Property Will: ಆಸ್ತಿ ವಿಲ್ ಬರೆಯುವುದರಿಂದ ಏನೇನು ಲಾಭ…? ಸುರಕ್ಷತೆಯ ಉದ್ದೇಶದಿಂದ ಇಂದೇ ವಿಲ್ ಮಾಡಿಸಿ.
ಆಸ್ತಿಗಳಿಗೆ ವಿಲ್ ಬರೆಸುವುದರಿಂದ ಆಗುವ ಲಾಭಗಳು ಏನು.
Property Will Benefit: ಭಾರತೀಯ ಕಾನೂನಿನಲ್ಲಿ Property ಸಂಬಂಧಿತ ಸಾಕಷ್ಟು ನಿಯಮಗಳಿವೆ. ಯಾವುದೇ ವ್ಯಕ್ತಿಯು ಆಸ್ತಿ ಹಂಚಿಕೊಳ್ಳುವ ಸಮಯದಲ್ಲಿ ಕಾನೂನಿನ ನಿಯಮವನ್ನು ಅನುಸರಿಸಬೇಕಾಗುತ್ತದೆ. ಇತ್ತೀಚೆಗಂತೂ Indian Law ಆಸ್ತಿ ವಿಚಾರವಾಗಿ ಸಾಕಷ್ಟು ತಿದ್ದುಪಡಿಯನ್ನು ಜಾರಿಗೊಳಿಸಿದೆ. ಅದರಲ್ಲೂ ಹೆಣ್ಣು ಮಕ್ಕಳ ಆಸ್ತಿ ಹಂಚಿಕೆಯ ವಿಚಾರವಾಗಿ ಭಾರತೀಯ ಕಾನೂನಿನಲ್ಲಿ ಅನೇಕ ತಿದ್ದುಪಡಿಗಳಿವೆ.
ಪೋಷಕರ ಆಸ್ತಿಗೆ ಮಕ್ಕಳು ಸಂಪೂರ್ಣ ಅಧಿಕಾರವನ್ನು ಪಡೆಯುತ್ತಾರೆ. ಮಕ್ಕಳು ಹೆಣ್ಣಾಗಲಿ ಅಥವಾ ಗಂಡಾಗಲಿ ತಂದೆ ತಾಯಿಯ ಆಸ್ತಿಯ ಮೇಲೆ ಇಬ್ಬರು ಕೂಡ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ. ಇನ್ನು ಪಿತ್ರಾರ್ಜಿತ ಆಸ್ತಿಯ ಮೇಲು ಹೆಣ್ಣು ಮಕ್ಕಳು ಗಂಡಿನಷ್ಟೇ ಅಧಿಕಾರವನ್ನು ಹೊಂದಿರುತ್ತಾರೆ.
ಪೋಷಕರ ಆಸ್ತಿಯ ಮೇಲೆ ಮಕ್ಕಳ ಅಧಿಕಾರ
ಮಕ್ಕಳು ಹುಟ್ಟಿನಿಂದಲೇ ತಂದೆ ತಾಯಿಯ ಆಸ್ತಿಯ ಮೇಲೆ ಅಧಿಕಾರವನ್ನು ಪಡೆಯುತ್ತಾರೆ. ಮಕ್ಕಳ ಅನುಮತಿ ಇಲದೆ ತಂದೆ ತಾಯಿಯ ಆಸ್ಟ್ರಿಯನ್ನು ಯಾರು ಕೂಡ ಮಾರಾಟ ಮಾಡುವಂತಿಲ್ಲ. ಇನ್ನು ಆಸ್ತಿಯ ಮೇಲೆ ಅಧಿಕಾರ ಯಾವಾಗ ಇರುವುದಿಲ್ಲವೆಂದರೆ ಆಸ್ತಿಯ ಒಡತನವನ್ನು ಹೊಂದಿರುವವರು ಆಸ್ತಿ ಇಂತವರಿಗೆ ಸೇರಬೇಕು ಎನ್ನುವ Will ಮಾಡಿ ಇಟ್ಟರೆ ಮಕ್ಕಳು ಆಸ್ತಿಯ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ.
ಆಸ್ತಿ ವಿಲ್ ಬರೆಯುವುದರಿಂದ ಏನೇನು ಲಾಭ…?
ಇನ್ನು ಯಾರಿಗೆ ತಮ್ಮ ಆಸ್ತಿ ಸೇರಬೇಕು ಎನ್ನುವುದು ಆಸ್ತಿಯ ಮಾಲೀಕರು ನಿರ್ಧರಿಸಲು ಈ Will ಸಹಾಯವಾಗುತ್ತದೆ. ತಮಗೆ ಇಷ್ಟವಾದವರ ಹೆಸರಿಗೆ Will ಮಾಡಿ ಇರುವುದರಿಂದ ಮಾಲೀಕರ ನಿಧನದ ನಂತರ Will ನಲ್ಲಿರುವವರು ಆಸ್ತಿಯ ಮೇಲೆ ಅಧಿಕಾರವನ್ನು ಅವರು ಸುಲಭವಾಗಿ ಪಡೆಯಬಹುದು. ಇನ್ನು ಆಸ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಸರಿ ಇಲ್ಲದಿದ್ದರೆ ಆಸ್ತಿ ಕಾನೂನಿನ ವಿವಾದಕ್ಕೆ ಗುರಿಯಾಗುತ್ತದೆ.
Will ಮಾಡಿಸುವುದರಿಂದ ಆಸ್ತಿಗೆ ಹೆಚ್ಚಿನ ಭದ್ರತೆ ಸಿಗಲಿದೆ
ಅಪ್ರಾಪ್ತ ವಾರಸುದಾರರ ಹಿತಾಸಕ್ತಿಗಳನ್ನು ಕಾಪಾಡುವುದರಿಂದ ಹಿಡಿದು ನಿಮ್ಮ ಆಸ್ತಿ ಯಾರಿಗೆ ಸೇರಿಬೇಕು ಎಂದು Will ನಲ್ಲಿ ಬರೆದಿಡುವುದು ಉತ್ತಮ. ಉತ್ತರಾಧಿಕಾರಿಗಳ ನಡುವೆ ಆಸ್ತಿ ಹಂಚಿಕೆಯಲ್ಲಿ ಭಿನ್ನಾಭಿಪ್ರಯ ಉಂಟಾದಾಗ Will ಸಹಾಯವಾಗುತ್ತದೆ. ಇನ್ನು ವ್ಯಕ್ತಿಯು Will ಅನ್ನು ಮಾಡದೇ ಮರಣ ಹೊಂದಿದರೆ ಅಂತವರ ಆಸ್ತಿಯು ಭಾರತೀಯ ಕಾನೂನಿನ ಪ್ರಕಾರ ಹಂಚಿಕೆಯಾಗುತ್ತದೆ. ಇನ್ನು Will ಮಾಡಿಸುವುದರಿಂದ ಆಸ್ತಿಯ ಭದ್ರತೆಯನ್ನು ಕಾಪಾಡಿಕೊಳ್ಳಬಹುದು.