LPG QR Code: ಗ್ಯಾಸ್ ಗಳಿಗೂ ಬಂತು QR ಕೋಡ್, LPG ಬುಕ್ ಮಾಡುವವರಿಗೆ ಹೊಸ ನಿಯಮ ಜಾರಿ

LPG ಸಿಲಿಂಡರ್ ಗಳ ಮೇಲೂ QR ಕೋಡ್

QR Code For LPG Gas Cylinder: ಸದ್ಯ ದೇಶದಲ್ಲಿ ಹೆಚ್ಚಿನ ಸಂಖ್ಯೆಯನ್ನು ಜನರು ಮನೆಗಳಲ್ಲಿ LPG ಗ್ಯಾಸ್ ಸಿಲಿಂಡರ್ ಗಳನ್ನು ಬಳಸುತ್ತಾರೆ. ಪ್ರಧಾನಿ ಮೋದಿ ಅವರು ದೇಶದ ಬಡ ಜನರಿಗಾಗಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ನೀಡಿದ ಬಳಿಕ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ ಎನ್ನಬಹುದು.

ಇನ್ನು ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಗ್ಯಾಸ್ ಸಿಲಿಂಡರ್ ಗಳ ಅಕ್ರಮಗಳು ಕೂಡ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಗ್ಯಾಸ್ ಸಿಲಿಂಡರ್ ಕಳ್ಳತನ ಹಾಗೂ ಗ್ಯಾಸ್ ಸಿಲಿಂಡರ್ ದಾಸ್ತಾನಿನನಲ್ಲಿ ಅನೇಕ ಅಕ್ರಮಗಳು ಕಂಡು ಬಂದಿದೆ. ಸದ್ಯ ಇದರ ತಡೆಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

QR Code For LPG Gas Cylinder
Image Credit: India

LPG ಸಿಲಿಂಡರ್ ಗಳ ಮೇಲೂ QR ಕೋಡ್
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್‌ ಗಳಲ್ಲಿ ಕ್ಯೂಆರ್ ಕೋಡ್ (QR Code) ಅನ್ನು ಶೀಘ್ರದಲ್ಲೇ ನಮೂದಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಿಸಿದೆ. ಈ ಕ್ರಮವು ಅಡುಗೆ ಅನಿಲ ಪೂರೈಕೆ, ಸಿಲಿಂಡರ್‌ ಗಳ ಟ್ರ್ಯಾಕಿಂಗ್, ಕಳ್ಳತನ ಮತ್ತು ಏಜೆನ್ಸಿಗಳ ದಾಸ್ತಾನು ನಿರ್ವಹಣೆಯಲ್ಲಿ ಅಕ್ರಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಸಿಲಿಂಡರ್‌ ಗಳ ಕ್ಯೂಆರ್ ಕೋಡ್ ಅನ್ನು ಗ್ಯಾಸ್ ಸಿಲಿಂಡರ್ ನಿಯಮಾವಳಿಗಳ ಕರಡು (ಜಿಸಿಆರ್) ನಲ್ಲಿ ಸೇರಿಸಲಾಗಿದ್ದು, ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

QR ಕೋಡ್ ನಿಂದ ಏನು ಪ್ರಯೋಜನವಾಗಲಿದೆ….?
ಗ್ಯಾಸ್ ಸಿಲಿಂಡರ್‌ ನಲ್ಲಿ QR ಕೋಡ್ ಅನ್ನು ಸ್ಥಾಪಿಸಿದಾಗ, ಅದರ ಟ್ರ್ಯಾಕಿಂಗ್ ಸರಳವಾಗುತ್ತದೆ. ಸಿಲಿಂಡರ್‌ ನಲ್ಲಿ ಗ್ಯಾಸ್ ಕಡಿಮೆಯಾಗಿದೆ ಎಂಬ ದೂರು ಬಂದರೆ, ಅದು ಯಾವ ಡೀಲರ್‌ ನಿಂದ ಬಂದಿದೆ ಎಂಬುದನ್ನು ಸಾಬೀತುಪಡಿಸುವುದು ಕಷ್ಟಕರವಾಗಿತ್ತು. ಯಾವ ಡೀಲರ್ ಎನ್ನುವುದು ತಿಳಿದರು, ಯಾವ ಡೆಲಿವರಿ ಮ್ಯಾನ್ ಸಿಲಿಂಡರ್ ಅನ್ನು ವಿತರಿಸಿದರು ಎಂಬುದನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಆದರೆ ಸಿಲಿಂಡರ್ ಮೇಲೆ ಕ್ಯೂಆರ್ ಕೋಡ್ ಹಾಕಿದರೆ ಕ್ಷಣಮಾತ್ರದಲ್ಲಿ ಎಲ್ಲವೂ ಟ್ರ್ಯಾಕ್ ಆಗುತ್ತದೆ. ಇದಲ್ಲದೇ ಯಾವ ಸಿಲಿಂಡರ್ ನಲ್ಲಿ ಎಷ್ಟು ಬಾರಿ ರೀಫಿಲ್ಲಿಂಗ್ ಮಾಡಲಾಗಿದೆ ಎಂಬುದು ಗೊತ್ತಾಗಲಿದೆ. ಇದರೊಂದಿಗೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ.

QR Code For LPG Gas Cylinder Latest
Image Credit: Newsnationtv

Join Nadunudi News WhatsApp Group

Join Nadunudi News WhatsApp Group