Puneeth Rajkumar Birthday: ಅಪ್ಪು ಹುಟ್ಟು ಹಬ್ಬಕ್ಕೂ ಮೊದಲೇ ದಿಟ್ಟ ನಿರ್ಧಾರ ತಗೆದುಕೊಂಡ ಅಶ್ವಿನಿ, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.
Puneeth Rajkumar Birthday Celebration: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಕರುನಾಡ ಯುವರತ್ನ ವಿಧಿವಶರಾಗಿ ಈಗಾಗಲೇ ವರ್ಷವೇ ಕಳೆದಿದೆ. ಆದರೂ ಸಹ ನಟ ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) ಅವರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಚೀರುರುಣಿ.
ನಟ ಪುನೀತ್ ರಾಜಕುಮಾರ್ ಆಗಲಿ ಅದೆಷ್ಟೇ ವರ್ಷವಾದರೂ ಸಹ ಕನ್ನಡ ಚಿತ್ರರಂಗದಲ್ಲಿ ಅವರ ನೆನಪು, ಅವರ ನಗು ಪ್ರತಿಧ್ವನಿಸುತ್ತಲೇ ಇರುತ್ತದೆ.
ಮಾರ್ಚ್ 17 ರಂದು ನಟ ಪುನೀತ್ ರಾಜಕುಮಾರ್ ಅವರ ಹುಟ್ಟಿದ ದಿನ. ಹುಟ್ಟುಹಬ್ಬ ಹತ್ತಿರ ಬರುತ್ತಿದ್ದಂತೆಯೇ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮಾರ್ಚ್ 17 ಅಪ್ಪು ಹುಟ್ಟಿದ ದಿನ
ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ದಿನ. ಪ್ರತಿವರ್ಷ ಈ ದಿನವನ್ನು ಪ್ರೀತಿಯ ಅಪ್ಪು ಜೊತೆಗೆ ಸೆಲಬ್ರೆಷನ್ ಮಾಡುತ್ತಿದ್ದ ಅಭಿಮಾನಿಗಳು ಇದೀಗ ಅಪ್ಪು ಅನುಪಸ್ಥಿತಿಯಲ್ಲಿಯೇ ಅವರ ಹುಟ್ಟಿದ ದಿನವನ್ನು ಆಚರಿಸಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ.
ಇಂತಹ ಸಮಯದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ. ಮಾರ್ಚ್ 17 ಬಂದರೆ ಸಾಕು ಪ್ರತಿ ವರ್ಷ ಅಪ್ಪು ಮನೆಮುಂದೆ ಜನಗಳ ದಂಡು ಬರುತ್ತಿತ್ತು. ಆದರೆ ಈ ಎರಡು ವರ್ಷಗಳಿಂದ ಅಭಿಮಾನಿಗಳು ಅಪ್ಪು ಜೊತೆ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಲು ಆಗುತ್ತಿಲ್ಲ.
ಈ ಭಾರಿ ಸಹ ಅಪ್ಪು ಮನೆಮುಂದೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಬಹುದು. ಅಪ್ಪು ಬರೀ ಅವರ ನೆನಪು ಅಷ್ಟೇ. ಹಾಗಂತ ಅಪ್ಪು ಜನ್ಮದಿನದಂದು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನಸ್ಸು ಒಪ್ಪುತ್ತಿಲ್ಲ.
ವಿದೇಶದಲ್ಲಿರುವ ಮಗಳ ಬಳಿ ಹೊರಟ ಅಶ್ವಿನಿ ಪುನೀತ್ ರಾಜಕುಮಾರ್
ಈ ಹಿನ್ನೆಲೆಯಲ್ಲಿ ಅಪ್ಪು ಹುಟ್ಟು ಹಬ್ಬಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ಅಶ್ವಿನಿ ನಿರ್ಧಾರ ಒಂದನ್ನು ತೆಗೆದು ಕೊಂಡಿದ್ದಾರೆ.
ಅಪ್ಪು ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನ ಮನೆ ಬಳಿ ಬರಬೇಡಿ ಅಂದವರಲ್ಲ. ಹೀಗಿರುವಾಗ ಅವರ ಅಗಲಿಕೆ ನಂತರ ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಆಗದೆ ಅಪ್ಪು ಹುಟ್ಟು ಹಬ್ಬಕ್ಕೂ ಮುನ್ನ ವಿದೇಶದಲ್ಲಿರುವ ಮಗಳ ಬಳಿ ಹೊರಟಿದ್ದಾರೆ.