Appu Birthday: ಅಪ್ಪು ಸಮಾಧಿಯ ಮುಂದೆ ಎದ್ದು ಬಂದ ಅಪ್ಪು, ಕುರ್ಚಿ ಮೇಲೆ ಕುಳಿತುಕೊಂಡ ಅಪ್ಪು.
Appu Birthday Celebration In Puneeth Rajkumar Samadhi: ಇಂದು ಕರುನಾಡ ಯುವರತ್ನ ನಟ ಪುನೀತ್ ರಾಜಕುಮಾರ್ (Puneeth Rajkumar) ಅವರ ಹುಟ್ಟುಹಬ್ಬ. ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ನೆನಪನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ರಾಜ್ಯದಲ್ಲಿ ಇಂದು ಅಪ್ಪು ಉತ್ಸವ ನಡೆಯುತ್ತಿದೆ. ಇಂದು ನಟ ಪುನೀತ್ ರಾಜಕುಮಾರ್ ಅವರ 49 ನೇ ಹುಟ್ಟುಹಬ್ಬ. ಅಪ್ಪು ಸಾವನ್ನಪ್ಪಿ ಒಂದು ವರೆ ವರ್ಷವಾದರೂ ಸಹ ಅಭಿಮಾನಿಗಳ ಮನದಲ್ಲಿ ದೇವರಾಗಿ ಉಳಿದುಬಿಟ್ಟಿದ್ದಾರೆ. ರಾಜ್ಯದೆಲ್ಲೆಡೆ ಅಪ್ಪು ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿಸುತ್ತಿದ್ದಾರೆ.
ಸಮಾಧಿ ಬಳಿ ಎದ್ದು ಬಂದ ಅಪ್ಪು
ಇಂದು ದಿನ ಪ್ರತಿ ಅಪ್ಪು ಉತ್ಸವ ನಡೆಯಲಿದೆ. ಅಪ್ಪು ಸಮಾಧಿ ಬಳಿ ಕೋಟ್ಯಾಂತರ ಅಭಿಮಾನಿಗಳು ಬಂದು ಅಪ್ಪು ಹುಟ್ಟುಹಬ್ಬವನ್ನು ಆಚರಿಸತ್ತಿದ್ದಾರೆ. ಇದೀಗ ಸಮಾಧಿ ಬಳಿ ಅಪ್ಪು ಎದ್ದು ಬಂದು ಕುಳಿತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಪ್ಪು ಸಮಾಧಿ ಬಳಿ ಆವರ ಮೂರ್ತಿಯೊಂದನ್ನು ಇಟ್ಟು ಅಭಿಮಾನಿಗಳು ಅಚ್ಚರಿ ಮೂಡಿಸಿದ್ದಾರೆ. ಆ ಮೂರ್ತಿ ನೋಡಿದಾಗ ಎಲ್ಲರೂ ಅಪ್ಪು ಮತ್ತೆ ಬಂದಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಅಪ್ಪು ಮತ್ತೆ ಹೀಗೆ ಬಂದಿದ್ದಾರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.
ರಾಜ್ಯದಲ್ಲಿ ಅಪ್ಪು ಹುಟ್ಟು ಹಬ್ಬದ ಸಂಭ್ರಮ
ಅಪ್ಪು ಸಮಾಧಿ ಬಳಿ ಅಭಿಮಾನಿಗಳು ಅಪ್ಪು ಮೂರ್ತಿ ಇಟ್ಟು ಕುರ್ಚಿಯಲ್ಲಿ ಕೂರಿಸಿದ್ದಾರೆ. ಆ ಮೂರ್ತಿಯನ್ನು ನೋಡಿದರೆ ನಿಜವಾಗಲೂ ಅಪ್ಪು ಬಂದಿದ್ದಾರೆ ಎನ್ನುವ ರೀತಿಯಲ್ಲಿಯೇ ಇದೆ. ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ಭಾವುಕತೆಯನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪು ಆಗಲಿ ಅದೆಷ್ಟೇ ವರ್ಷವಾದರೂ ಸಹ ಅಭಿಮಾನಿಗಳ ಮನದಲ್ಲಿ ಅವರು ಸದಾ ಅಜರಾಮರ. ಅಪ್ಪು ಹುಟ್ಟುಹಬ್ಬದ ಸಂಭ್ರಮ ಡಾ. ರಾಜ್‍ಕುಮಾರ್ ಸ್ಮಾರಕ, ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ ಎಲ್ಲವೂ ಸಿದ್ಧವಾಗಿದೆ.