ಸಿನಿಮಾಗಳಿಗಾಗಿ ಪುನೀತ್ ಪಡೆದಿದ್ದ 2.5 ಕೋಟಿ ರೂಪಾಯಿ ಹಣವನ್ನ ಪತ್ನಿ ಅಶ್ವಿನಿ ಏನು ಮಾಡಿದ್ದಾರೆ ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.
ನಟ ಪುನೀತ್ ರಾಜಕುಮಾರ್ ಅಂದರೆ ಒಬ್ಬ ದೇವರೂಪ ಮಾನವ ಎಂದು ಹೇಳಬಹುದು. ತಾವು ಮಾಡಿದ ಅದೆಷ್ಟೋ ಒಳ್ಳೆಯ ಕೆಲಸಗಳ ಮೂಲಕ ಅದೆಷ್ಟೋ ಜನರಿಗೆ ದೇವರ ರೂಪದಲ್ಲಿ ಇದ್ದಿದ್ದರು ನಟ ಪುನೀತ್ ರಾಜಕುಮಾರ್ ಅವರು. ಇನ್ನು ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಎರಡು ತಿಂಗಳು ಕಳೆದಿರಬಹುದು, ಆದರೆ ಅವರ ನೆನಪುಗಳು ನಮ್ಮ ಮನದಲ್ಲಿ ಇಂದಿಗೂ ಶಾಶ್ವತ ಎಂದು ಹೇಳಬಹುದು. ನಟ ಪುನೀತ್ ರಾಜಕುಮಾರ್ ಬರಿ ಚಿತ್ರಗಳಲ್ಲಿ ಮಾತ್ರ ಹೀರೋ ಆಗಿರದೆ ಅದೆಷ್ಟೋ ಜನರಿಗೆ ರಿಯಲ್ ಹೀರೋ ಆಗಿದ್ದರು. ಅದೆಷ್ಟೋ ಮಕ್ಕಳ ವಿದ್ಯಾಭ್ಯಾಸ, ಅದೆಷ್ಟೋ ವೃದ್ದಾಶ್ರಮ, ಅದೆಷ್ಟೋ ಅನಾಥ ಆಶ್ರಮ ಮತ್ತು ಹಲವು ಗೋಶಾಲೆಗಳ ಜವಾಬ್ದಾರಿಯನ್ನ ನಟ ಪುನೀತ್ ರಾಜಕುಮಾರ್ ತೆಗೆದುಕೊಂಡಿದ್ದರು.
ಇನ್ನು ನಟ ಪುನೀತ್ ರಾಜಕುಮಾರ್ ಅವರ ಅದೆಷ್ಟೋ ಸಿನಿಮಾಗಳು ಅರ್ಧಕ್ಕೆ ನಿಂತುಹೋಗಿದೆ ಎಂದು ಹೇಳಬಹುದು. ಒಬ್ಬ ನಟ ಅಂದಮೇಲೆ ಸಿನಿಮಾ ಮಾಡಲು ಅಡ್ವಾನ್ಸ್ ಹಣವನ್ನ ಪಡೆದುಕೊಳ್ಳುವುದು ಸರ್ವೇ ಸಾಮಾನ್ಯ ಮತ್ತು ಅದೇ ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರು ಸಿನೆಮಾಗಳ ನಿರ್ಮಾಣಕ್ಕಾಗಿ 2.5 ಕೋಟಿ ರೂಪಾಯಿ ಹಣವನ್ನ ಅಡ್ವಾನ್ಸ್ ರೂಪದಲ್ಲಿ ಪಡೆದುಕೊಂಡಿದ್ದರು. ಸದ್ಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ ಮತ್ತು ಅವರ ಸಹಿ ಹಾಕಿದ್ದ ಅದೆಷ್ಟೋ ಸಿನಿಮಾಗಳು ಹಾಗೆ ಉಳಿದುಕೊಂಡವು ಎಂದು ಹೇಳಬಹುದು. ಇನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಪುನೀತ್ ರಾಜಕುಮಾರ್ ಪಡೆದುಕೊಂಡ ಅಡ್ವಾನ್ಸ್ ಹಣವನ್ನ ಏನು ಮಾಡಿದ್ದಾರೆ ಎಂದು ತಿಳಿದರೆ ನಿಮಗೆ ಅವರ ಮೇಲೆ ನಿಜಕ್ಕೂ ಹೆಮ್ಮೆ ಬರುತ್ತದೆ ಎಂದು ಹೇಳಬಹುದು.
ಹಾಗಾದರೆ ಸಿನಿಮಾ ಮಾಡಲು ಪುನೀತ್ ರಾಜಕುಮಾರ್ ಪಡೆದ ಅಡ್ವಾನ್ಸ್ ಹಣವನ್ನ ಪತ್ನಿ ಅಶ್ವಿನಿ ಏನು ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಟ ಪುನೀತ್ ರಾಜಕುಮಾರ್ ಅಂದರೆ ಒಬ್ಬ ಸ್ವಾಭಿಮಾನಿ ಮತ್ತು ತಮಗೆ ನಷ್ಟವಾದರೂ ಪರವಾಗಿಲ್ಲ ಇನ್ನೊಬ್ಬರಿಗೆ ನಷ್ಟವಾಗಬಾರದು ಅನ್ನುವ ಮನಸ್ಸು ಅವರದ್ದು, ಈಗ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಕೂಡ ಅದೇ ಹಾದಿಯನ್ನ ಹಿಡಿದ್ದಾರೆ. ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು.
ಈ ಪೈಕಿ ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ಜೇಮ್ಸ್ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿ ಮ್ಯಾನ್ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಮತ್ತು ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಇನ್ನು ಪುನೀತ್ ಅವರು ಕೆಲವು ಚಿತ್ರಗಳ ಅಡ್ವಾನ್ಸ್ ಹಣವನ್ನ ಪಡೆದುಕೊಂಡಿದ್ದರು, ಆದರೆ ಆ ಚಿತ್ರವನ್ನ ಪೂರ್ಣ ಮಾಡಲು ಪುನೀತ್ ಅವರು ನಮ್ಮಜೊತೆ. ಇನ್ನು ಈಗ ಪುನೀತ್ ಪತ್ನಿ ಅಶ್ವಿನಿ ಅವರು ಪತಿ ಪುನೀತ್ ರಾಜಕುಮಾರ್ ಅವರು ಪಡೆದುಕೊಂಡ ಅಡ್ವಾನ್ಸ್ ಹಣವನ್ನ ನಿರ್ಮಾಪಕರಿಗೆ ವಾಪಾಸ್ ಕೊಟ್ಟಿದ್ದಾರೆ. ಸದ್ಯ ಈ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಸಕತ್ ಸುದ್ದಿಯಲ್ಲಿ ಇದ್ದು ಅಶ್ವಿನಿ ಅವರ ಈ ಸ್ವಭಾವಕ್ಕೆ ಪುನೀತ್ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.