Property Will: ಹಿರಿಯರು ಮಾಡಿದ ಆಸ್ತಿ ವಿಲ್ ಬದಲಾಯಿಸುವುದು ಹೇಗೆ…? ಕಾನೂನು ಹೇಳುವುದೇನು…?
ಒಮ್ಮೆ ವಿಲ್ ಮಾಡಿದ ನಂತರ ಅದನ್ನು ಮತ್ತೆ ಬದಲಿಸಬಹುದೇ..?
Property Will Changes Process: ಭಾರತೀಯ ಕಾನೂನಿನಲ್ಲಿ Property ಸಂಬಂಧಿತ ಸಾಕಷ್ಟು ನಿಯಮಗಳಿವೆ. ಯಾವುದೇ ವ್ಯಕ್ತಿಯು ಆಸ್ತಿ ಹಂಚಿಕೊಳ್ಳುವ ಸಮಯದಲ್ಲಿ ಕಾನೂನಿನ ನಿಯಮವನ್ನು ಅನುಸರಿಸಬೇಕಾಗುತ್ತದೆ. ಇತ್ತೀಚೆಗಂತೂ Indian Law ಆಸ್ತಿ ವಿಚಾರವಾಗಿ ಸಾಕಷ್ಟು ತಿದ್ದುಪಡಿಯನ್ನು ಜಾರಿಗೊಳಿಸಿದೆ.
ಇನ್ನು ಯಾರಿಗೆ ತಮ್ಮ ಆಸ್ತಿ ಸೇರಬೇಕು ಎನ್ನುವುದು ಆಸ್ತಿಯ ಮಾಲೀಕರು ನಿರ್ಧರಿಸಲು ಈ Will ಸಹಾಯವಾಗುತ್ತದೆ. ತಮಗೆ ಇಷ್ಟವಾದವರ ಹೆಸರಿಗೆ Will ಮಾಡಿ ಇರುವುದರಿಂದ ಮಾಲೀಕರ ನಿಧನದ ನಂತರ Will ನಲ್ಲಿರುವವರು ಆಸ್ತಿಯ ಮೇಲೆ ಅಧಿಕಾರವನ್ನು ಅವರು ಸುಲಭವಾಗಿ ಪಡೆಯಬಹುದಾಗಿದೆ.
ಒಮ್ಮೆ ವಿಲ್ ಮಾಡಿದ ನಂತರ ಅದನ್ನು ಮತ್ತೆ ಬದಲಿಸಬಹುದೇ..?
ನಮ್ಮ ತಾಯಿ ತನ್ನ ಸ್ವತ್ತುಗಳನ್ನು ನನ್ನ ತಮ್ಮನಿಗೆ ವಿಲ್ ಮಾಡಿದ್ದರು. ಈಗ ನನ್ನ ತಮ್ಮ ಅವರ ಮೇಲೆ ತುಂಬಾ ದೌರ್ಜನ್ಯ ಮಾಡುತ್ತಿದ್ದಾನೆ. ಈಗ ಅವರು ಆ Will ಅನ್ನು ಬದಲಿಸಬೇಕೆಂದುಕೊಂಡಿದ್ದಾರೆ. ಬದಲಿಸಲು ಸಾಧ್ಯವೇ..? ತನ್ನ ಆಸ್ತಿಗಳಲ್ಲಿ ಒಂದನ್ನು ಮಾರಿ ಆ ಹಣವನ್ನು ಜೀವನೋಪಾಯಕ್ಕೆ ಬಳಸಬಹುದೇ..?
ಹೌದು ಒಬ್ಬ ವ್ಯಕ್ತಿ ತನ್ನ ಅಸ್ಥಿಯ ಮೇಲೆ ಎಷ್ಟು ಬಾರಿಯಾದರೂ ವಿಲ್ ಮಾಡಬಹುದು. ಆ ವ್ಯಕ್ತಿ ಮಾಡಿದ ಕೊನೆಯ ವಿಲ್ ಮಾತ್ರ ಊರ್ಜಿತವಾಗಿರುತ್ತದೆ. ಒಮ್ಮೆ ಮಾಡಿದ Will ಅನ್ನು ಬದಲಾಯಿಸಬಹುದು ಅಥವಾ ಅದನ್ನು ರದ್ದು ಮಾಡಬಹುದಾಗಿದೆ. ವಿಲ್ ಅನ್ನು ರದ್ದು ಮಾಡಿ ಹೊಸ Will ಮಾಡಿದರೆ, ಹೊಸ ವಿಲ್ ನಲ್ಲಿ ಯಾರಿಗೆ ಆಸ್ತಿ ಸೇರಬೇಕು ಅಂದುಕೊಂಡಿದ್ದರೋ ಆ ವ್ಯಕ್ತಿಗೆ ಆಸ್ತಿ ಸೇರುತ್ತದೆ. ಒಂದು ವೇಳೆ ವಿಲ್ ರದ್ದು ಮಾಡಿ ಮತ್ತೊಂದು ವಿಲ್ ಬರೆಯದೆ ಸತ್ತರೆ ಮೊದಲು ಮಾಡಿದ ವಿಲ್ ಊರ್ಜಿತವಾಗಿರುತ್ತದೆ. Will ಮಾಡಿದ ನಂತರವೂ ಆಸ್ತಿಯ ಮಾಲಿಕನಿಗೆ ಆಸ್ತಿಯನ್ನು ಮಾರುವ ಹಕ್ಕಿರುತ್ತದೆ.
ಹೀಗಾಗಿ ನಿಮ್ಮ ತಾಯಿ ಹೆದರುವ ಅವಶ್ಯಕತೆ ಇರುವುದಿಲ್ಲ. ಈ ಹಿಂದೆ ಮಾಡಿರುವ ವಿಲ್ ರದ್ದು ಮಾಡಿ ಹೊಸ Will ಬರೆಸಬಹುದಾಗಿದೆ. ಹಾಗೆ ಅವರ ಆಸ್ತಿಯಲ್ಲಿ ಯಾವುದನ್ನೂ ಬೇಕಾದರೂ ನಿಮ್ಮ ತಾಯಿ ಮಾರಬಹುದಾಗಿದೆ. ನಿಮ್ಮ ತಾಯಿಯ ವಿರುದ್ಧ ಅವರು ಬದುಕಿರುವಾಗಲೇ Court ಗೆ ಹೋಗಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ದತ್ತು ಮಗನಿಗೆ ಆಸ್ತಿಯಲ್ಲಿ ಭಾಗ ಇದೆಯೇ..?
ನಮ್ಮ ತಂಗಿಗೆ ಎರಡು ಗಂಡು ಮಕ್ಕಳು. ಒಬ್ಬ ಮಗನನ್ನು ನಮ್ಮ ಇನ್ನೊಬ್ಬ ಅಕ್ಕ ಸಣ್ಣ ಮಗುವಿದ್ದಾಗಲೇ ಕರೆದುಕೊಂಡು ಅವರ ಮಗನಂತೆಯೇ ಸಾಕಿದ್ದರು. ನಮ್ಮ ಆ ಅಕ್ಕನಿಗೆ ಮೂವರು ಹೆಣ್ಣು ಮಕ್ಕಳು, ಆದರೆ ಈಗ ನಮ್ಮ ಅಕ್ಕ ಭಾವ ಇಬ್ಬರೂ ತೀರಿಕೊಂಡಿದ್ದಾರೆ. ಅವರ ಹೆಣ್ಣು ಮಕ್ಕಳು ಹಾಗೂ ಸಾಕು ಮಗನಿಗೆ ಆಸ್ತಿಯಲ್ಲಿ ಯಾವ ಭಾಗವು ಕೊಡಲಾಗುದಿಲ್ಲ, ನಿಮ್ಮ ಅಪ್ಪನ ಆಸ್ತಿಯಲ್ಲಿ ಭಾಗ ಕೇಳಿಕೊ ಎನ್ನುತ್ತಿದ್ದಾರೆ. ಆ ಹುಡುಗನ ಎಲ್ಲಾ ದಾಖಲೆಗಳಲ್ಲೂ ಅವನ ಸ್ವಂತ ತಂದೆಯ ಹೆಸರೇ ಇದೆ ಸಾಕು ತಂದೆಯ ಹೆಸರಿಲ್ಲ. ಹಾಗಾಗಿ ಭಾಗ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಸರಿಯೇ..? ಆ ಸಾಕು ಮಗ ಆಸ್ತಿ ಭಾಗ ಕೇಳಬಹುದೇ..?
ನಿಮ್ಮ ಒಬ್ಬ ಸಹೋದರಿಯ ಮಗನನ್ನು ಮತ್ತೊಬ್ಬ ಸಹೋದರಿ ಹಾಗೂ ಅವರ ಪತಿ ದತ್ತು ಸ್ವೀಕಾರ ಮಾಡಿದ ನಂತರ ಆ ಹುಡುಗನ ಎಲ್ಲಾ ದಾಖಲೆಗಳಲ್ಲೂ ದತ್ತು ಸ್ವೀಕಾರ ಮಾಡಿದ ತಂದೆ ತಾಯಿಯ ಹೆಸರಿದಿದ್ದರೆ ಆ ಮಗುವಿಗೆ ದತ್ತು ಪಡೆದವರ ಆಸ್ತಿಯಲ್ಲಿ ಪಾಲು ಸಿಗುತಿತ್ತು. ಸಾಕಿದ ತಂದೆ ತಾಯಿಯರ ಆಸ್ತಿಯಲ್ಲಿ ಸಾಕು ಮಗ ಅಥವಾ ಮಗಳಿಗೆ ಹಕ್ಕು ಬರುವುದಿಲ್ಲ. ಇದನ್ನು ರಾಜಿ ಮಾತಿನ ಮೂಲಕ ಬಗೆ ಹರಿಸಿಕೊಳ್ಳುದು ಉತ್ತಮ.