾವುದೇ ಆಸ್ತಿಯನ್ನು ಖರೀದಿಸುವ ಮುನ್ನ ಆಸ್ತಿ ಖರೀದಿಯ ನಿಯಮವನ್ನು ತಿಳಿದಿರಬೇಕು. ಆಸ್ತಿ ಖರೀದಿಯ ನಿಯಮದ ಜೊತೆ ಆಸ್ತಿ ಮಾರಾಟ ಮಾರುವವರು ಕಾನೂನಿನ ನಿಯಮದ ಪ್ರಕಾರವೇ ಆಸ್ತಿಯನ್ನು ಮಾರಾಟ ಮಾಡಬೇಕು.
ಇನ್ನು ಕೆಲವೊಮ್ಮೆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇಲ್ಲದವರು ಆಸ್ತಿಯನ್ನು ಮಾರಾಟ ಮಾಡಿರುವ ಉದಾಹರಣೆಗಳು ಇವೆ. ಆಸ್ತಿ ಖರೀದಿಯಲ್ಲಿ ಮೋಸ ಹೋಗಿರುವ ಸಾಕಷ್ಟು ಪ್ರಕರಣಗಳಿವೆ. ಹೀಗಾಗಿ ಆಸ್ತಿಯ ಮಾರಾಟ ಮತ್ತು ಖರೀದಿಯ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ದೃಷ್ಟಿಯಿಂದ ಆಸ್ತಿಯ ಖರೀದಿ ಮತ್ತು ಮಾರಾಟದಲ್ಲಿ ನಿಯಮವನ್ನು ಅಳವಡಿಸಲಾಗಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ದಿಡೀರ್ ಏರಿಕೆ
ರಾಜ್ಯ ಸರ್ಕಾರ ಈಗಾಗಲೇ ಆಸ್ತಿ ಖರೀದಿಯ ನಿಯಮವನ್ನು ಜಾರಿಗೊಳಿಸಿದೆ. ಇದೀಗ ಮತ್ತೆ ಆಸ್ತಿ ಖರೀದಿಯ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ ಮುದ್ರಾಣಾಂಕ ಶುಲ್ಕ ಜಾಸ್ತಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಆಸ್ತಿ ಖರೀದಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಲಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅಕ್ಟೊಬರ್ ನಲ್ಲಿ ಏರಿಕೆಯಾಗಲಿದೆ. ಮುದ್ರಾಣಾಂಕ ಶುಲ್ಕದ ಹೆಚ್ಚಳವು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ತಿ ಖರೀದಿಯ ಬೆಲೆ ಶೇ. 30 ರಿಂದ 40 ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಭೂಮಿ, ನಿವೇಶನ, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳ ದರ ಪರಿಷ್ಕರಣೆಯ ಬಗ್ಗೆ ಸರ್ಕಾರ ನಿರ್ಧರಿಸಿದೆ.