R. Ashok: ರಮ್ಯಾಗೆ ಟಾಂಗ್ ನೀಡಿದ ಸಚಿವ ಆರ್ ಅಶೋಕ್, ನಮ್ಮ ಬಿಜೆಪಿ ಬರಗೆಟ್ಟಿಲ್ಲ.
ನಟಿ ರಮ್ಯಾ ಅವರನ್ನ ಬಿಜೆಪಿಗೆ ಕರೆಯುವಷ್ಟು ನಮ್ಮ ಪಕ್ಷ ಬರಗೆಟ್ಟಿಲ್ಲ ಎಂದು ಹೇಳಿದ್ದಾರೆ ಆರ್ ಅಶೋಕ್.
R. Ashok About Ramya: ನಟಿ ರಮ್ಯಾ (Ramya) ಅವರು ಇದೀಗ ಚಿತ್ರರಂಗಕ್ಕೆ ಮರಳಿದ್ದಾರೆ. ಚಿತ್ರರಂಗದ ಜೊತೆಗೆ ನಟಿ ರಮ್ಯಾ ರಾಜಕೀಯದಲ್ಲೂ ಕೂಡ ಬ್ಯುಸಿ ಆಗಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ನಟಿ ರಮ್ಯಾ ಅವರು ಬಿಜೆಪಿ ಪಕ್ಷದ ಕುರಿತು ಮಾತನಾಡಿದ್ದಾರೆ.
ಬಿಜೆಪಿ ಪಕ್ಷದಿಂದ ತಮಗೆ ಆಫರ್ ಬಂದಿರುವುದಾಗಿ ನಟಿ ರಮ್ಯಾ ಹೇಳಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಸಚಿವರಾದ ಆರ್ ಅಶೋಕ್ (R Ashok) ಅವರು ರಮ್ಯಾ ಅವರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿಯಿಂದ ಮೋಹಕತಾರೆಗೆ ಆಫರ್
ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸ್ಟಾರ್ ನಟರ ಪ್ರಚಾರ ಕೂಡ ರಾಜಕೀಯದಲ್ಲಿ ಶುರುವಾಗಿದೆ. ಇನ್ನು ನಟಿ ರಮ್ಯಾ ಅವರು ಸಂದರ್ಶನದಲ್ಲಿ ಮಾತನಾಡುವಾಗ ತಮಗೆ ಬಿಜೆಪಿಯಿಂದ ಆಫರ್ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು. ಸಚಿವೆ ಮಾಡುವ ಆಫರ್ ಅನ್ನು ನನಗೆ ನೀಡಿದ್ದರು. ನಾನು ಕೆಲವು ಬಾರಿ ಕಾಂಗ್ರೆಸ್ ನ ಕೆಲ ನಡೆಗಳನ್ನು ಟೀಕಿಸಿದ್ದಕ್ಕಾಗಿ, ನನಗು ಕಾಂಗ್ರೆಸ್ ಗು ಭಿನ್ನಮತ ಇದೆ ಎಂದು ಬಿಜೆಪಿ ಅವರು ಭಾವಿಸಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ. ಇದೀಗ ಈ ಬಗ್ಗೆ ಸಚಿವರಾದ ಆರ್ ಅಶೋಕ್ ಅವರು ರಮ್ಯಾ ಗೆ ಟಾಂಗ್ ನೀಡಿದ್ದಾರೆ.
ರಮ್ಯಾಗೆ ಟಾಂಗ್ ನೀಡಿದ ಸಚಿವ ಆರ್ ಅಶೋಕ್
“ಮಾಜಿ ಸಂಸದೆ, ನಟಿ ರಮ್ಯಾ ಅವರನ್ನು ಕರೆಯುವಷ್ಟು ಬಿಜೆಪಿ ಪಕ್ಷ ಬರಗೆಟ್ಟಿಲ್ಲ. ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ. ಚುನಾವಣೆಯ ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆಯ ವೇಳೆ ಎಲ್ಲರು ಹೀರೋ ಆಗಲು ಪ್ರಯತ್ನಿಸುತ್ತಾರೆ.
ಕಾಂಗ್ರೆಸ್ ಗೆ ಚುನಾವಣೆಯ ವೇಳೆ ಸಹಾಯ ಆಗಲಿ ಎಂದು ರಮ್ಯಾ ಹೀಗೆ ಹೇಳಿದ್ದಾರೆ. ರಮ್ಯಾ ಯಾವತ್ತಿಗೂ ಕಾಂಗ್ರೆಸ್ ಪಕ್ಷದವರು. ರಮ್ಯಾಗೆ ಅಹ್ವಾನ ಇಲ್ಲ ಮತ್ತು ಸೀಟು ಕೊಡಲ್ಲ, ಮಂತ್ರಿನೂ ಮಾಡಲ್ಲ. ಅವರು ಸಿನಿಮದಲ್ಲಿಯೇ ಇರಲಿ” ಎಂದು ಆರ್ ಅಶೋಕ್ ಅವರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.