Kanti And Sneha: ಬಂಗಾರಮ್ಮನ ಮುಂದೆ ಬಯಲಾಯಿತು ಕಂಠಿ ಮಾಡಿದ ಮಾಸ್ಟರ್ ಪ್ಲ್ಯಾನ್, ಕಂಠಿ ಮುಂದಿನ ನಡೇ ಏನು…?
ಮಗನ ಬಂಡವಾಳ ಬಂಗಾರಮ್ಮನ ಮುಂದೆ ಬಯಲು.
Puttakkana Makkalu Latest Episode: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಅತಿ ಹೆಚ್ಚು ಪ್ರೇಕ್ಷಕರನ್ನು ಪಡೆದುಕೊಂಡಿದೆ. ಪ್ರಸ್ತುತ 7:30 ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರವಾಗುತ್ತಿದ್ದು ಧಾರಾವಾಹಿ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಾರಿಗಳಾದ ಸ್ನೇಹ ಮತ್ತು ಕಂಠಿ ಮದುವೆ ಅನಿರೀಕ್ಷಿತವಾಗಿ ನಡೆದಿದೆ.
ಸ್ನೇಹ ಮತ್ತು ಕಂಠಿ ಮದುವೆಯ ನಂತರ ಧಾರಾವಾಹಿಯಲ್ಲಿ ರೋಚಕ ತಿರುವುಗಳು ಏರ್ಪಟ್ಟಿವೆ. ಇನ್ನು ಧಾರಾವಾಹಿ ಪ್ರಿಯರು ಸ್ನೇಹ ಮತ್ತು ಕಂಠಿ ಮದುವೆ ಆಗಲಿ ಎಂದು ಕಾಯುತ್ತಿದ್ದರು ಆದರೆ ಅನಿರೀಕ್ಷಿತ ತಿರುವುಗಳಿಂದ ಸ್ನೇಹ ಮತ್ತು ಕಂಠಿ ವಿವಾಹವಾಗಿದ್ದಾರೆ ಸ್ನೇಹ ವಲ್ಲದ ಮನಸ್ಸಿನಿಂದ ಕಂಠಿ ಮನೆಗೆ ಪ್ರವೇಶಿಸಿದ್ದಾಳೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸೃಷ್ಟಿಯಾಗಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಪುಟ್ಟಕ್ಕನ ಮಾತಿಗೆ ಗೌರವ ನೀಡಿ ಸ್ನೇಹ ಬಂಗಾರಮ್ಮನ ಸೊಸೆಯಾಗಿ ಕಂಠಿ ಮನೆಯನ್ನು ಪ್ರವೇಶಿಸಿದ್ದಳು. ಸೊಸೆಯನ್ನು ಮನೆಯ ಒಳಗೆ ಸೇರಿಸಿಕೊಳ್ಳಲು ಬಂಗಾರಮ್ಮನಿಗೆ ಸ್ವಲ್ಪವೂ ಇಷ್ಟಇರುವುದಿಲ್ಲ. ಆದರೂ ಪಂಚಾಯತಿಯ ತೀರ್ಮಾನಕ್ಕೆ ಗೌರವ ನೀಡಿ ಸುಮ್ಮನಿರುತ್ತಾಳೆ. ಇನ್ನು ಬಂಗಾರಮ್ಮನ ಮನೆಯಲ್ಲಿ ಸ್ನೇಹ ಪ್ರತ್ಯೆಕವಾಗಿ ಅಡುಗೆ ಮಾಡಿಕೊಂಡು, ಕಂಠಿ ಮನೆಯವರ ಮೇಲೆ ಅವಲಂಭಿತವಾಗದೆ ಸ್ವಾವಲಂಬಿಯಾಗಿ ಇರಲು ಬಯಸುತ್ತಾಳೆ.
ಬಡ್ಡಿ ವ್ಯವಹಾರವನ್ನು ವಿರೋಧಿಸುವ ಸ್ನೇಹ
ಇನ್ನು ಬಂಗಾರಮ್ಮ ಬಡ್ಡಿ ವ್ಯವಹಾರ ಮಾಡುವುದು ಸ್ನೇಹಾಳಿಗೆ ಸ್ವಲ್ಪವೂ ಇಷ್ಟವಿರುವುದಿಲ್ಲ. ಹೀಗಾಗಿ ಸ್ನೇಹ ಬಡ್ಡಿ ವ್ಯವಹಾರವನ್ನು ವಿರೋಧಿಸುತ್ತಲೇ ಇರುತ್ತಾಳೆ. ಇನ್ನು ಬಂಗಾರಮ್ಮ ಕಂಠಿ ಹಾಗು ಅವರ ಗೆಳೆಯರ ಬಳಿ ಈ ಬರಿ ಬಡ್ಡಿ ವಸೂಲಿಯ ಬಗ್ಗೆ ಚರ್ಚಿಸುತ್ತಾಳೆ.
ಆಗ ಬಡ್ಡಿ ವಸೂಲಿ ಆಗಿರದೆ ಇರುವ ಬಗ್ಗೆ ಬಂಗಾರಮ್ಮನಿಗೆ ತಿಳಿಯುತ್ತದೆ. ಈ ವೇಳೆ ಬಂಗಾರಮ್ಮ ಬಡ್ಡಿ ವಸೂಲಿ ಮಾಡುವಂತೆ ಕಂಠಿ ಹಾಗು ಸಂಗಡಿಗರಿಗೆ ಹೇಳುತ್ತಾಳೆ. ಈ ವಿಷಯ ತಿಳಿದ ಸ್ನೇಹ ಬಡ್ಡಿ ವಸೂಲಿ ಮಾಡುತ್ತಿರುವ ಮಾರ್ಕೆಟ್ ಹೋಗಿ ಕಂಠಿ ಹಾಗು ಅವನ ಗೆಳೆಯರಿಗೆ ಬೈಯುತ್ತಾಳೆ. ಆಗ ಕಂಠಿ ಸ್ನೇಹ ಮಾತನ್ನು ಮೀರಲು ಆಗದೆ ಬಡ್ಡಿ ವಸೂಲಿಯನ್ನು ಮಾಡುವುದಿಲ್ಲ.
ಗೋಪಾಲನ ಬಳಿ ಹಣ ಪಡೆದ ಕಂಠಿ
ನಂತರ ಕೊಂದಂಡ ಕರೆ ಮಾಡಿ ಮುಂಗುಸಿ ಹತ್ತಿರ ಬಡ್ಡಿ ವಸೂಲಿ ಬಗ್ಗೆ ವಿಚಾರಿಸುತ್ತಾರೆ. ಆಗ ತನ್ನ ಅವ್ವನಿಗೆ ಬಡ್ಡಿ ಹಣವನ್ನು ನೀಡಲು ಕಂಠಿ ಗೋಪಾಲನ ಬಳಿ ಹಣ ಪಡೆದುಕೊಳ್ಳುತ್ತಾನೆ. ಗೋಪಾಲ ಅಳಿಯಂದ್ರು ಕೇಳುತ್ತಿದ್ದರೆ ಎನ್ನುವ ಕುಶಿಗೆ ಹಣವನ್ನು ನೀಡುತ್ತಾನೆ. ಈ ಪ್ಲಾನ್ ನ ಮೂಲಕ ಅಮ್ಮನಿಗೂ ಹಾಗೂ ಸ್ನೇಹಾಳಿಗೂ ಬೇಸರ ಆಗಬಾರದು ಎಂದು ಕಂಠಿ ನಿರ್ಧರಿಸುತ್ತಾನೆ. ನಂತರ ಮನೆಗೆ ಹೋಗಿ ಬಡ್ಡಿ ವಸೂಲಿ ಮಾಡಿರುವುದಾಗಿ ಹೇಳಿ ಹಣವನ್ನು ಕಂಠಿ ಬಂಗಾರಮ್ಮನಿಗೆ ನೀಡುತ್ತಾನೆ.
ಉಲ್ಟಾ ಹೊಡೆದಿದೆ ಕಂಠಿ ಪ್ಲಾನ್
ಇನ್ನೇನು ಸಮಸ್ಯೆ ಮುಗಿಯಿತು ಎನ್ನುವಷ್ಟರಲ್ಲಿ ಗೋಪಾಲ ಕುಡಿದು ಬಂದು ಅವನ ಸ್ನೇಹಿತನನ್ನು ಕರೆದುಕೊಂಡು ಬಂದು ಅಳಿಯಂದಿರೇ ಎಂದು ಜೋರಾಗಿ ಕರೆಯುತ್ತಾನೆ. ಕುಡಿದ ಮತ್ತಿನಲ್ಲಿ ಗೋಪಾಲ ಕಂಠಿ ತನ್ನ ಬಳಿ 30 ಸಾವಿರ ಹಣ ಪಡೆದಿರುವುದಾಗಿ ಹೇಳುತ್ತಾನೆ.
ಆಗ ಬಂಗಾರಮ್ಮನಿಗೆ ಕಂಠಿ ಕೊಟ್ಟಿರುವುದು ಬಡ್ಡಿ ವಸೂಲಿಯ ಹಣವಲ್ಲ ಬದಲಾಗಿ ಗೋಪಾಲನಿಂದ ಪಡೆದಿರುವ ಹಣ ಎಂಬ ವಿಚಾರ ತಿಳಿಯುತ್ತದೆ. ಹೀಗಾಗಿ ಗೋಪಾಲನಿಗೆ ಬೈದು ಬಂಗಾರಮ್ಮ ಕಂಠಿ ಮೇಲೆ ಕೋಪಮಾಡಿಕೊಂಡು ಒಳಗೆ ಹೋಗುತ್ತಲೇ. ಸ್ನೇಹ ಕೂಡ ಕಂಠಿ ಮೇಲೆ ಕೋಪಗೊಳ್ಳುತ್ತಲೇ. ಇನ್ನು ಕೋಪಗೊಂಡಿರುವ ತಾಯಿ ಮತ್ತು ಪತ್ನಿಯನ್ನು ಕಂಠಿ ಹೇಗೆ ಸಮಾಧಾನಪಡಿಸುತ್ತಾನೆ ಎನ್ನುವದನ್ನು ಕಾದು ನೋಡಬೇಕಿದೆ.