PUC Challan: ಪೆಟ್ರೋಲ್ ಹಾಕಿಸುವಾಗ ಈ ತಪ್ಪು ಮಾಡಿದರೆ 10 ಸಾವಿರ ದಂಡ, ಕೇಂದ್ರದ ನಿಯಮದ ಬಗ್ಗೆ ಅರಿವಿರಲಿ.

ಪೆಟ್ರೋಲ್ ಹಾಕಿಸುವ ಮುನ್ನ ಈ ನಿಯಮಾವನ ತಿಳಿದುಕೊಳ್ಳಿ, ಇಲ್ಲವಾದರೆ ದಂಡ ಖಚಿತ.

PUC Certificate Latest Update: ವಾಹನ ಸವಾರರಿಗೆ ಚಾಲನಾ ಪರವಾನಗಿ ಅತಿ ಮುಖ್ಯ ದಾಖಲೆಯಾಗಿದೆ. ವಾಹನ ಚಾಲಕರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ 5 ಸಾವಿರಕ್ಕಿಂತಲೂ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಡ್ರೈವಿಂಗ್ ಲೈಸೆನ್ಸ್ ನ ಜೊತೆಗೆ RC, Vehicle Insurance ಎಲ್ಲವನ್ನು ಇಟ್ಟುಕೊಳ್ಳಬೇಕು.

ಈ ಎಲ್ಲಾ ದಾಖಲೆಯ ಜೊತೆಗೆ ಇನ್ನುಮುಂದೆ ವಾಹನ ಸವಾರರು ಈ ದಾಖಲೆಯನ್ನು ಹೊಂದುವುದು ಕಡ್ಡಾಯವಾಗಿದೆ. ಈ ದಾಖಲೆಯನ್ನು ಹೊಂದಿಲ್ಲದಿದ್ದರೆ ನೀವು ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಅನ್ನು ತುಂಬಿಸಿಕೊಳ್ಳುವಾಗ ಸಿಕ್ಕಿಹಾಕೊಳ್ಳುವ ಸಾಧ್ಯತೆ ಇದೆ. ಈ ತಪ್ಪಾದರೆ ಒಂದೇ ಬಾರಿಗೆ 10,000 ದಂಡ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ.

Petrol Pump
Image Credit: Goodreturns

PUC Certificate
ವಾಹನದ ಬಳಕೆಯಿಂದ ಹೆಚ್ಚುತ್ತಿರುವ ಮಾಲಿನ್ಯದ ನಿಯಂತ್ರಣಕ್ಕೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನುಮುಂದೆ ವಾಹನ ಮಾಲೀಕರಿಗೆ ಪಿಯುಸಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ಮುಖ್ಯವಾಗಿ ಮಾಲಿನ್ಯದ ಮಟ್ಟ ಹೆಚ್ಚಿರುವ ಸ್ಥಳಗಳಲ್ಲಿ ಪಿಯುಸಿ ಪ್ರಮಾಣಪತ್ರ ಅನ್ವಯಿಸುತ್ತದೆ. ನಿಮ್ಮ ವಾಹನದ ಮೇಲ್ಮೈ ಹೇಗಿದೆ ಮತ್ತು ಆ ಮೇಲ್ಮೈ ಪರಿಸರಕ್ಕೆ ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ಈ ಪ್ರಮಾಣಪತ್ರವು ನಿಮಗೆ ತಿಳಿಸುತ್ತದೆ.

ವಾಹನ ಸವಾರರು ಈ ತಪ್ಪು ಮಾಡುವಂತಿಲ್ಲ
ಪ್ರತಿಯೊಬ್ಬ ವಾಹನ ಮಾಲೀಕರು ಈ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಪ್ರಮಾಣಪತ್ರವನ್ನು ಸಹ ನವೀಕರಿಸಬೇಕು. ಮೂರು ಮತ್ತು ಆರು ತಿಂಗಳಿಗೊಮ್ಮೆ ಈ ಪಿಯುಸಿ ಪ್ರಮಾಣ ಪತ್ರವನ್ನು ನವೀಕರಿಸಬೇಕಾಗುತ್ತದೆ. ಪಿಯುಸಿ ಪ್ರಮಾಣ ಪತ್ರ ನಿಮ್ಮ ಬಳಿ ಇಲ್ಲದಿದ್ದರೆ 10,000 ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Traffic Rule Latest Update
Image Credit: Businessleague

ಇನ್ನು ಸುಪ್ರೀಂ ಕೋರ್ಟ್ ಮೋಟಾರು ವಾಹನ ನಿಯಮಗಳು 1989 ರ ಪ್ರಕಾರ, ಪಿಯುಸಿ ಪ್ರಮಾಣಪತ್ರವನ್ನು ಕಡ್ಡಾಯ ಪ್ರಮಾಣಪತ್ರವೆಂದು ಘೋಷಿಸಿದೆ. ಇನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದ ವಾಹನಗಳಿಗೆ ವಿಮೆ ನೀಡದಂತೆ ವಿಮಾ ಕಂಪನಿಗಳಿಗೆ ತಿಳಿಸಲಾಗಿದೆ.

Join Nadunudi News WhatsApp Group

ಪೆಟ್ರೋಲ್ ಹಾಕಿಸುವಾಗ ಈ ತಪ್ಪು ಮಾಡಿದರೆ 10 ಸಾವಿರ ದಂಡ
ಟ್ರಾಫಿಕ್ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಮಾಲಿನ್ಯಕಾರಕ ವಾಹನಗಳನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ Petrol Pump ಗಳಲ್ಲಿ CCTV ಗಳನ್ನೂ ಅಳವಡಿಸಾಲಾಗಿದೆ. ಜನರು ತಮ್ಮ ಇಂಧನ ತುಂಬಿಸಿಕೊಳ್ಳಲು ಈ ಪೆಟ್ರೋಲ್ ಪಂಪ್‌ಗಳಿಗೆ ಹೋದಾಗ, ಸಾರಿಗೆ ಇಲಾಖೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಅವರ ನಂಬರ್ ಪ್ಲೇಟ್‌ಗಳ ಫೋಟೋಗಳನ್ನು ಸೆರೆಹಿಡಿಯುತ್ತವೆ.

PUC Certificate Latest Update
Image Credit: Indianexpress

ಕಾರು ಅಥವಾ ಬೈಕು ಮಾಲಿನ್ಯದ ಅಡಿಯಲ್ಲಿ PUC Certificate ಹೊಂದಿದೆಯೋ? ಇಲ್ಲವೋ? ಎನ್ನುವುದನ್ನು ಈ CCTV ಕ್ಯಾಮರಗಳಿಂದ ಪರಿಶೀಲಿಸಲಾಗುತ್ತದೆ. PUC Certificate ಇಲ್ಲದಿದ್ದರೆ ಚಲನ್ ನೇರವಾಗಿ ಖಾತೆಯಿಂದ ಕಡಿತಗೊಳ್ಳುತ್ತದೆ. ಸದ್ಯದಲ್ಲೇ ದೇಶದ ಎಲ್ಲ ಪೆಟ್ರೋಲ್ ಪಂಪ್ ಗಳಲ್ಲಿಯೂ ಈ ಯೋಜನೆ ಆರಂಭವಾಗಲಿದೆ. ನೀವು ಪೆಟ್ರೋಲ್ ಪಂಪ್ ಹೋಗುವು ಮುನ್ನ ಇನ್ನುಮುಂದೆ ಎಚ್ಚರವಾಗಿರಬೇಕಾಗುತ್ತದೆ.

Join Nadunudi News WhatsApp Group