PVC Card: ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಇನ್ನೊಂದು ಸಿಹಿಸುದ್ದಿ, 50 ರೂ ಖರ್ಚು ಮಾಡಿ ಇಂದೇ ಆರ್ಡರ್ ಮಾಡಿ.

ಸುಲಭವಾಗಿ ಜೋಬ್ ನಲ್ಲಿ ಇಟ್ಟುಕೊಳ್ಳಬಹುದಾದ PVC Aadhar Card.

PVC Aadhar Card Online Apply: ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವಲ್ಲಿ ಅಥವಾ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಅತಿ ಅಗತ್ಯವಾಗಿದೆ. ಇಂದಿನ ಯುಗದಲ್ಲಿ ಆಧಾರ್ ಕಾರ್ಡ್ ಅನ್ನು ಹೆಚ್ಚಾಗಿ ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಇದಲ್ಲದೇ ಮಕ್ಕಳ ದಾಖಲಾತಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

PVC Aadhar Card
Image Credit: Original Source

ಇನ್ನುಮುಂದೆ ಆಧಾರ್ ಕಾರ್ಡ್ ಕಳೆದರೆ ಚಿಂತಿಸುವ ಅಗತ್ಯ ಇಲ್ಲ
ಇನ್ನುಮುಂದೆ ಎಲ್ಲದಕ್ಕೂ ಮುಖ್ಯ ದಾಖಲೆಯಾಗಿರುವ ಆಧಾರ್ ಕಾರ್ಡ್ ಕಳೆದರೆ ಆತಂಕ ಪಡುವ ಅಗತ್ಯ ಇಲ್ಲ. ಬದಲಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು. ಹೌದು ಇದೀಗ ಆಧಾರ್ ಕಾರ್ಡ್ ಕಳೆದರೆ PVC ಕಾರ್ಡ್ ಅಂದರೆ ಪಾಲಿವಿನೈಲ್ ಕ್ಲೋರೈಡ್ ಕಾರ್ಡ್ (Polyvinl Chloride Card) ಅನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಇದನ್ನು ನೀವು ಸುಲಭವಾಗಿ ನಿಮ್ಮ ವ್ಯಾಲೆಟ್‌ ನಲ್ಲಿ ಇಟ್ಟುಕೊಂಡು ತಿರುಗಾಡಬಹುದಾಗಿದೆ.

ಕೇವಲ 50 ರೂ ಪಾವತಿಸುವ ಮೂಲಕ ಮನೆಗೆ ತನ್ನಿ PVC ಆಧಾರ್ ಕಾರ್ಡ್
ನೀವು PVC Aadhar Card ಅನ್ನು ಪಡೆಯಲು ಮೊದಲಿಗೆ UIDAI ನ ಅಧಿಕೃತ ವೆಬ್‌ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಆಧಾರ್ ವಿಭಾಗದಲ್ಲಿ PVC ಕಾರ್ಡ್ ಅನ್ನು ಕ್ಲಿಕ್ ಮಾಡಿ Aadhar Number ನಮೂದಿಸಬೇಕಾಗುತ್ತದೆ. ತಡ ನಂತರ ಕ್ಯಾಪ್ಚ್ ಕೋಡ್ ಹಾಕಬೇಕಾಗುತ್ತದೆ.

ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ, ಅಂತಿಮವಾಗಿ 50 ರೂಪಾಯಿಯನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಪಾವತಿಸಬೇಕಾಗುತ್ತದೆ. ಇದಾದ ಕೆಲವು ದಿನಗಳ ನಂತರ ಸ್ಪೀಡ್ ಪೋಸ್ಟ್ ಮೂಲಕ PVC Aadhar Card ನಿಮ್ಮ ಮನೆಗೆ ತಲುಪುತ್ತದೆ.

PVC Aadhar Card Online Apply
Image Credit: Original Source

PVC ಆಧಾರ್ ಕಾರ್ಡ್‌ ವಿಶೇಷತೆ
UIDAI ಪ್ರಕಾರ PVC ಕಾರ್ಡ್‌ನ ಮುದ್ರಣ ಮತ್ತು ಲ್ಯಾಮಿನೇಶನ್ ಗುಣಮಟ್ಟವು ಉತ್ತಮವಾಗಿರುತ್ತದೆ. ಹಾಗೆ ನೋಟದಲ್ಲಿ ಆಕರ್ಷಕವಾಗಿದೆ ಮತ್ತು ದೀರ್ಘಕಾಲ ಉಳಿಯುತ್ತದೆ. PVC Card ಮಳೆಯಲ್ಲಿ ನೆನೆದರು ಹಾಳಾಗುವುದಿಲ್ಲ. ಇದನ್ನು ಸುಲಭವಾಗಿ ಜೋಬ್ ನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಹಾಗೆ ಇದರಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group