ಪುನೀತ್ ಅಂತಿಮ ದರ್ಶನ ಪಡೆದು ತೆರಳುತ್ತಿದ್ದ ಖ್ಯಾತ ನಟ ಆಸ್ಪತ್ರೆಗೆ ದಾಖಲು, 4 ಘಂಟೆ ನಡೆಯಿತು ಆಪರೇಷನ್.

ಚಿತ್ರರಂಗದ ಪಾಲಿಗೆ ಪುನೀತ್ ರಾಜಕುಮಾರ್ ಅವರ ಸಾವು ತುಂಬಲಾದ ನಷ್ಟವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಪುನೀತ್ ರಾಜಕುಮಾರ್ ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿಯನ್ನ ಮಿಡಿದಿತ್ತು ಮತ್ತು ಅದೆಷ್ಟೋ ದೊಡ್ಡ ದೊಡ್ಡ ಸ್ಟಾರ್ ನಟರು ನಟ ಪುನೀತ್ ರಾಜಕುಮಾರ್ ಅವರ ದರ್ಶನವನ್ನ ಪಡೆದುಕೊಳ್ಳಲು ಬಂದಿದ್ದರು. ಕನ್ನಡ ಚಿತ್ರರಂಗದ ಪಾಲಿಗೆ ಕಳೆದ ಎರಡು ವರ್ಷ ಅನ್ನುವುದು ಬಹಳ ಆಘಾತವನ್ನ ಉಂಟುಮಾಡಿದೆ ಮತ್ತು ಹಲವು ಖ್ಯಾತ ಯುವನಟರು ಈ ವರ್ಷದಲ್ಲಿ ಅಕಾಲಿಕವಾಗಿ ತ್ಯಜಿಸಿದ್ದು ಇದು ದೇಶವೇ ಕಂಬನಿಯನ್ನ ಮಿಡಿಯುವಂತೆ ಮಾಡಿದೆ ಎಂದು ಹೇಳಬಹುದು. ಇನ್ನು ಮೊನ್ನೆ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ದೇಶದ ಹಲವು ಖ್ಯಾತ ನಟರು ಬಂದಿದ್ದು ಈಗ ಅವರಲ್ಲ ಒಬ್ಬರು ಆಸ್ಪತ್ರೆಯನ್ನ ಸೇರಿಕೊಂಡಿದ್ದಾರೆ.

ಹೌದು ಪುನೀತ್ ರಾಜಕುಮಾರ್ ಅವರ ದರ್ಶವನ್ನ ಪಡೆದುಕೊಳ್ಳಲು ಬಂದ ಖ್ಯಾತ ನಟರೊಬ್ಬರು ಈಗ ಆಸ್ಪತ್ರೆಗೆ ಸೇರಿಕೊಂಡಿದ್ದು ದೇಶದ ಚಿತ್ರರಂಗ ಮತ್ತೆ ಶಾಕ್ ನಲ್ಲಿ ಮುಳುಗಿದೆ ಎಂದು ಹೇಳಬಹುದು. ಹಾಗಾದರೆ ಆಸ್ಪತ್ರೆಯನ್ನ ಸೇರಿಕೊಂಡ ಆ ಖ್ಯಾತ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಟ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನ ಪಡೆದು ತೆರಳಿದ್ದ ಟಾಲಿವುಡ್ ನಟ ನಂದಮುರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

Balakrishna in hospital

ಬಂದಿರುವ ಮಾಹಿತಿಯ ಪ್ರಕಾರ ಕಳೆದ ಆರು ತಿಂಗಳಿಂದ ಬಾಲಕೃಷ್ಣ ಅವರಿಗೆ ಭುಜದ ಸಮಸ್ಯೆ ಕಾಡುತ್ತಿದ್ದು ಭುಜದ ನೋವು ಹೆಚ್ಚಾದ ಕಾರಣ ಅವರು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಬಾಲಕೃಷ್ಣ ಅವರಿಗೆ ಭುಜದ ನೋಡು ಹೆಚ್ಚಾಗಿದ್ದು ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಇನ್ನು ಆಪರೇಷನ್ ಮಾಡಿಸಿಕೊಂಡರೆ ಹಲವು ದಿನಗಳ ವಿಶ್ರಾಂತಿಯನ್ನ ಪಡೆದುಕೊಳ್ಳಬೇಕಾಗುತ್ತದೆ ಮತ್ತು ಹೀಗೆ ಮಾಡಿದರೆ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಬೇಕಾಗುತ್ತದೆ. ಹೀಗಾಗಿ ಅವರು ಇದನ್ನು ಮುಂದೂಡುತ್ತಲೇ ಬರುತ್ತಿದ್ದರು. ಇನ್ನು ಮೊನ್ನೆ ಪುನೀತ್ ರಾಜಕುಮಾರ್ ಅವರ ದರ್ಶನವನ್ನ ಮಾಡಲು ನಟ ಬಾಲಕೃಷ್ಣ ಅವರು ಹೋಗಿದ್ದು ಅಲ್ಲಿಂದ ಬರುವ ಸಮಯದಲ್ಲಿ ಅವರಿಗೆ ಭುಜದ ನೋವು ಬಹಳ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಭುಜದ ನೋವು ಹೆಚ್ಚಾದ ಕಾರಣ ಕೈ ಎತ್ತಲೂ ಆಗದ ಪರಿಸ್ಥಿತಿ ಬಂದೊದಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಮತ್ತು ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನು ಆಪರೇಷನ್ ಯಶಸ್ವಿಯಾಗಿ ಆಗಿದ್ದು ನಟ ಬಾಲಕೃಷ್ಣ ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಬಾಲಕೃಷ್ಣ ಅವರ ಕುರಿತು ಮಾತನಾಡಿರುವ ವೈದ್ಯರು ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ. ಸ್ನೇಹಿತರೆ ನಟ ಬಾಲಕೃಷ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Puneeth_Rajkumar_EPS12

Join Nadunudi News WhatsApp Group