Ads By Google

PUC Result: PUC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಫಲಿತಾಂಶ ದಿನಾಂಕ ಪ್ರಕಟ.

karnataka PUC exam result 2023
Ads By Google

PUC Education: ವಿದ್ಯಾರ್ಥಿಗಳ ಶಿಕ್ಷಣ ನೀತಿಯಲ್ಲಿ ಇತ್ತೀಚಿಗೆ ಶಿಕ್ಷಣ ಇಲಾಖೆ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲು ಯೋಜನೆ ಹೂಡಿದ್ದಾರೆ. 9 ರಿಂದ 12 ನೇ ತರಗತಿಗಳ ಶಿಕ್ಷಣದಲ್ಲಿ ಈ ಬಾರಿ ಕೇಂದ್ರ ಸರ್ಕಾರ ಬಾರಿ ಬದಲಾವಣೆ ತರಲಿದೆ. ಕರಡು ಪೂರ್ವ ಪಠ್ಯ ಕ್ರಮ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಪಿಯುಸಿ (PUC) ವಿದ್ಯಾರ್ಥಿಗಳಿಗೆ ಎರಡು ಬಾರಿ ಸೆಮಿಸ್ಟರ್ ಪರೀಕ್ಷೆಯನ್ನು ಜಾರಿಗೆ ತರಲಿದ್ದಾರೆ. ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದಿದ್ದು, ಇದೀಗ ಫಲಿತಾಂಶದ ವಿಷಯವಾಗಿ ಶಿಕ್ಷಣ ಇಲಾಖೆ (Education Department) ಮುಖ್ಯ ಮಾಹಿತಿಯನ್ನು ಹೊರಡಿಸಿದೆ. ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಮಾಹಿತಿ ತಿಳಿಯೋಣ.

Image Credit: vijaykarnataka

ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನ
ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಶಿಕ್ಷಣ ಮುಖ್ಯ ಹಂತವಾಗಿರುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಚ್ 9 ರಿಂದ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 29 ರಂದು ಪಿಯುಸಿ ಪರೀಕ್ಷೆಯು ಅಂತ್ಯಗೊಂಡಿತ್ತು. ದ್ವಿತೀಯ ಪಿಯುಸಿ ಮೌಲ್ಯಮಾಪನವು ಏಪ್ರಿಲ್ 5 ರಿಂದ 65 ಕೇಂದ್ರಗಳಲ್ಲಿ ಶುರುವಾಗಿದೆ. ಪಿಯುಸಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ 25 ಸಾವಿರ ಉಪನ್ಯಾಸಕರನ್ನು ನಿಯೋಜಿಸಿದ್ದಾರೆ. 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.

ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಮೇ 5 ನೇ ತಾರೀಕಿನಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇ 5 ರಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023 ಆರಂಭವಾಗಲಿದೆ. ಈ ಕಾರಣದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.

Image Credit: oneindia

ಎಸ್ಎಸ್ಎಲ್ ಸಿ ಹಾಗು ಪಿಯುಸಿ ಶಿಕ್ಷಣದಲ್ಲಿ ಬಾರಿ ಬದಲಾವಣೆ
ಈ ಬಾರಿ ಶಿಕ್ಷಣ ನೀತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂಕಗಳನ್ನು ನೀಡುವ ಸಮಯದಲ್ಲಿ ಹಿಂದಿನ ತರಗತಿಯ ಪರೀಕ್ಷಾ ಅಂಕಗಳನ್ನು ಪರಿಗಣಿಸಲಾಗುತ್ತದೆ.

12 ನೇ ತರಗತಿಗೇ 11 ತರಗತಿಯ ಅಂಕಗಳನ್ನು ಪರೀಕ್ಷಾ ಮೌಲ್ಯಮಾಪನ ಸಮಯದಲ್ಲಿ ಪರಿಗಣಿಸಲಾಗುತ್ತದೆ. ಈ ಬಾರಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಒಟ್ಟು 16 ವಿಷಯಗಳನ್ನು ಓದಬೇಕಾಗುತ್ತದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field