ಇಡೀ ಇಡೀ ದೇಶದ ಚಿತ್ರರಂಗವೇ ಕಣ್ಣೀರಿಡುವ ಪರಿಸ್ಥಿತಿ ಉಂಟಾಯಿತು ಎಂದು ಹೇಳಬಹುದು. ಹೌದು ದೇಶದಲ್ಲಿ ಖ್ಯಾತ ನಟ ಎನಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಹೌದು ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ 46 ನೇ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ತುತ್ತಾಗಿರುವುದು ದೇಶವೇ ಶಾಕ್ ಆಗುವಂತೆ ಮಾಡಿದೆ ಎಂದು ಹೇಳಬಹುದು. ನಿನ್ನೆ ಜಿಮ್ ಮಾಡುವ ಸಮಯದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಮತ್ತು ವೈದ್ಯರು ಎಷ್ಟೇ ಶಕ್ತಿಮೀರಿ ಪ್ರಯತ್ನವನ್ನ ಮಾಡಿದರು ಕೂಡ ನಟ ಪುನೀತ್ ರಾಜ್ ಕುಮಾರ್ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದು.
ದೇಶದಲ್ಲಿ ಕೋಟ್ಯಾಂತರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ನಟ ಪುನೀತ್ ರಾಜ್ ಕುಮಾರ್ ಅವರು ನಿನ್ನೆ ತಮ್ಮ ಅಪಾರ ಅಭಿಮಾನಿ ಬಳಗ ಮತ್ತು ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನ ಈಗ ಕಂಠೀರವದಲ್ಲಿ ಇರಿಸಲಾಗಿದ್ದು ಅಭಿಮಾನಿಗಳು ಕೊನೆಯದಾಗಿ ತಮ್ಮ ನೆಚ್ಚಿನ ನಟನ ದರ್ಶನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ನಾಳೆ ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಇನ್ನು ನಿನ್ನೆ ಪುನೀತ್ ರಾಜ್ ಕುಮಾರ್ ನಿಧನದ ಕೊನೆಯ ಕ್ಷಣ ಏನಾಯಿತು ಅನ್ನುವುದರ ಬಗ್ಗೆ ವೈದ್ಯರು ಸ್ಪಷ್ಟನೆ ಕೊಟ್ಟಿದ್ದು ಅವರ ಮಾತುಗಳನ್ನ ಕೇಳಿದರೆ ಕಣ್ಣಿನಲ್ಲಿ ಗಳಗಳನೆ ನೀರು ಬರುವುದು ಖಚಿತ ಎಂದು ಹೇಳಬಹುದು.
ಹಾಗಾದರೆ ಆಸ್ಪತ್ರೆಯಲ್ಲಿ ಆಗಿದ್ದೇನು ಮತ್ತು ಚಿಕ್ಸಿತೆ ನೀಡಿದ ವೈದ್ಯರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದುವ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ಜಿಮ್ ಮಾಡಲು ಜಿಮ್ ಗೆ ಹೋಗಿದ್ದರು, ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ ಮತ್ತು ಅಲ್ಲಿ ಇಸಿಜಿ ಮಾಡಿದ್ದರು. ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು. ಹೃದಯಾಘಾತವಾಗಿರುವುದು ಸ್ಪಷ್ಟವಾದ ನಂತರ ಅವರನ್ನ ತಕ್ಷಣ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗಿತ್ತು.
ದಾರಿಮಧ್ಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಕರೆದುಕೊಂಡು ಬರುವಾಗ ಅವರ ಹೃದಯ ಚಟುವಟಿಕೆ ಮಾಡುತ್ತಿರಲಿಲ್ಲ, ನಂತರ ಸುಮಾರು 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯಕ್ಕೆ ಮಸಾಜ್ ಮಾಡಿ ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ. ಆರೋಗ್ಯ ಸುಧಾರಣೆಯಾಗುತ್ತದೆಯೇ ಎಂದು ನೋಡಿದರೂ ಆಗಲಿಲ್ಲ.ಅವರಿಗೆ ಹೃದಯಾಘಾತವಾದಾಗ ಹೃದಯ ಬಹಳ ದುರ್ಬಲವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಹೃದಯಾಘಾತವಾಗಿದೆ ಮತ್ತು ಅದರಿಂದಾಗಿ ಹೃದಯ ಶಸ್ತ್ರಚಿಕಿತ್ಸೆಗೆ ನಮಗೆ ವೈದ್ಯಕೀಯ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೊನೆಯ 3 ಗಂಟೆ ಮಸಾಜ್ ಮಾಡಿ ವೆಂಟಿಲೇಟರ್ ನಲ್ಲಿ ಹಾಕಿಟ್ಟು ಔಷಧಿ ಕೊಟ್ಟು ಏನಾದರೂ ಬದಲಾವಣೆಯಾಗುತ್ತದೆಯೇ ಎಂದು ನೋಡಿದ್ದೆವು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ತೀರಿಹೋದರು ಎಂದರು. ಸ್ನೇಜಹಿತರೇ ವಿಧಿಯ ಆಟ ಎಷ್ಟು ಕ್ರೂರ ಅಲ್ಲವೇ. ನಮ್ಮ ನೆಚ್ಚಿನ ಅಣ್ಣನ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.