ನಟ ಪುನೀತ್ ರಾಜಕುಮಾರ್ ಕನ್ನಡ ಮತ್ತು ದೇಶದ ಚಿತ್ರರಂಗ ಕಂಡ ಖ್ಯಾತ ನಟ. ನಟ ಪುನೀತ್ ರಾಜಕುಮಾರ್ ಅವರು ಇಂದು ನಮ್ಮಜೊತೆ ಇಲ್ಲ ಅನ್ನುವುದನ್ನ ನಮಗೆ ಊಹೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರಿಗೆ ನಟ ಪುನೀತ್ ರಾಜಕುಮಾರ್ ಅವರ ಬಹಳ ಬೇಗನೆ ಇಷ್ಟವಾಗಿ ಅವರನ್ನ ತಮ್ಮಬಳಿ ಕರೆದುಕೊಂಡ ಎಂದು ಹೇಳಬಹುದು. ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಮೂರೂ ವಾರಗಳು ಕಳೆದಿದೆ, ಆದರೆ ಅವರ ನಗುಮುಖ ನಮ್ಮ ಮನದಲ್ಲಿ ನಾವು ಸಾಯುವ ತನಕ ಹಾಗೆ ಇರುತ್ತದೆ ಎಂದು ಹೇಳಬಹುದು. ಇನ್ನು ಕಳೆದ ವಾರ ನಡೆದ ಪುನೀತ್ ರಾಜಕುಮಾರ್ ಅವರ 12 ನೇ ದಿನದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಸುಮಾರು 35 ಸಾವಿರಕ್ಕೂ ಅಧಿಕ ಜನರು ಬಂದಿದ್ದು ಅವರ ಪ್ರಸಾದವನ್ನ ಸ್ವೀಕಾರ ಮಾಡಿದರು ಎಂದು ಹೇಳಬಹುದು.
ಇನ್ನು ನಿನ್ನೆ ಬೆಂಗಳೂರಿನಲ್ಲಿ ಪುನೀತ ನಮನ ಕಾರ್ಯಕ್ರಮ ನಡೆದಿದ್ದು ಬಹಳ ಅಭಿಮಾನಿಗಳು, ಗಣ್ಯ ನಟರು ಮತ್ತು ರಾಜಕೀಯ ನಾಯಕರು ಭಾಗವಹಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ನಟ ಪುನೀತ್ ರಾಜಕುಮಾರ್ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿದರು. ಇನ್ನು ನಿನ್ನೆ ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರು ಕೂಡ ಬಂದಿದ್ದರು, ಆದರೆ ಅವರು ಬಂದ ಸಮಯದಲ್ಲಿ ಒಂದು ಘಟನೆ ನಡೆದಿದ್ದು ಸದ್ಯ ಅದರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಹಾಗಾದರೆ ಆ ಘಟನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಸುಮಾರು 140ಕ್ಕೂ ಅಧಿಕ ಮಂದಿ ಕಲಾವಿದರಿಗೆ ಆಹ್ವಾನ ನೀಡಲಾಗಿತ್ತು ಮತ್ತು ಅವರಿಗೆ ಪಾಸ್ ನೀಡಲಾಗಿದ್ದು ಅದನ್ನ ತೋರಿಸಿಯೇ ಕಾರ್ಯಕ್ರಮದ ಒಳಗೆ ಬರಬೇಕು ಎಂದು ಹೇಳಲಾಗಿತ್ತು. ಇನ್ನು ಪುನೀತ್ ನಮನ ಕಾರ್ಯಕ್ರಮಕ್ಕೆ ಬರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಕೊಟ್ಟಿದ್ದ ಪಾಸ್ ಅನ್ನು ಮರೆತು ಬಂದಿದ್ದರು ಮತ್ತು ಈ ಕಾರಣಕ್ಕೆ ಕೆಲ ಹೊತ್ತು ಪೊಲೀಸರು ದರ್ಶನ್ ಅವರನ್ನ ತಡೆದು ನಿಲ್ಲಿಸಿದ್ದರು ಹಾಗೆ ದರ್ಶನ್ ಅವರು ಪೋಲೀಸರ ಬಳಿ ನಾನು ಪಾಸ್ ಬಿಟ್ಟಿಬಂದಿರುವುದಾಗಿ ಹೇಳಿಕೊಂಡರು ಕೂಡ ಪೊಲೀಸರು ಅವರನ್ನ ಒಳಗೆ ಬಿಡಲಿಲ್ಲ ಎಂದು ಹೇಳಬಹುದು.
ನಟ ದರ್ಶನ್ ಅವರು ಯಶಸ್ ಸೂರ್ಯ ಸೇರಿದಂತೆ ಚಿತ್ರರಂಗದ ಸ್ನೇಹಿತರು ಹಾಗೂ ಆಪ್ತರೊಂದಿಗೆ ದರ್ಶನ ಅರಮನೆ ಮೈದಾನಕ್ಕೆ ಬಂದಿದ್ದರು, ಆ ಸಮಯದಲ್ಲಿ ಪಾಸ್ ಚೆಕ್ ಮಾಡುತ್ತಿದ್ದ ಪೊಲೀಸರು ದರ್ಶನ್ ಅವರನ್ನ ತಡೆದು ಪಾಸ್ ತೋರಿಸುವಂತೆ ಮನವಿಯನ್ನ ಮಾಡಿಕೊಂಡಿದ್ದಾರೆ, ಆದರೆ ದರ್ಶನ್ ಅವರು ಪಾಸ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರು ಮತ್ತು ಹೀಗಾಗಿ ಚಾಲೆಂಜಿಂಗ್ ಸ್ಟಾರ್ ಕೆಲ ಸಮಯ ಹೊರಗೆ ನಿಲ್ಲಬೇಕಾಗಿತ್ತು. ಇನ್ನು ಈ ಸಮಯದಲ್ಲಿ ಪಾಸ್ ಇದ್ದರೆ ಮಾತ್ರ ಒಳಗೆ ಬಿಡುತ್ತೇವೆ ಎಂದು ಹೇಳಿದ ಪೋಲೀಸರ ಬಳಿ ದರ್ಶನ್ ಅವರು ಮನವಿಯನ್ನ ಮಾಡಿಕೊಂಡಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ, ಹೀಗಾಗಿ ಪಾಸ್ ಇದ್ದರೆ ಮಾತ್ರ ಒಳಗೆ ಬಿಡುತ್ತೇವೆ ಎಂದು ಹೇಳಿದ್ದಾರೆ ಪೊಲೀಸರು.
ಈ ಸಮಯದಲ್ಲಿ ದರ್ಶನ್ ಅವರು ನನಗೆ ಕೂರಲು ಅವಕಾಶ ಇಲ್ಲದೆ ಇದ್ದರು ಪರವಾಗಿಲ್ಲ, ನಿಂತುಕೊಂಡೆ ಕಾರ್ಯಕ್ರಮವನ್ನ ನೋಡುತ್ತನೆ, ಕುಡಿಯಲು ನೀರು ಸಿಗದೆ ಇದ್ದರೂ ಪರವಾಗಿಲ್ಲ ಎಂದು ಮನವಿ ಮಾಡಿಕೊಂಡು ಬಳಿಕ ಪೊಲೀಸ್ ಒಳಗೆ ಬಿಟ್ಟಿದ್ದಾರೆ. ಅವರು ಬರುವುದು ಸ್ವಲ್ಪ ತಡವಾದ ಕಾರಣ ಅಲ್ಲಿ ಕುಳಿತುಕೊಳ್ಳಲು ಜಾಗ ಕೂಡ ಇರಲಿಲ್ಲ. ಸೆಲೆಬ್ರೆಟಿಗಳಿಗೆ ಅಂತ ಮೀಸಲಾಗಿದ್ದ ಆಸನಗಳು ಅದಾಗಲೇ ಫುಲ್ ಆಗಿತ್ತು, ಹೀಗಾಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕಿತ್ತು. ಅಲ್ಲಿ ಜನರು ಹೆಚ್ಚಿದ್ದರಿಂದ ದರ್ಶನ್ ಹೆಚ್ಚು ಹೊತ್ತು ಇರದೆ ಬೇಗನೆ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.