Wife’s Property Right: ಮದುವೆಯ ನಂತರ ಗಂಡನ ಆಸ್ತಿಯಲ್ಲಿ ಪಾಲು ಕೇಳುವ ಮಹಿಳೆಯರಿಗೆ ಹೊಸ ನಿಯಮ, ಕೋರ್ಟ್ ಆದೇಶ.
ಇದೀಗ ಭಾರತೀಯ ಕಾನೂನಿನ ಪ್ರಕಾರ ಹೆಂಡತಿಗೆ ಗಂಡನ ಮನೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎನ್ನುವ ಬಗ್ಗೆ ತಿಳಿಯೋಣ.
Property Rights Of Wife in Husband’s Property: ಇತ್ತೀಚಿನ ದಿನಗಳಲ್ಲಿ ಆಸ್ತಿ ಹಂಚಿಕೆಯ ಕುರಿತು ಅನೇಕ ತಿದ್ದುಪಡಿಯನ್ನು ತರಲಾಗಿದೆ. ಭಾರತೀಯ ಕಾನೂನಿನಲ್ಲಿ ಆಸ್ತಿ ವಿಚಾರವಾಗಿ ಅನೇಕ ನಿಯಮಗಳನ್ನು ರೂಪಿಸಲಾಗಿದೆ. ಇನ್ನು ಪತಿ ಪತ್ನಿಯ ಆಸ್ತಿ ಹಂಚಿಕೆಯ ಹಕ್ಕಿನ ಕುರಿತು ಭಾರತೀಯ ಕಾನೂನಿನಲ್ಲಿ ವಿವಿಧ ರೀತಿಯ ನಿಯಮಗಳಿವೆ.
ಪತಿಯ ಆಸ್ತಿಯ ಮೇಲೆ ಪತ್ನಿಯ ಹಕ್ಕು ಹಾಗೂ ಪತ್ನಿಯ ಆಸ್ತಿಯ ಮೇಲೆ ಪತಿಯ ಹಕ್ಕಿನ ಕುರಿತು ಕಾನೂನಿನಲ್ಲಿ ಅನೇಕ ತಿದ್ದುಪಡಿಗಳಿವೆ. ಇದೀಗ ಭಾರತೀಯ ಕಾನೂನಿನ ಪ್ರಕಾರ ಹೆಂಡತಿಗೆ ಗಂಡನ ಮನೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.
ಭಾರತೀಯ ಕಾನೂನಿನಲ್ಲಿ ಹೆಣ್ಣಿಗೆ ಆಸ್ತಿಯ ಹಕ್ಕು ಎಷ್ಟಿದೆ..?
ಹೆಣ್ಣು ಮಕ್ಕಳಿಗೆ ಭಾರತೀಯ ಕಾನೂನು ಆಸ್ತಿಯ ಸಂಪೂರ್ಣ ಅಧಿಕಾರವನ್ನು ನೀಡಿದೆ. ಗಂಡು ಮಕ್ಕಳು ಆಸ್ತಿಯ ಹಕ್ಕು ಎಷ್ಟಿರುತ್ತದೆ ಅಷ್ಟೇ ಹಕ್ಕು ಹೆಣ್ಣು ಮಗಳು ಕೂಡ ಹೊಂದುತ್ತಾಳೆ. ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಸಮನಾದ ಪಾಲು ಕೊಡದೆ ಇರುವುದು ಸಹ ಇತ್ತೀಚಿಗೆ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಆಸ್ತಿಯ ವಿಚಾರವಾಗಿ ಕಾನೂನಿನ ಮೊರೆ ಹೋಗುವ ಮೂಲಕ ಕಾನೂನಿನ ಮುಖಾಂತರ ಆಸ್ತಿ ಅಧಿಕಾರವನ್ನು ಪಡೆದುಕೊಳ್ಳಬಹುದು.
ಮದುವೆಯ ನಂತರ ಗಂಡನ ಮನೆಯ ಆಸ್ತಿಯಲ್ಲಿ ಹೆಂಡತಿಯ ಆಸ್ತಿಯ ಪಾಲೆಷ್ಟು..?
ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ತಮ್ಮ ಸಹೋದರರಿಗೆ ಎಷ್ಟು ಪಾಲು ಇದೆಯೋ ಅದೇ ರೀತಿ ಅವರಿಗೆ ಸಹ ಇರುತ್ತದೆ. ಆದರೆ ಗಂಡನ ಮನೆಯ ಆಸ್ತಿಯ ವಿಚಾರದಲ್ಲಿ ಈ ನಿಯಮ ಸ್ವಲ್ಪ ಬದಲಾವಣೆ ಇದೆ. ಗಂಡನ ಮನೆಯ ಆಸ್ತಿಯು ಪಿತ್ರಾಜ್ರಿತ ಆಸ್ತಿಯಾಗಿದ್ದರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಇರುವುದಿಲ್ಲ.
ತನ್ನ ಗಂಡನಿಗೆ ಅವರ ಮನೆಯಲ್ಲಿ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಪಾಲಿನ ಅಧಿಕಾರ ಹೆಂಡತಿಯದ್ದಾಗಿರುತ್ತದೆ. ಗಂಡನ ಮನೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿ ಪಾಲನ್ನು ಕೇಳುವಂತಿಲ್ಲ. ಆದರೆ ಗಂಡನೇ ಸ್ವಂತ ಆಸ್ತಿ ಮಾಡಿದ್ದರೆ ಅದು ಹೆಂಡತಿಯ ಹಕ್ಕಾಗಿರುತ್ತದೆ. ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಂಡತಿ ಸಂಪೂರ್ಣ ಅಧಿಕಾರವನ್ನು ಹೊಂದುತ್ತಾಳೆ. ಪತಿಯ ಮರಣದ ನಂತರ ಪತ್ನಿಯು ತನ್ನ ಗಂಡನ ಆಸ್ತಿಯ ಅಧಿಕಾರವನ್ನು ಪಡೆಯುತ್ತಾಳೆ ಎನ್ನಬಹುದು.