Ashwini Puneeth Rajkumar: 12 ಕೀ.ಮೀ ರಸ್ತೆಗೆ ಅಪ್ಪು ಹೆಸರು, ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್ ರಾಜಕುಮಾರ್.

Ashwini Puneeth Rajkumar Tweet About Puneeth Rajkumar Road: ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜಕುಮಾರ್ (Puneeth Rajkumar) ಅವರ ಹೆಸರಿನಲ್ಲಿ ಇದೀಗ ಹೊಸದಾಗಿ ರಸ್ತೆ ಉದ್ಘಾಟನೆ ಆಗಿದೆ.

ಪುನೀತ್ ರಾಜ್ ಕುಮಾರ್  ನಿಧನ ಹೊಂದಿದ ಬಳಿಕ ಅಪ್ಪು ಅವರ ಹೆಸರಿನಲ್ಲಿ ಅದೆಷ್ಟೋ ಉದ್ಯಾನವನಗಳು, ರಸ್ತೆಗಳು, ವೃತ್ತಗಳು ಹಾಗೆಯೆ ಸಾಕಷ್ಟು ಅಪ್ಪುವಿನ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು.

Ashwini Puneeth Rajkumar thanked the 12 km road named Appu.
Image Credit: instagram

ಬೆಂಗಳೂರಿನ 12 ಕೀ.ಮೀ ರಸ್ತೆಗೆ ಅಪ್ಪುವಿನ ಹೆಸರಿಟ್ಟಿದ್ದಾರೆ. ಹಾಗಾಗಿ ಟ್ವೀಟ್ ಮಾಡುವ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಮೊತ್ತೊಂದು ರಸ್ತೆ ಉದ್ಘಾಟನೆಯಾಗಿದೆ. ಈ ಬಗ್ಗೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಪ್ರತಿಕ್ರಿಯಿಸಿದ್ದಾರೆ.

Ashwini Puneeth Rajkumar thanked for constructing the road in the name of Puneeth Rajkumar
Image Credit: instagram

ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆ
ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗಿನ 12 ಕಿಲೋ ಮೀಟರ್ ಉದ್ದದ ರಿಂಗ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ಈ ಹಿಂದೆಯೇ ಹೆಸರಿಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

Join Nadunudi News WhatsApp Group

ಇದೀಗ ಫೆಬ್ರವರಿ 7 ರಂದು ಆ ರಸ್ತೆಯನ್ನು ಉದ್ಘಾಟನೆ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavarj Bommai) ಈ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು.

Ashwini Puneeth Rajkumar thanked for building the road in her husband's name

ಅಪ್ಪು ಹೆಸರಿನ ರಸ್ತೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಪ್ರತಿಕ್ರಿಯೆ
“ಕರ್ನಾಟಕ ಸರ್ಕಾರಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ರಸ್ತೆಗೆ ಪುನೀತ್ ಅವರ ಹೆಸರಿಟ್ಟ ಫೋಟೋವನ್ನು ತಮ್ಮ ಟ್ವಿಟರ್ ಕತೆಯಲ್ಲಿ ಹಂಚಿಕೊಂಡಿದ್ದಾರೆ.

“ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಯಂಡಹಳ್ಳಿ ಜಂಕ್ಷನ್ ನಿಂದ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿಲೋಮೀಟರ್ ಹೊರ ವರ್ತುಲ ರಸ್ತೆಯನ್ನು ಅಪ್ಪು ಗೌರವಾರ್ಥ ‘ಡಾ|| ಪುನೀತ್ ರಾಜಕುಮಾರ್ ರಸ್ತೆ’ಯನ್ನು ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಈ ಮೂಲಕ ಅಪ್ಪು ಅವರನ್ನು ನಮ್ಮನಡುವೆ ಸದಾ ಜೀವಂತವಾಗಿರಿಸಿದ್ದಾಕ್ಕಾಗಿ ರಾಜ್ಯ ಸರ್ಕಾರ, ಕರ್ನಾಟಕ ಚಲನಚಿತ್ರ ಮಂಡಳಿ, ಚಿತ್ರರಂಗದ ಬಂದುಗಳು ಮತ್ತು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಎಂದೆಂದಿಗೂ ಚಿರಋಣಿ” ಎಂದು ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group