QR Code: ದಿಡೀರನೆ ಜನರು ತಿನ್ನುವ ಮಾತ್ರೆಗಳ ಮೇಲೆ ಹೊಸ ಆದೇಶ ಹೊರಡಿಸಿದ ಕೇಂದ್ರ, ಮಾತ್ರೆಗಳಲ್ಲಿ QR ಕೋಡ್.
ಇನ್ನುಮುಂದೆ ಜನರು ಖರೀದಿ ಮಾಡುವ ಮಾತ್ರೆಗಳ ಮೇಲೆ QR ಕೋಡ್.
QR Code For Medicine: ಸಾಮಾನ್ಯವಾಗಿ ಜನರು ತಮ್ಮ ಆರೋಗ್ಯ ಸಮಸ್ಯೆಯ ನಿವಾರಣೆಗೆ ಮೆಡಿಸಿನ್ (Medicine) ಗಳನ್ನೂ ತೆಗೆದುಕೊಳ್ಳುತ್ತಾರೆ. ಜನರಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಮಾತ್ರೆ, ಟಾನಿಕ್, ಸಿರಫ್ ಇನ್ನಿತರ ಮೆಡಿಸಿನ್ ಗಳನ್ನೂ ಸೇವಿಸಬೇಕಾಗುತ್ತದೆ.
ಇನ್ನು ಉತ್ತಮ ಗುಣಮಟ್ಟದ ಮೆಡಿಸಿನ್ ಗಳನ್ನೂ ಡಾಕ್ಟರ್ ಅಥವಾ ಮೆಡಿಕಲ್ ನಲ್ಲಿ ಪಡೆಯುತ್ತಾರೆ. ಇನ್ನು ಮೆಡಿಸಿನ್ ಅನ್ನು ಪಡೆಯುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವ ಸಮಸ್ಯೆಯಿಂದ ಬಳಲುತ್ತಾರೋ ಆ ಖಾಯಿಲೆಗೆ ಸಂಬಂಧಪಟ್ಟ ಮೆಡಿಸಿನ್ ಅನ್ನು ಮಾತ್ರ ತೆಗೆದುಕೊಳ್ಳಬೇಕು. ಬೇರೆ ಮೆಡಿಸಿನ್ ಅನ್ನು ತೆಗೆದುಕೊಂಡರೆ ಅದು ಹೆಚ್ಚಿನ ಪ್ರಾಣಾಪಾಯವನ್ನು ಉಂಟುಮಾಡುತ್ತದೆ.
ಭಾರತ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ
ಇನ್ನು ಇತ್ತೀಚಿಗೆ ಭಾರತ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗುತ್ತಲೇ ಇವೆ. ಆಸ್ಪತ್ರೆಗಳಲ್ಲಿ ವಿವಿಧ ತಂತ್ರಜ್ಞಾನಗಳು, ವೈದ್ಯಕೀಯ ಸಲಕರಣೆಗಳು ಸೇರಿದಂತೆ ಆಸ್ಪತ್ರೆಗೆ ಬೇಕಾಗುವ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ.
ಭಾರತ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಮೂಲಕ ಮಾರುಕಟ್ಟೆಯಲ್ಲಿ ಸಿಗುವ ಔಷಧಿ ಅಸಲಿಯೋ ಅಥವಾ ನಕಲಿಯೋ ಎನ್ನುವುದನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಔಷಧೀಯ ಪರಿಶೀಲನೆಗೆ ಕ್ಯುಆರ್ ಕೋಡ್ ಜಾರಿ
ಆರೋಗ್ಯ ಸಮಸ್ಯೆಯ ನಿವಾರಣೆಗೆ ಉತ್ತಮ ಗುಣಮಟ್ಟದ ಔಷಧವನ್ನು ಸೇವಿಸಬೇಕು. ಈ ಕಾರಣಕ್ಕೆ ಕೇಂದ್ರ ಸರ್ಕಾರ ಔಷಧಿ ಅಸಲಿಯೋ ಅಥವಾ ನಕಲಿಯೋ ಎನ್ನುವುದನ್ನು ಪರಿಶೀಲಿಸಿಕೊಳ್ಳಲು ಕ್ಯೂಆರ್ ಕೋಡ್ ಅನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಆರಂಭಿಕ ಹಂತದಲ್ಲಿ ಗರಿಷ್ಟ ಮಾರಾಟವಾಗುವ 300 ಡ್ರಗ್ ಗಳಲ್ಲಿ ಕ್ಯೂಆರ್ ಕೋಡ್ ಜಾರಿಗೆ ತರುತ್ತಿದೆ.
ನೀವು ಖರೀದಿಸುವ ಔಷದಗಳ ಕೆಲ ಭಾಗದಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದ್ದು ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಔಷಧದ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಬಹುದು. ಮಾತ್ರೆ, ಟ್ಯೂಬ್, ಸೀಲ್ ಮಾಡಿದ ಔಷಧದ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಅನ್ನು ಮುದ್ರಿಸಲಾಗುತ್ತದೆ.
ಆ್ಯಂಟಿಬಯೋಟಿಕ್, ಕಾರ್ಡಿಯಕ್, ನೋವಿನ ಮಾತ್ರೆ, ಆ್ಯಂಟಿ ಅಲರ್ಜಿ ಸೇರಿದಂತೆ ಇನ್ನಿತರ ಹಲವು ಔಷಧಿಗಳ ಮೇಲೆ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ.