ವಾಚ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಕೂಡ ವಾಚ್ ಇರುವುದನ್ನ ನಾವು ನೀವು ನೋಡಬಹುದಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ವಾಚ್ ಗಳು ಲಭ್ಯವಿದ್ದು ಜನರು ತಮಗೆ ಇಷ್ಟವಾದ ವಾಚ್ ಖರೀದಿ ಮಾಡುತ್ತಿದ್ದಾರೆ. ಇನ್ನು ಈಗಿನ ಕಾಲದ ಯುವಕ ಮತ್ತು ಯುವತಿಯರು ಹೆಚ್ಚಾಗಿ ಸ್ಮಾರ್ಟ್ ವಾಚ್ ಖರೀದಿ ಮಾಡುತ್ತಿದ್ದಾರೆ. ಸಾಮಾನ್ಯ ವಾಚ್ ಗಳಿಗೆ ಹೋಲಿಕೆ ಮಾಡಿದರೆ ಸ್ಮಾರ್ಟ್ ವಾಚ್ ಬೆಲೆ ಕೊಂಚ ಜಾಸ್ತಿ ಎಂದು ಹೇಳಬಹುದು. ಸ್ಮಾರ್ಟ್ ವಾಚ್ ಗಳಲ್ಲಿ ವಿವಿಧ ವಿಶೇಷತೆಗಳು ಇರುವ ಕಾರಣ ಈಗಿನ ಕಾಲದ ಯುವಜನರು ಹೆಚ್ಚುಹೆಚ್ಚು ಸ್ಮಾರ್ಟ್ ವಾಚ್ ಖರೀದಿ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಈಗ ವಿಷಯಕ್ಕೆ ಬರುವುದಾದರೆ, ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ವಾಚ್ ಬಂದಿದ್ದು ಯುವಕ ಮತ್ತು ಯುವತಿಯರು ಈ ವಾಚ್ ಗೆ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಹಲವು ವೈಶಿಷ್ಟ್ಯತೆಯನ್ನ ಈ ವಾಚ್ ಹೊಂದಿದ್ದು ಸದ್ಯ ಮಾರುಕಟ್ಟೆಯಲ್ಲಿ ಈ ವಾಚ್ ಸಕತ್ ಟ್ರೆಂಡ್ ಕ್ರಿಯೇಟ್ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ವಾಚ್ ಯಾವುದು ಮತ್ತು ಇದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ವಾಚ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು Ptron ಹೊಸ ಬಜೆಟ್ ಸ್ಮಾರ್ಟ್ ವಾಚ್ Ptron FORCE X11 ಬಿಡುಗಡೆ ಮಾಡಿದೆ. ಹಲವು ಅದ್ಭುತವಾದ ವೈಶಿಷ್ಟ್ಯತೆಯನ್ನ ಹೊಂದಿರುವ ಈ ವಾಚ್ ನ ಬೆಲೆ ಕೂಡ ಬಹಳ ಕಡಿಮೆ ಆಗಿದ್ದು ಜನರು ಫಿದಾ ಆಗಿದ್ದಾರೆ. Ptron FORCE X11 ನ ಆರಂಭಿಕ ಬೆಲೆ ಕೇವಲ 2799 ರೂಪಾಯಿ ಆಗಿದೆ. ಇನ್ನು ಈ ವಾಚ್ BoAt ಮತ್ತು ಇತರೆ ಕಂಪನಿಗಳ ಸ್ಮಾರ್ಟ್ ವಾಚ್ ಗಳಿಗೆ ಪೈಪೋಟಿ ನೀಡಲಿದೆ. Ptron ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ 5 ಸಾವಿರ ರೂಪಾಯಿ ದರ ಶ್ರೇಣಿಯ ಇತರ ಸ್ಮಾರ್ಟ್ ವಾಚ್ ಗಳಿಗೆ ಮಾರುಕಟ್ಟೆಯಲ್ಲಿ ನೇರ ಸ್ಪರ್ಧೆಯನ್ನು ಒಡ್ಡಲಿದೆ. 1.7 ಇಂಚಿನ ಡಿಸ್ಪ್ಲೇ ಮತ್ತು ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಈ ವಾಚ್ ಬರುತ್ತದೆ.
ಇನ್ನು Ptron FORCE X11 ಸ್ಮಾರ್ಟ್ ವಾಚ್ 240×280 ರೆಸಲ್ಯೂಶನ್‌ನೊಂದಿಗೆ ದೊಡ್ಡ 1.7-ಇಂಚಿನ Touch enabled Color Display ಹೊಂದಿದೆ. 2.5D Curved Glassನ್ನು ಮಿಶ್ರಲೋಹದ ಚೌಕಟ್ಟಿನೊಂದಿಗೆ ಜೋಡಿಸಲಾಗಿದೆ. ಇದು ನಿಮಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ ಮತ್ತು ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಬ್ಲೂಟೂತ್ ಕರೆಗೆ ಬೆಂಬಲವೂ ಇದೆ, ಅಂದರೆ ನೀವು ಈ ವಾಚ್ ನಿಂದಲೇ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ಇನ್ನು ಇದರ ಹೊರತಾಗಿ ಆಪಲ್ ವಾಚ್ ಶೈಲಿಯ ಸೈಡ್ ಮೌಂಟೆಡ್ ಕ್ರೌನ್ ಸಹ ಇದೆ ಮತ್ತು ಇದನ್ನು ಬಳಸಿಕೊಂಡು ನೀವು ವಾಚ್ ಇಂಟರ್ಫೇಸ್ ಅನ್ನು ನ್ಯಾವಿಗೇಟ್ ಮಾಡಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ವಾಚ್ ಪ್ರಿಯರಿಗೆ ತಲುಪಿಸಿ.