ಇಂದು ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಕರಾಳವಾರ ದಿನವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಹೌದು ಬೆಳಿಗ್ಗೆ ಭಜರಂಗಿ 2 ಚಿತ್ರ ಬಿಡುಗಡೆಯಾದ ಖುಷಿಯಲ್ಲಿ ಜನರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನ ನೋಡುತ್ತಿದ್ದರು, ಆದರೆ ಒಮ್ಮೆಯೇ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಬರಸಿಡಿಲಂತೆ ಅಪ್ಪಳಿಸಿತು ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟ, ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳನ್ನ ಗಳಿಸಿಕೊಂಡಿದ್ದ ನಟ, ಆದೆಷ್ಟೋ ಅನಾಥ ಮಕ್ಕಳಿಗೆ ತಂದೆ ತಾಯಿಯ ರೂಪದಲ್ಲಿ ಇದ್ದ ವ್ಯಕ್ತಿ, ಅದೆಷ್ಟೋ ಹೆತ್ತವರ ಪಾಲಿಗೆ ಮಗನಾಗಿದ್ದ ಹೃದಯವಂತ ಮತ್ತು ಅದೆಷ್ಟೋ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿರುವ ಹೆಮ್ಮೆಯ ಜೀವ ಇಂದು ಬಾರದ ಲೋಕಕ್ಕೆ ಹೋಗಿದ್ದು ಇಡೀ ದೇಶವೇ ಈ ನಟನ ಅಗಲಿಕೆಗೆ ಕಂಬನಿ ಮಿಡಿದಿದೆ ಎಂದು ಹೇಳಬಹುದು.
ಹೌದು ಕನ್ನಡ ಚಿತ್ರರಂಗದ ರಾಜಕುಮಾರನಾದ ನಟ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. ಹೌದು ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದ್ದು ಇಡೀ ರಾಜ್ಯದಂತ ಜನರು ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಬಹುದು. ಬೆಳಿಗ್ಗೆ ಜಿಮ್ ಮಾಡುವ ಸಮಯದಲ್ಲಿ ನಟ ಪುನೀತ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಅವರನ್ನ ಉಳಿಸಿಕೊಳ್ಳಲು ವೈದ್ಯರಿಂದ ಸಾಧ್ಯವಾಗಲಿಲ್ಲ.
ಇನ್ನು ತಮ್ಮನ ವಿಷಯ ತಿಳಿದಿದ್ದೆ ತಡ ಭಜರಂಗಿ ಚಿತ್ರವನ್ನ ನೋಡುತ್ತಿದ್ದ ನಟ ಶಿವಣ್ಣ ಆಸ್ಪತ್ರೆಗೆ ಬಂದಿದ್ದು ತಮ್ಮನ ಪರಿಸ್ಥಿತಿಯನ್ನ ಕಣ್ಣೀರು ಹಾಕಿದ್ದಾರೆ. ಇನ್ನು ತಮ್ಮನ್ನ ಆಸೆಯನ್ನ ಅಣ್ಣ ಶಿವರಾಜ್ ಕುಮಾರ್ ಅವರು ಈಗ ಈಡೇರಿಸಿದ್ದು ಇದು ದೇಶ ಹೆಮ್ಮೆ ಪಡುವ ವಿಚಾರ ಆಗಿದೆ ಎಂದು ಹೇಳಬಹುದು. ಹಾಗಾದರೆ ಪುನೀತ್ ರಾಜ್ ಕುಮಾರ್ ಅವರ ಯಾವ ಆಸೆಯನ್ನ ಶಿವರಾಜ್ ಕುಮಾರ್ ಅವರು ನೆರವೇರಿಸಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದೇವರು ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.
ಹೌದು ನಟ ಪುನೀತ್ ರಾಜ್ ಕುಮಾರ್ ಅವರು ತನ್ನ ಅಗಲಿಕೆಯ ನಂತರ ನೇತ್ರದಾನವನ್ನ ಮಾಡುತ್ತೇನೆ ಎಂದು ಹೇಳಿದ್ದರು ಮತ್ತು ಈಗ ತಮ್ಮನ ಆಸೆಯನ್ನ ಅಣ್ಣ ಶಿವರಾಜ್ ಕುಮಾರ್ ಅವರು ಈಡೇರಿಸಿದ್ದು ತಮ್ಮನ್ನ ನೇತ್ರವನ್ನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನೇತ್ರ ಇನ್ನೊಬ್ಬರ ದಾರಿಗೆ ದೀಪವಾಗಲಿದ್ದು ಪುನೀತ್ ರಾಜ್ ಕುಮಾರ್ ಅವರು ಸದಾ ನಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಬಹುದು. ಸದ್ಯ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನ ಮಾಡಲಾಗುತ್ತಿದೆ.