Puttakkana Makkalu: ಪುಟ್ಟಕ್ಕ ಆಸ್ಫತ್ರೆ ಸೇರಿದ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ಕಂಠಿ, ಕಂಠಿ ನಿರ್ಧಾರಕ್ಕೆ ದಂಗಾದ ಸ್ನೇಹ.
ಪುಟ್ಟಕ್ಕನ ಮೆಸ್ ಗೆ ಬೆಂಕಿ ಬಿದ್ದ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ಕಂಠಿ.
Kanti And Bangaramma: ಧಾರಾವಾಹಿ ಪ್ರಿಯರ ನೆಚ್ಚಿನ ಧಾರಾವಾಹಿಯಾದ ‘ಪುಟ್ಟಕ್ಕನ ಮಕ್ಕಳು’ ಅತಿ ಹೆಚ್ಚಿನ ಪ್ರೇಕ್ಷರನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಆರಂಭಗೊಂಡಾಗಿನಿಂದ ಟಾಪ್ ಒನ್ TRP ಯನ್ನು ಪಡೆದುಕೊಂಡಿದೆ. ಪ್ರತಿ ದಿನ ಹೊಸ ಹೊಸ ತಿರುವುಗಳೊಂದಿಗೆ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಧಾರಾವಾಹಿ ಪ್ರಿಯರನ್ನು ಸೆಳೆಯುತ್ತದೆ.
ಇನ್ನೂ ಸ್ನೇಹ ಹಾಗೂ ಕಂಠಿ ಮದುವೆಯ ಬಳಿಕ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ ಹುಟ್ಟಿಕೊಂಡಿವೆ. ಕಂಠಿ ಸುಳ್ಳಿನ ಸುರಿಮಳೆ ಸುರಿಸಿ ಸ್ನೇಹಳನ್ನು ಮದುವೆಯಾಗಿದ್ದಾರೆ. ಕಂಠಿ ಮುಚ್ಚಿಟ್ಟ ಒಂದೊಂದೇ ಸತ್ಯ ಇದೀಗ ಸ್ನೇಹ ಮುಂದೆ ಬಯಲಾಗುತ್ತಿದೆ. ಈ ಕಾರಣಕ್ಕೆ ಸ್ನೇಹ ಕಂಠಿ ಮನೆ ಬಿಟ್ಟು ಪುಟ್ಟಕ್ಕನ ಮನೆಗೆ ಹೋಗಿದ್ದಾಳೆ. ಇನ್ನೂ ಪುಟ್ಟಕ್ಕ ತನ್ನ ಮಕ್ಕಳು ಮತ್ತು ಅಳಿಯಂದಿರ ಜೊತೆಯಲ್ಲಿ ಮನೆ ದೇವರಿಗೆ ಹೋದಾಗ ಮೆಸ್ಸ್ ನಲ್ಲಿ ದೊಡ್ಡ ಅನಾಹುತವೇ ನಡೆಯುತ್ತದೆ.
ಪುಟ್ಟಕ್ಕನ ಮೆಸ್ ಗೆ ಬೆಂಕಿ
ಇನ್ನೂ ಪುಟ್ಟಕ್ಕ ಮನೆಯಲ್ಲಿ ಇಲ್ಲದೆ ಇರುವ ಸಮಯದಲ್ಲೂ ಮೆಸ್ ಗೆ ಬೆಂಕಿ ಹಾಕಲಾಗಿದೆ. ಬೆಂಕಿ ಹೊತ್ತಿಕೊಂಡು ಉರಿದಾಗ ಊರವರು ಬಂದು ಬೆಂಕಿಯನ್ನು ಆರಿಸುತ್ತಾರೆ. ಊರವರು ಪುಟ್ಟಕ್ಕನಿಗೆ ಫೋನ್ ಮಾಡಿ ಮೆಸ್ ಗೆ ಬೆಂಕಿ ಬಿದ್ದಿರುವ ವಿಚಾರ ತಿಳಿಸುತ್ತಾರೆ. ಆಘಾತಗೊಂಡ ಪುಟ್ಟಕ್ಕ ಮೆಸ್ ಗೆ ಬರುತ್ತಾಳೆ. ಇನ್ನೂ ಬೆಂಕಿಯಿಂದಾಗಿ ಪುಟ್ಟಕ್ಕನ ಮೆಸ್ ಸಂಪೂರ್ಣ ಆಹುತಿಯಾಗುತ್ತದೆ. ಮೆಸ್ ಗೆ ಬೆಂಕಿ ಬಿದ್ದಿರುವುದನ್ನು ಪುಟ್ಟಕ್ಕನಿಗೆ ತಡೆದುಕೊಳ್ಳಲು ಆಗುವುದಿಲ್ಲ. ಪುಟ್ಟಕ್ಕನ ಗೋಳಾಟ ಕಂಡು ಇಡೀ ಊರವರು ಬೇಸರ ಹೊರಹಾಕುತ್ತಾರೆ.
ಮೆಸ್ ಗೆ ಬೆಂಕಿ ಹಾಕಿದ ಆರೋಪ ಬಂಗಾರಮ್ಮನ ಮೇಲೆ
ಇನ್ನೂ ಮೆಸ್ ಗೆ ಬೆಂಕಿ ಹಚ್ಚುತ್ತಿರುವ ಮಾರಾ ಸಿಕ್ಕಿ ಹಾಕಿಕೊಳ್ಳುತ್ತಾನೆ. ಮಾರ ಬೆಂಕಿ ಹಚ್ಚುತ್ತಿರುವ ವಿಡಿಯೋ ಪೊಲೀಸ್ ಗೆ ಸಿಕ್ಕಿ ಮಾರನನ್ನು ಪೊಲೀಸ್ ಬಂಧಿಸುತ್ತಾರೆ. ಇನ್ನೂ ರಾಜೇಶ್ವರಿ ಹಾಗು ಗೋಪಾಲ ಪುಟ್ಟಕನ್ನ ಬಳಿ ಬರುತ್ತಾಳೆ. ರಾಜೇಶ್ವರಿಯೇ ಮೆಸ್ ಗೆ ಬೆಂಕಿ ಹಾಕಿದ್ದಾಳೆ ಎಂದು ಊರವರು ಹೇಳುತ್ತಾಳೆ. ಊರವರು ರಾಜೇಶ್ವರಿ ಹಾಗೂ ಗೋಪಾಲನಿಗೆ ಬೈಯುತ್ತಾರೆ. ಆಗ ರಾಜೇಶ್ವರಿಗೆ ಮೆಸ್ ಗೆ ಬೆಂಕಿ ಹಚ್ಚಿರುವ ಮಾರನ ವಿಡಿಯೋ ಸಿಗುತ್ತದೆ. ಎಲ್ಲರಿಗೂ ಈ ವಿಡಿಯೋ ತೋರಿಸಿ ಮಾರಾ ಬಂಗಾರಮ್ಮನ ಕಡೆಯವನು ಎನ್ನುವ ವಿಚಾರವನ್ನು ಹೇಳುತ್ತಾಳೆ.
ಪುಟ್ಟಕ್ಕ ಆಸ್ಫತ್ರೆ ಸೇರಿದ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ಕಂಠಿ
ಕಂಠಿ ಬಳಿ ಪುಟ್ಟಕ್ಕ ಇವನು ನಿಮ್ಮ ಕಡೆಯವನ ಎಂದು ಕೇಳುತ್ತಾಳೆ. ಕಂಠಿ ಹೌದು ಎಂದು ಹೇಳಿದಾಗ ಪುಟ್ಟಕ್ಕ ಆಘಾತಗೊಂಡು ಮೂರ್ಛೆ ತಪ್ಪುತ್ತಾಳೆ. ಮೂರ್ಛೆ ತಪ್ಪಿದ ಪುಟ್ಟಕ್ಕನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಬಂಗಾರಮ್ಮನ ತಪ್ಪಿಗೆ ಸ್ನೇಹ ಕಂಠಿಗೆ ಬೈಯುತ್ತಾಳೆ. ನಂತರ ಬಂಗಾರಮ್ಮ ಆಸ್ಪತ್ರೆಗೆ ಪುಟ್ಟಕ್ಕನನ್ನು ನೋಡಲು ಬರುತ್ತಾಳೆ. ಆಗ ಸ್ನೇಹ ಕಂಠಿಗೆ ಬೈಯುತ್ತಿರುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಬಂಗಾರಮ್ಮನನ್ನು ಕಂಡ ಸ್ನೇಹ ಅವರಿಗೂ ಬಯ್ಯುತ್ತಾಳೆ
ಬಂಗಾರಮ್ಮ ಕಂಠಿ ಬಳಿ ಇವರೆಲ್ಲ ನನ್ನ ಮೇಲೆ ಆರೋಪ ಮಾಡುತ್ತಿದ್ದರು ನೀ ಸುಮ್ಮನಿದ್ದೀಯ ಎನ್ನುತ್ತಾಳೆ. ಆಗ ಕಂಠಿ ತಲೆ ತಗ್ಗಿಸುತ್ತಾನೆ. ನಾನು ಮಾರ ಕೆಲಸಕ್ಕೆ ಬೇಡ ಎಂದು ಮೊದಲು ಹೇಳಿದ್ದೆ ಎನ್ನುತ್ತಾನೆ. ಇನ್ನೂ ಕಂಠಿ ಬಂಗಾರಮ್ಮನ ವಿರುದ್ಧ ದೂರನ್ನು ನೀಡಲು ನಿರ್ಧರಿಸುತ್ತಾನೆ. ಕಂಠಿ ನಿರ್ಧಾರವನ್ನು ಕೇಳಿ ಎಲ್ಲರು ಅಚ್ಚರಿ ಪಡುತ್ತಾರೆ. ಬಂಗಾರಮ್ಮ ಮೆಸ್ ಗೆ ಬೆಂಕಿ ಹಚ್ಚಿದ ವಿಚಾರವಾಗಿ ಅರೆಸ್ಟ್ ಆಗುತ್ತಾಳಾ ಅಥವಾ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತು ಪಡಿಸುತ್ತಾಳಾ ಎನ್ನುವುದನ್ನು ಕಾದುನೋಡಬೇಕಿದೆ.