Vehicle Insurance: ವಾಹನಗಳಿಗೆ ಈ ದಾಖಲೆ ಇಲ್ಲದಿದ್ದರೆ ವಾಹನ ವಿಮೆ ರದ್ದು, ವಾಹನ ಮಾಲೀಕರಿಗೆ ಕೇಂದ್ರದ ಹೊಸ ನಿಯಮ.

ವಾಹನ ಸವಾರರು ಇನ್ನುಮುಂದೆ ಈ ದಾಖಲೆಯನ್ನು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕಿದೆ.

Vehicle Insurance Rules In India: ಸದ್ಯ ದೇಶದಲ್ಲಿ ಇತ್ತೀಚೆಗಂತೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಇನ್ನು ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ಪಾವತಿಸಬೇಕುತ್ತದೆ ಎನ್ನುವುದರ ಅರಿವು ಎಲ್ಲರಿಗೆ ಇದ್ದೆ ಇದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ಕೆಲವೊಮ್ಮೆ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಇದೀಗ ಸಂಚಾರ ನಿಯಮದಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ವಾಹನ ಸವಾರರು ಇನ್ನುಮುಂದೆ ಈ ದಾಖಲೆಯನ್ನು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕಿದೆ. ನೀವು ವಾಹನದೊಂದಿಗೆ ರಸ್ತೆಗಿಳಿಯುವ ಮುನ್ನ ಈ ದಾಖಲೆ ನಿಮ್ಮ ಬಳಿ ಇದೆಯಾ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

PUC Certificate Compulsory For Vehicle Owners
Image Credit: Deccanherald

ವಾಹನ ವಿಮೆ ಮಾಡಿಸುವವರಿಗೆ ಸುಪ್ರೀಂ ಕೋರ್ಟ್ ಆದೇಶ
ವಾಹನ ಸವಾರರಿಗೆ ಚಾಲನಾ ಪರವಾನಗಿ ಅತಿ ಮುಖ್ಯ ದಾಖಲೆಯಾಗಿದೆ. ವಾಹನ ಚಾಲಕರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ 5 ಸಾವಿರಕ್ಕಿಂತಲೂ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಡ್ರೈವಿಂಗ್ ಲೈಸೆನ್ಸ್ ನ ಜೊತೆಗೆ RC, Vehicle Insurance ಎಲ್ಲವನ್ನು ಇಟ್ಟುಕೊಳ್ಳಬೇಕು. ಈ ಎಲ್ಲಾ ದಾಖಲೆಯ ಜೊತೆಗೆ ಈ ದಾಖಲೆ ಕೂಡ ಇನ್ನುಮುಂದೆ ಅಗತ್ಯವಾಗಿದೆ. ವಾಹನದ ವಿಮೆಯನ್ನು ಪಡೆಯುವ ಸಮಯದಲ್ಲಿ ಈ ದಾಖಲೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಈ ದಾಖಲೆ ಇಲ್ಲದಿದ್ದರೆ ರದ್ದಾಗಲಿದೆ ನಿಮ್ಮ ವಾಹನದ ವಿಮೆ
ವಾಹನದ ಬಳಕೆಯಿಂದ ಹೆಚ್ಚುತ್ತಿರುವ ಮಾಲಿನ್ಯದ ನಿಯಂತ್ರಣಕ್ಕೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನುಮುಂದೆ ವಾಹನ ಮಾಲೀಕರಿಗೆ ಪಿಯುಸಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ಮುಖ್ಯವಾಗಿ ಮಾಲಿನ್ಯದ ಮಟ್ಟ ಹೆಚ್ಚಿರುವ ಸ್ಥಳಗಳಲ್ಲಿ ಪಿಯುಸಿ ಪ್ರಮಾಣಪತ್ರ ಅನ್ವಯಿಸುತ್ತದೆ. ನಿಮ್ಮ ವಾಹನದ ಮೇಲ್ಮೈ ಹೇಗಿದೆ ಮತ್ತು ಆ ಮೇಲ್ಮೈ ಪರಿಸರಕ್ಕೆ ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ಈ ಪ್ರಮಾಣಪತ್ರವು ನಿಮಗೆ ತಿಳಿಸುತ್ತದೆ.

PUC Certificate Compulsory For Vehicle Owners
Image Credit: Hindustantimes

ಈ ತಪ್ಪಾದರೆ ದಂಡದ ಜೊತೆಗೆ ಜೈಲು ಶಿಕ್ಷೆ ಖಚಿತ
ಪ್ರತಿಯೊಬ್ಬ ವಾಹನ ಮಾಲೀಕರು ಈ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಪ್ರಮಾಣಪತ್ರವನ್ನು ಸಹ ನವೀಕರಿಸಬೇಕು. ಮೂರು ತಿಂಗಳಿಗೊಮ್ಮೆ ಈ ಪಿಯುಸಿ ಪ್ರಮಾಣ ಪತ್ರವನ್ನು ನವೀಕರಿಸಬೇಕಾಗುತ್ತದೆ. ಪಿಯುಸಿ ಪ್ರಮಾಣ ಪತ್ರ ನಿಮ್ಮ ಬಳಿ ಇಲ್ಲದಿದ್ದರೆ 10,000 ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.ಹತ್ತಿರದ ಪಿಯುಸಿ ಕೇಂದ್ರಕ್ಕೆ ಭೇಟಿ ನೀಡಿ ಈ ದಾಖಲೆಯನ್ನು ಪಡೆಯಬಹುದು.

Join Nadunudi News WhatsApp Group

ಇನ್ನು ಸುಪ್ರೀಂ ಕೋರ್ಟ್ ಮೋಟಾರು ವಾಹನ ನಿಯಮಗಳು 1989 ರ ಪ್ರಕಾರ, ಪಿಯುಸಿ ಪ್ರಮಾಣಪತ್ರವನ್ನು ಕಡ್ಡಾಯ ಪ್ರಮಾಣಪತ್ರವೆಂದು ಘೋಷಿಸಿದೆ. ಇನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದ ವಾಹನಗಳಿಗೆ ವಿಮೆ ನೀಡದಂತೆ ವಿಮಾ ಕಂಪನಿಗಳಿಗೆ ತಿಳಿಸಲಾಗಿದೆ. ನಿಮ್ಮ ಬಳಿ PUC ಪ್ರಮಾಣ ಪತ್ರ ಇಲ್ಲದಿದ್ದರೆ ಶೀಘ್ರವೇ ನಿಮ್ಮ ವಾಹನದ ವಿಮೆ ರದ್ದಾಗುತ್ತದೆ.

Join Nadunudi News WhatsApp Group