R. Praggnanadhaa: ಚೆಸ್ ವಿಶ್ವಕಪ್ ನಲ್ಲಿ ಎರಡನೇ ಸ್ಥಾನ ಪಡೆದ ಪ್ರಜ್ಞಾನಂದಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು…?
ವಿಶ್ವಕಪ್ ನಲ್ಲಿ ಎರಡನೇ ಸ್ಥಾನ ಪಡೆದ ಪ್ರಜ್ಞಾನಂದಗೆ ಸಿಕ್ಕ ಬಹುಮಾನದ ಮೊತ್ತ.
R. Praggnanadhaa FIDE World Cup Winning Price: FIDE ವರ್ಲ್ಡ್ ಕಪ್ 2023 ಯಶಸ್ವಿಯಾಗಿ ಪೂರ್ಣಗೊಂಡಿದೆ. FIDE ವರ್ಲ್ಡ್ ಕಪ್ 2023 ರಲ್ಲಿ ಭಾರತದ ಪರವಾಗಿ ಆರ್. ಪ್ರಜ್ಞಾನಂದ (R. Praggnanadhaa) ಆಟವಾಡಿದ್ದಾರೆ. ಇಡೀ ಭಾರತ ಪ್ರಜ್ಞಾನಂದ ಅವರ ಗೆಲುವಿಗಾಗಿ ಕಾಯುತ್ತಿತ್ತು. ಅಝರ್ ಬೈಜಾನ್ ನ ಚಾಕುವಿನಲ್ಲಿ ಚೆಸ್ ವಿಶ್ವಕಪ್ ಪಂದ್ಯ ನಡೆದಿದೆ.
ಇನ್ನು ಅಂತಿಮವಾಗಿ ಚೆಸ್ ವಿಶ್ವಕಪ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ ಸೆನ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾರತದ ಆರ್ ಪ್ರಜ್ಞಾನಂದ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಚೆಸ್ ವಿಶ್ವಕಪ್ ಫೈನಲ್ ನಲ್ಲಿ ವಿಶ್ವ ನಂಬರ್ 1 ಮ್ಯಾಗ್ನಸ್ ಕಾರ್ಲ್ ಸೆನ್ ಅವರು ಭಾರತೀಯ ಗ್ರಾಂಡ್ ಮಾಸ್ಟರ್ ನ ಮೇಲೆ ಜಯ ಸಾಧಿಸಿದ್ದಾರೆ.
ಚೆಸ್ ವಿಶ್ವಕಪ್ 2023
ಚೆಸ್ ವಿಶ್ವಕಪ್ 2023 ನಲ್ಲಿ ಆರ್.ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್ ಸೆನ್ ನಡುವೆ ಸ್ಪರ್ಧೆ ನಡೆದಿದೆ. ಮಂಗಳವಾರ ಹಾಗೂ ಬುಧವಾರ ಎರಡು ದಿನಗಳು ಆರ್.ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್ ಸೆನ್ ನಡುವೆ ಟೈ ಬ್ರೇಕರ್ ಪಂದ್ಯ ನೆರವೇರಿದೆ. ವಿಶ್ವದ ನಂಬರ್ 1 ಚೆಸ್ ಆಟಗಾರರಾದ ಮ್ಯಾಗ್ನಸ್ ಕಾರ್ಲ್ ಸೆನ್ ಅವರಿಗೆ ಆರ್ ಪ್ರಜ್ಞಾನಂದ ತೀವ್ರ ಪೈಪೋಟಿ ನೀಡಿದ್ದಾರೆ. ಆದರೆ ಟೈಬ್ರೇಕರ್ ನಲ್ಲಿ ವಿಶ್ವ ನಂಬರ್ 1 ಮ್ಯಾಗ್ನಸ್ ಕಾರ್ಲ್ ಸೆನ್ ಅವರು ವಿಜಯ ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟ ಹೊತ್ತಿದ್ದಾರೆ.
ಚೆಸ್ ವಿಶ್ವಕಪ್ ನಲ್ಲಿ ಎರಡನೇ ಸ್ಥಾನ ಪಡೆದ ಪ್ರಜ್ಞಾನಂದಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು…?
ಇನ್ನು FIDE ವರ್ಲ್ಡ್ ಕಪ್ 2023 ರಲ್ಲಿ ಒಟ್ಟು ಬಹುಮಾನದ ಮೊತ್ತವು USD 1 ,834 ,000 ಆಗಿದೆ. ಈ ಒಟ್ಟು ಮೊತ್ತವು 206 ಆಟಗಾರರ ನಡುವೆ ಹಂಚಲಾಗುತ್ತದೆ. ಫೈನಲ್ ನಲ್ಲಿ ಜಯ ಗಳಿಸಿದವರಿಗೆ ಬಹುದೊಡ್ಡ ಮೊತ್ತದ ವೇತನವನ್ನು ನೀಡಲಾಗುತ್ತದೆ.
ಆರ್ ಪ್ರಜ್ಞಾನಂದ ವಿರುದ್ಧ 1 -0 ಅಂತರದದಲ್ಲಿ ಜಯ ಸಧಿಸಿ ವಿಶ್ವ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್ ಸೆನ್ ಅವರಿಗೆ 110 ಸಾವಿರ ಅಮೇರಿಕ ಡಾಲರ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 90 .90 ಲಕ್ಷ ಹಣವನ್ನು ನೀಡಲಾಗಿದೆ. ಇನ್ನು ಭಾರತದ ಆಟಗಾರ ಪ್ರಜ್ಞನಂದಾ ರನ್ನರಪ್ ಆಗಿ ಹೊರಹೊಮ್ಮುವ ಮೂಲಕ 80 ಸಾವಿರ ಡಾಲರ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 66 .13 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ.