Pure EV: ಸಿಂಗಲ್ ಚಾರ್ಜ್ ನಲ್ಲಿ 201 Km ಮೈಲೇಜ್ ಕೊಡುತ್ತೆ ಈ ಸ್ಕೂಟರ್, ಅಗ್ಗದ ಈ ಸ್ಕೂಟರ್ ಗೆ ಸಿಕಾಪಟ್ಟೆ ಡಿಮ್ಯಾಂಡ್.

ಸಂಪೂರ್ಣ ಚಾರ್ಜ್ ನಲ್ಲಿ 201 ಕಿಲೋಮೀಟರ್ ಮೈಲೇಜ್ ನೀಡುವ Pure EV ಎಲೆಕ್ಟ್ರಿಕ್ ಸ್ಕೂಟರ್.

Pure EV New Electric Scooter: ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲಿ ಎಲೆಕ್ಟ್ರಿಕ್ ವಾಹನಗಳು ಇತ್ತೀಚಿಗೆ ಹೆಚ್ಚು ಸೇಲ್ ಕಾಣುತ್ತಿದೆ. ಪೆಟ್ರೋಲ್ ಡೀಸೆಲ್ ಗಳ ಬೆಲೆ ಗಣನೀಯ ಏರಿಕೆಯಿಂದಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡಲು ಬಯಸುತ್ತಾರೆ.

ಪ್ಯೂರ್ ಇವಿ ಮೋಟಾರು ವಾಹನ ಕಂಪನಿ ಇದೀಗ ಉತ್ತಮ ವಿಶೇಷತೆ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನೆಡೆಸುತ್ತಿದೆ.

 Epluto 7G Max Electric Scooter Mileage
Image Credit: Bhaskar

Pure EV New Electric Scooter
ಪ್ಯೂರ್ ಇವಿ ಕಂಪನಿ Epluto 7G Max ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹಾಗೆ Pure EV ಮುಂಬರುವ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟದ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ. PURE EV Epluto 7G Max Electric Scooter ನ ಬುಕಿಂಗ್‌ಗಳು ದೇಶದಾದ್ಯಂತ ಆರಂಭವಾಗಿದೆ. ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ 7G Max Electric Scooter ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

PURE EV Epluto 7G Max Mileage And Battery Capacity
PURE EV Epluto 7G Max Electric Scooter 3 .5 kWh ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. Epluto 7G Max ಸಂಪೂರ್ಣ ಚಾರ್ಜ್ ನಲ್ಲಿ 201 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. PURE EV ಸ್ಕೂಟರ್ 60,000 ಕಿಲೋಮೀಟರ್ ಸ್ಟ್ಯಾಂಡರ್ಡ್ ಬ್ಯಾಟರಿ ವಾರಂಟಿ ಜೊತೆಗೆ 70,000 ಕಿಲೋಮೀಟರ್ ವಿಸ್ತೃತ ವಾರಂಟಿ ಆಫರ್ ಪಡೆದುಕೊಂಡಿದೆ.

PURE EV Epluto 7G Max Electric Scooter
Image Credit: Punenow

PURE EV Epluto 7G Max Electric Scooter Feature
Epluto 7G Max Electric Scooter ನ ವಿನ್ಯಾಸ ರೆಟ್ರೋ ಮಾದರಿಯಲ್ಲಿದೆ. LED ದೀಪಗಳು, ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್ ಮುಂತಾದ ಆಧುನಿಕ ಅಂಶಗಳೊಂದಿಗೆ ಗ್ರಾಹಕರ ಕೈ ಸೇರುತ್ತದೆ. ಹಿಲ್-ಸ್ಟಾರ್ಟ್ ಅಸಿಸ್ಟ್, ಡೌನ್‌ಹಿಲ್ ಅಸಿಸ್ಟ್, ಕೋಸ್ಟಿಂಗ್ ರೆಜೆನ್, ರಿವರ್ಸ್ ಮೋಡ್, ಬ್ಯಾಟರಿ ದೀರ್ಘಾಯುಷ್ಯಕ್ಕಾಗಿ ಸ್ಮಾರ್ಟ್ AI ಮುಂತಾದ ಸುಧಾರಿತ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

Join Nadunudi News WhatsApp Group

Epluto 7G Max Electric Scooter Price
ಪ್ಯೂರ್ ಇವಿ ಮೋಟಾರು ವಾಹನ ಕಂಪನಿ Epluto 7G Max Electric Scooter ಅನ್ನು 114999 ಎಕ್ಸ್ ಶೋರೂಮ್ ಬೆಳೆಗೆ ಬಿಡುಗಡೆ ಮಾಡುದಾಗಿ ಘೋಷಣೆ ಮಾಡಿದೆ. ಈ ರೆಟ್ರೊ ಥೀಮ್ ಎಲೆಕ್ಟ್ರಿಕ್ ಸ್ಕೂಟರ್ ಮ್ಯಾಟ್ ಬ್ಲ್ಯಾಕ್, ಕೆಂಪು, ಬೂದು ಮತ್ತು ಬಿಳಿ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.

Join Nadunudi News WhatsApp Group