Puttakkana Makkalu: ಸ್ನೇಹ ಮುಂದೆ ಬಯಲಾಯಿತು ಕಂಠಿಯ ಇನ್ನೊಂದು ನಿಜ ರೂಪ, ಸ್ನೇಹ ಮುಂದಿನ ನಡೆ ಇನ್ನು ಕಠಿಣ.
ಸ್ನೇಹಾಳ ಮುಂದೆ ಕಂಠಿ ಇನ್ನೊಂದು ಬಣ್ಣ ಬಯಲು.
Puttakkana Makkalu Kannada Serial Latest: ಕನ್ನಡ ಖ್ಯಾತ ಹಿರಿಯ ನಟಿ ಉಮಾಶ್ರೀ ಅಭಿನಯದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ವಾಹಿನಿಯಲ್ಲಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪುಟ್ಟಕ್ಕನ ಮೂರು ಹೆಣ್ಣು ಮಕ್ಕಳ ಕಥೆ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದೆ.
ಇದೀಗ ಧಾರಾವಾಹಿಯ ನಾಯಕ ನಾಯಕಿಯಾದ ಕಂಠಿ ಹಾಗೂ ಸ್ನೇಹ ಮದುವೆಯಾಗಿದ್ದು ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವುಗಳು ಹುಟ್ಟಿಕೊಂಡಿದೆ. ಕಂಠಿ ಹಾಗೂ ಸ್ನೇಹ ಜಗಳ, ಪ್ರೀತಿ ಧಾರಾವಾಹಿ ಪ್ರಿಯರನ್ನು ಸೆಳೆಯುತ್ತಿದೆ. ಕಂಠಿ ಸ್ನೇಹಾಳಿಗೆ ಅರಿವಿಲ್ಲದೆ ತಾಳಿಯನ್ನು ಕಟ್ಟಿರುತ್ತಾನೆ. ಹಾಗೆ ಸ್ನೇಹ ಬಳಿ ಕಂಠಿ ಪ್ರೀತಿ ಮಾಡುವ ಸಮಯದಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳಿರುತ್ತಾರೆ.
ಮದುವೆಯಾದ ಸಮಯದಲ್ಲಿ ಕಂಠಿ ಬಂಗಾರಮ್ಮನ ಮಗ ಎನ್ನುವ ಸತ್ಯ ಸ್ನೇಹಾಳಿಗೆ ತಿಳಿಯುತ್ತದೆ. ಈ ವೇಳೆ ಸ್ನೇಹಾಳಿಗೆ ಕಂಠಿಯ ಮೇಲೆ ಸಾಕಷ್ಟು ಕೋಪ ಬಂದು ಕಂಠಿಯನ್ನು ತಿರಸ್ಕರಿಸುತ್ತಾಳೆ. ಆದರೆ ತನ್ನ ಅವ್ವನ ಮಾತಿಗೆ ಬೆಲೆ ವಲ್ಲದ ಮನಸ್ಸಿನಲ್ಲಿ ಬಂಗಾರಮ್ಮನ ಮನೆಗೆ ಸ್ನೇಹ ಸೊಸೆಯಾಗಿ ಹೋಗುತ್ತಾಳೆ.
ಸ್ನೇಹಾಳ ಬಳಿ ಸುಳ್ಳು ಹೇಳಿರುವ ಕಂಠಿ
ಇನ್ನು ಬಂಗಾರಮ್ಮನ ಮನೆಗೆ ಹೋದ ಬಳಿಕ ಸ್ನೇಹ ಕಂಠಿ ಮೇಲೆ ಅಸಮಾಧಾನವನ್ನು ತೋರುತ್ತಾಳೆ. ಕಂಠಿ ಎಲ್ಲವನ್ನು ಸಹಿಸಿಕೊಂಡು ಇರುತ್ತಾನೆ. ಇದಾದ ಬಳಿಕ ಸ್ನೇಹಾಳಿಗೆ ಬಡ್ಡಿ ವ್ಯವಹಾರದ ಕೆಲಸ ಇಷ್ಟವಿರುವುದಿಲ್ಲ. ಹೀಗಾಗಿ ಕಂಠಿ ಮತ್ತು ಅವನ ಸ್ನೇಹಿತರಿಗೆ ಬಡ್ಡಿ ವ್ಯವಹಾರವನ್ನು ನಿಲ್ಲಿಸಿ ಬೇರೆ ಕೆಲಸ ನೋಡಿಕೊಳ್ಳಿ ಎಂದು ಸಾಕಷ್ಟು ಬಾರಿ ಹೇಳುತ್ತಾಳೆ.
ಈ ಕಾರಣಕ್ಕೆ ಕಂಠಿ ಸ್ನೇಹಾಳ ಖುಷಿಗಾಗಿ ಬಡ್ಡಿ ವ್ಯವಹಾರವನ್ನು ಬಿಟ್ಟು ಸ್ವಂತವಾಗಿ ಕೆಲಸ ಮಾಡಬೇಕೆಂದು ನಿರ್ಧರಿಸುತ್ತಾಳೆ. ಇನ್ನೊಂದೆಡೆ ಪುಟ್ಟಕ್ಕ ಬಂಗಾರಮ್ಮನ ವಿ ಬಳಿ 15 ಲಕ್ಷ ಸಾಲ ತೆಗೆದುಕೊಂಡ ವಿಷಯ ತಿಳಿದ ಸ್ನೇಹ ತಾನೇ ಸಾಲ ತೀರಿಸುವುದಾಗಿ ಬಂಗಾರಮ್ಮನಿಗೆ ಹೇಳುತ್ತಾಳೆ. ಈ ವೇಳೆ ಕಂಠಿ ಕೂಡ ನಾನಕ್ ಸಾಲವನ್ನು ತೀರಿಸುತ್ತೇನೆ ಎನ್ನುತ್ತಾಳೆ.
ಇನ್ನು ಕಂಠಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಸ್ನೇಹ ಬೆಂಗಾವಲಾಗಿ ನಿಲ್ಲಲು ಬಯಸುತ್ತಾಳೆ. ಈ ಕಾರಣಕ್ಕೆ ಬ್ಯಾಂಕ್ ನಲ್ಲಿ ಲೋನ್ ಪಡೆಯಲು ಸ್ನೇಹ ಕಂಠಿಗೆ ಹೇಳುತ್ತಾಳೆ. ಕಂಠಿ ಕೃಷಿ ಬಗ್ಗೆ ಓದಿರುವುದಾಗಿ ಸ್ನೇಹಾಳ ಬಳಿ ಸುಳ್ಳು ಹೇಳಿರುತ್ತಾರೆ. ಆದರೆ ಕಂಠಿ ಸುಳ್ಳು ಹೇಳಿರುವ ವಿಷಯ ಸ್ನೇಹಾಳಿಗೆ ತಿಳಿದಿರುವುದಿಲ್ಲ. ಕಂಠಿ ತಾನು ನಿಜ ಹೇಳುತ್ತೇನೆ ಎಂದು ಅವನ ಸ್ನೇಹಿತರ ಬಳಿ ಹೇಳಿದ ಅವರು ತಡೆಯುತ್ತಾರೆ.
ಸ್ನೇಹ ಮುಂದೆ ಬಯಲಾಯಿತು ಕಂಠಿಯ ಇನ್ನೊಂದು ನಿಜ ರೂಪ
ಇನ್ನು ಬ್ಯಾಂಕ್ ಗೆ ಹೋಗಿ ಸ್ನೇಹ ಕಂಠಿಗಾಗಿ ಕಾಯುತ್ತಾಳೆ.ಈ ವೇಳೆ ಕಂಠಿ ಸತ್ಯವನ್ನು ಹೇಳಬೇಕೆಂದು ಬಯಸುತ್ತಾನೆ. ಆದರೆ ಸಿದ್ದೇಶ ಹಾಗು ಹಗು ಇತರ ಸ್ನೇಹಿತರು ಬಂದು ಕಂಠಿಗೆ ನಕಲಿ ಡಾಕ್ಯುಮೆಂಟ್ ಗಳನ್ನು ನೀಡುತ್ತಾರೆ.
ಸ್ನೇಹ ಡಾಕ್ಯುಮೆಂಟ್ ಅನ್ನು ತೆಗೆದುಕೊಂಡು ಸಾಲ ಕೇಳಲು ಹೋಗುವಂತೆ ಹೇಳುತ್ತಾಳೆ. ಆದರೆ ಕಂಠಿಗೆ ತನ್ನ ಸುಳ್ಳು ಹೇಳಿ ಅದನ್ನು ಮುಚ್ಚಿಟ್ಟು ಇನ್ನು ದೊಡ್ಡ ತಪ್ಪು ಮಾಡುತ್ತಿದ್ದೇನೆ ಅನಿಸುತ್ತದೆ. ಈ ಕಾರಣಕ್ಕೆ ಸ್ನೇಹಾಳ ಬಳಿ ಎಲ್ಲ ಸತ್ಯವನ್ನು ಹೇಳಲು ಬಯಸುತ್ತಾನೆ. ಇನ್ನು ಕಂಠಿ ಸ್ನೇಹಾಳ ಬಳಿ ತಾನು ಅನಕ್ಷರಸ್ಥ ಎನ್ನುವ ವಿಷಯವನ್ನು ಹೇಳುತ್ತಾನೆ ಮತ್ತು ಈ ಸತ್ಯ ತಿಳಿದ ಸ್ನೇಹ ಹೇಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.