Property Tax: ಪಿತ್ರಾರ್ಜಿತ ಆಸ್ತಿ ಪಡೆಯುವವರಿಗೆ ಬಂತು ಹೊಸ ತೆರಿಗೆ ನಿಯಮ, ಇಂತವರು ಕಟ್ಟಬೇಕು ಹೆಚ್ಚು ತೆರಿಗೆ.
ಪಿತ್ರಾರ್ಜಿತವಾಗಿ ಪಡೆಯುವ ಇಂತಹ ಆಸ್ತಿಗಳಿಗೆ ತೆರಿಗೆ ಪಾವತಿ ಮಾಡಬೇಕು.
Propety Tax Detailsದೇಶದಲ್ಲಿ ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನಿಯಮಗಳು ಜಾರಿಯಲ್ಲಿ ಇದೆ . ಹೌದು ಸಾಕಷ್ಟು ಇತಿಹಾಸಗಳಿಂದ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ತಕರಾರು ನಡೆಯುತ್ತಲೇ ಇರುತ್ತದೆ.
ಆಸ್ತಿ ವರ್ಗಾವಣೆ ವಿಚಾರವಾಗಿ ಕೋರ್ಟ್ ಎಷ್ಟೇ ಆದೇಶವನ್ನ ಹೊರಡಿಸಿದರು ಕೂಡ ಜನರು ಆಸ್ತಿ ವರ್ಗಾವಣೆ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಯಾಕಷ್ಟು ಜನರು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನ ಸರ್ಕಾರದ ಮುಂದೆ ಇಟ್ಟಿದ್ದು ಈಗ ಸರ್ಕಾರ ಅದಕ್ಕೆ ಉತ್ತರವನ್ನ ನೀಡಿದೆ.
ಪಿತ್ರಾರ್ಜಿತ ಆಸ್ತಿ ಪಡೆಯುವ ಜನರಿಗೆ ತೆರಿಗೆ ನಿಯಮ
ದೇಶದಲ್ಲಿ ಪಿತ್ರಾರ್ಜಿತ ಆಸ್ತಿ ತಲೆಮಾರಿಗೆ ತಕ್ಕಂತೆ ವರ್ಗಾವಣೆ ಆಗುತ್ತದೆ. ಅದೇ ರೀತಿಯಲ್ಲಿ ಜನರು ಆಸ್ತಿಯನ್ನ ಕೊಳ್ಳುವ ಮತ್ತು ಅಥವಾ ಮಾರಾಟ ಮಾಡುವ ಸಮಯದಲ್ಲಿ ಕೆಲವು ತೆರಿಗೆ ನಿಯಮವನ್ನ ಪಾಲನೆ ಮಾಡುವುದು ಅತೀ ಅವಶ್ಯಕ ಕೂಡ ಆಗಿದೆ ಎಂದು ಹೇಳಬಹುದು. ಪಿತ್ರಾರ್ಜಿತ ಆಸ್ತಿಯನ್ನ ಪಡೆಯುವ ಜನರು ಅದಕ್ಕೆ ತೆರಿಗೆಯನ್ನ ಪಾವತಿ ಮಾಡಬೇಕಾ ಅಥವಾ ಬೇಡವಾ ಅನ್ನುವ ಪ್ರಶ್ನೆ ಈಗ ಎದುರಾಗಿದ್ದು ಸದ್ಯ ಈ ಪ್ರಶ್ನೆಗೆ ತೆರಿಗೆ ಇಲಾಖೆ ಉತ್ತರವನ್ನ ನೀಡಿದೆ.
ಪಿತ್ರಾರ್ಜಿತ ಆಸ್ತಿಗೆ ತೆರಿಗೆ ನಿಯಮ ಹೇಗೆ ಅನ್ವಯ
ಹೌದು ಜನರು ಪಿತ್ರಾರ್ಜಿತವಾಗಿ, ಅಂದರೆ ತಾತ ಮತ್ತು ಮುತ್ತಾತರಿಂದ ಪಾಡೆಯುವ ಆಸ್ತಿಗೆ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ, ಆದರೆ ಆ ಆಸ್ತಿಯನ್ನ ಮಾರಾಟ ಮಾಡುವ ಸಮಯದಲ್ಲಿ ಕ್ಯಾಪಿಟಲ್ ಗೇಯ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ತಂದೆ, ತಾತ ಮತ್ತು ಮುತ್ತಾತರಿಂದ ಬಂದ ಆಸ್ತಿಯನ್ನ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣನೆ ಮಾಡಲಾಗುತ್ತದೆ, ಆದರೆ ತಾಯಿಯಿಂದ ಬಂದ ಆಸ್ತಿಯನ್ನ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ.
ಪಿತ್ರಾರ್ಜಿತ ಆಸ್ತಿಗೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ
ಜನರು ಅನುವಂಶಿಕವಾಗಿ ಬಂದ ಆಸ್ತಿಗಳಿಗೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ, ಆದರೆ ಅದರಿಂದ ಬರುವ ಆದಾಯಕ್ಕೆ ಕ್ಯಾಪಿಟಲ್ ಗೇಯ್ಸ್ ಟ್ಯಾಕ್ಸ್ ಅಡಿಯಲ್ಲಿ ತೆರಿಗೆಯನ್ನ ಕಟ್ಟಬೇಕಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ಆಸ್ತಿಯನ್ನ ಮಾರಾಟ ಮಾಡಲು ಬಯಸಿದರೆ ನೀವು ಅದಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇನ್ನು ತೆರಿಗೆ ನೀವು ಎಷ್ಟು ಕಾಲ ಆಸ್ತಿಯ ಒಡೆತನದಲ್ಲಿ ಇದ್ದಿದ್ದಿರಿ ಅನ್ನುವುದರ ಮೇಲೆ ನಿರ್ಧಾರ ಆಗುತ್ತದೆ.
ನೀವು ದೀರ್ಘಕಾಲ ಆಸ್ತಿಯನ್ನ ಒಡೆತನದಲ್ಲಿ ಇದ್ದರೆ ಅಧಿಕ ತೆರಿಗೆ ಮತ್ತು ಕಡಿಮೆ ಸಮಯ ಒಡೆತನದಲ್ಲಿ ಇದ್ದರೆ ಕಡಿಮೆ ತೆರಿಗೆ ಪಾವತಿ ಮಾಡಬೇಕು. ಆದರೆ ಈ ನಿಯಮ ಎಲ್ಲಾ ಸಮಯದಲ್ಲಿ ಅನ್ವಯ ಆಗುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟನೆಯಲ್ಲಿ ತಿಳಿಸಿದೆ.