PUC Exam: PUC ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಪರೀಕ್ಷಾ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.

ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಸರಳಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

PUC Question Paper: ಶಿಕ್ಷಣ ಇಲಾಖೆ ಈ ಬಾರಿಯ ಶಿಕ್ಷಣ ನೀತಿಯನ್ನು ಬಾರಿ ಬದಲಾವಣೆಯನ್ನು ತರಲಾಗಿದೆ. ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಉತ್ತಮ ವಿದ್ಯೆಯನ್ನು ಪಡೆಯಬೇಕ್ಕೆನ್ನುವುದು ಇಲಾಖೆಯ ಗುರಿಯಾಗಿದೆ. ಪ್ರಾಥಮಿಕ, ಪ್ರೌಡ, ಪಿಯುಸಿ, ಪದವಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಈ ಬಾರಿ ಶಿಕ್ಷಣ ನೀತಿಯಲ್ಲಿ ಬಾರಿ ಬದಲಾವಣೆ ಆಗಲಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ವಿದ್ಯಾರ್ಥಿಯ ಜೀವನದಲ್ಲಿ ಪಿಯುಸಿ ಪರೀಕ್ಷೆ ಅತಿ ಮುಖ್ಯ. ಕೆಲವರು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಉದ್ಯೋಗವನ್ನು ಪಡೆದಿರುವ ಉದಾಹರಣೆ ಕೂಡ ಇದೆ. ಹೀಗಾಗಿ ವಿದ್ಯಾರ್ಥಿಗಳು ಪಿಯುಸಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಹೆಚ್ಚಿನ ಅಂಕ ಗಳಿಸಿದೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Important information for PUC students
Image Credit: Indianexpress

ಇನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದೀಗ ಶಿಕ್ಷಣ ಇಲಾಖೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಹತ್ವದ ಬದಲಾವಣೆ ತರಲು ಶಿಕ್ಷಣ ಇಲಾಖೆ ನಿರ್ಧರಿಸದೆ. ಈ ಮೂಲಕ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಸರಳಗೊಳಿಸಲು ಇಲಾಖೆ ಮುಂದಾಗಿದೆ.

ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯೇ ಇನ್ನುಮುಂದೆ ಸುಲಭ
ಶಿಕ್ಷಣ ಇಲಾಖೆ ಇದೀಗ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಸರಳಗೊಳಿಸಲು ನಿರ್ಧರಿಸಿದೆ. ಪರೀಕ್ಷೆಯಲ್ಲಿ ವಿವರಣಾತ್ಮಕ ಉತ್ತರಕ್ಕಿಂತ ಒಂದು ಪದದ ಉತ್ತರ, ಬಹು ಆಯ್ಕೆಯ ಪ್ರಶ್ನೋತ್ತರ, ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬುವುದು ಈ ರೀತಿಯ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಇಲಾಖೆ ನಿರ್ಧರಿಸಿದೆ. ಒಟ್ಟು 100 ಅಂಕಗಳಲಿ 20 ಆಂತರಿಕ, 20 ಒಂದು ಅಂಕ, 24 ಎರಡು ಅಂಕದ ಪ್ರಶ್ನೆಗಳಿದ್ದು ಒಟ್ಟಾಗಿ 36 ಅಂಕಗಳಿಗಷ್ಟೇ ವಿವರವಾಗಿ ಉತ್ತರ ನೀಡಬೇಕಾಗುತ್ತದೆ. ಇನ್ನುಳಿದ ಅಂಕಗಳಿಗೆ ಒಂದು ವ್ಯಾಕ್ಯದ ಉತ್ತರ ಸಾಕಾಗುತ್ತದೆ.

Important information for PUC students
Image Credit: Timesofindia

ಪ್ರಶ್ನೆ ಪತ್ರಿಕೆಯ ಮಾದರಿ
ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಕೆಎಸ್​ಇಎಬಿ) ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಪ್ರಶ್ನೆ ಪತ್ರಿಕೆಯ ಪ್ರಕಾರ, ಕನ್ನಡ ಪರೀಕ್ಷೆಯಲ್ಲಿ 10 ಅಂಕಗಳಿಗೆ ಒಂದು ವಾಕ್ಯದ 10 ಪ್ರಶ್ನೆಗಳು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬುವುದು ಸೇರಿ 20 ಅಂಕಗಳಿಗೆ ಒಂದು ಅಂಕದ ಪ್ರಶ್ನೆಗಳಿವೆ.

Join Nadunudi News WhatsApp Group

2 ಅಂಕದ 12 ಪ್ರಶ್ನೆಗಳಿವೆ. 3 ಅಂಕಗಳ 4 ಪ್ರಶ್ನೆಗಳು ಮತ್ತು 4 ಅಂಕಗಳ 6 ಪ್ರಶ್ನೆಗಳಿದ್ದು, 36 ಪ್ರಶ್ನೆಗಳಿಗೆ ಉತರಿಸಬೇಕಾಗುತ್ತದೆ. ಇದೆ ಈ ರೀತಿ ಉಳಿದ ಎಲ್ಲಾ ವಿಷಯದಲ್ಲೂ 20 ಅಂಕಗಳು ಒಂದು ಅಂಕದ ಪ್ರಶ್ನೆಯಾಗಿರುತ್ತದೆ. ಹಾಗೆಯೆ 20 ಆಂತರಿಕ ಅಂಕ, ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರಿಕೆಷೇಯ ಅಂಕ ಸೇರಿ 10 ಅಂಕ, ಪ್ರಾಜೆಕ್ಟ್ ಗಳಿಗೆ 10 , ಬರವಣಿಗೆಯ ವಿಭಾಗಕ್ಕೆ 5 ಅಂಕ, ಪ್ರಸ್ತುತಪಡಿಸುವಿಕೆಗೆ 3 ಅಂಕ, ಹಾಗೆಯೆ ಸಂದರ್ಶನಕ್ಕೆ 2 ಅಂಕವನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ.

Join Nadunudi News WhatsApp Group