Ads By Google

PPF Benefits: ಕೇಂದ್ರದ ಈ ಯೋಜನೆಯಲ್ಲಿ 405 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1 ಕೋಟಿ, ಇಂದೇ ಯೋಜನೆ ಆರಂಭಿಸಿ.

PPF

Image Source: India Today

Ads By Google

PPF Investment Profit: ಸಣ್ಣ ಉಳಿತಾಯ ಯೋಜನೆಗಳಲ್ಲಿ PPF ಕೂಡ ಒಂದಾಗಿದೆ. ದೇಶದಲ್ಲಿ ಬಹುತೇಕ ಜನರು PPF ನಲ್ಲಿ ಹೂಡಿಕೆ ಮಾಡಿಟ್ಟ ಸಾಕಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. PPF ನಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಯಾವುದೇ ನಷ್ಟವನ್ನು ನೀಡುವುದಿಲ್ಲ. ಇದರಲ್ಲಿ ಹೂಡಿಕೆಯ ಮಾಡಿದರೆ ಹೆಚ್ಚಿನ ಲಾಭವನ್ನು ಗಳಿಸಬಹುದು. ಈ ಸರ್ಕಾರೀ ಯೋಜನೆಯಲ್ಲಿ ಇನ್ನಿತರ ಹೂಡಿಕೆಗಿಂತ ಹೆಚ್ಚಿನ ಲಾಭ ದೊರೆಯಲಿದೆ. ನಾವೀಗ ಈ ಲೇಖನದಲ್ಲಿ PPF ನ ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Image Credit: Naidunia

ಕೇಂದ್ರದ ಈ ಯೋಜನೆಯಲ್ಲಿ 405 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1 ಕೋಟಿ
ನೀವು PPF ನಲ್ಲಿ ವಾರ್ಷಿಕವಾಗಿ ಕನಿಷ್ಠ ರೂ. 500 ಹೂಡಿಕೆ ಮಾಡಬಹುದು ಮತ್ತು ಗರಿಷ್ಠ ಮಿತಿ ರೂ. 1.5 ಲಕ್ಷದವರೆಗೆ ಇರುತ್ತದೆ. ಹಣಕಾಸು ವರ್ಷದಲ್ಲಿ ರೂ. 1.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಮೊತ್ತಕ್ಕೆ ಯಾವುದೇ ಬಡ್ಡಿ ಲಭ್ಯವಿರುವುದಿಲ್ಲ. ಮೊತ್ತವನ್ನು ಏಕರೂಪವಾಗಿ ಅಥವಾ ಕಂತುಗಳಲ್ಲಿ ಠೇವಣಿ ಮಾಡಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ. ಪ್ರಸ್ತುತ ಸರ್ಕಾರವು PPF ಗೆ ವಾರ್ಷಿಕವಾಗಿ 7.1 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.

ಹೂಡಿಕೆಯ ಮೇಲೆ ಸಂಯುಕ್ತ ಬಡ್ಡಿಯನ್ನು ಗಳಿಸಲಾಗುತ್ತದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪ್ರತಿ ವರ್ಷ ಮಾರ್ಚ್‌ ನಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಅಂದರೆ ತ್ರೈಮಾಸಿಕ ಆಧಾರದ ಮೇಲೆ. ಬಡ್ಡಿದರದ ಬಗ್ಗೆ ಅಂತಿಮ ನಿರ್ಧಾರವನ್ನು ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತದೆ. ದಿನಕ್ಕೆ ಕೇವಲ 405 ರೂಪಾಯಿಗಳನ್ನು ಅಂದರೆ ವಾರ್ಷಿಕವಾಗಿ 1,47,850 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನೀವು ಪ್ರಸ್ತುತ 7.1% ರ ಬಡ್ಡಿದರದ ಆಧಾರದ ಮೇಲೆ 25 ವರ್ಷಗಳಲ್ಲಿ ಒಟ್ಟು 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು.

Image Credit: Maxlifeinsurance

PPF ನಲ್ಲಿ ತೆರಿಗೆ ವಿನಾಯಿತಿಯ ಲಭ್ಯವಿದೆಯೇ…?
PPF ನಲ್ಲಿ ಹಣವನ್ನು ಠೇವಣಿ ಮಾಡುವ ಮೂಲಕ, ನೀವು ಉತ್ತಮ ಆದಾಯದೊಂದಿಗೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದು. ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು, ಇದರ ಗರಿಷ್ಠ ಮಿತಿ 1.5 ಲಕ್ಷ ರೂ. ಆಗಿದೆ.

PPF ನಲ್ಲಿನ ಹೂಡಿಕೆ, ಅದರ ಮೇಲೆ ಪಡೆದ ಬಡ್ಡಿ ಮತ್ತು ಮೆಚ್ಯೂರಿಟಿ ಪೂರ್ಣಗೊಂಡ ನಂತರ ಪಡೆದ ಮೊತ್ತ, ಈ ಮೂರೂ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. PPF ನಲ್ಲಿ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಬೇಕು ಎನ್ನುವುದು ನಿಮಗೆ ತಿಳಿದಿರಲಿ. ಆದಾಗ್ಯೂ, ನೀವು ತುರ್ತು ಪರಿಸ್ಥಿತಿಯಲ್ಲಿ ಠೇವಣಿ ಮೊತ್ತದ 50 ಪ್ರತಿಶತವನ್ನು ಹಿಂಪಡೆಯಬಹುದು. ಖಾತೆ ತೆರೆದ ನಂತರ 6 ವರ್ಷ ಪೂರ್ಣಗೊಳ್ಳಬೇಕು, ಅಂದರೆ 6 ವರ್ಷಗಳ ನಂತರವೇ ಮೊತ್ತವನ್ನು ಹಿಂಪಡೆಯಬಹುದು.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in