Rabbit R1: ಇನ್ಮುಂದೆ ನಿಮ್ಮ ಕೆಲಸವನ್ನು ಈ ಡಿವೈಸ್ ನೋಡಿಕೊಳ್ಳಲಿದೆ, ಮಾರುಕಟ್ಟೆಗೆ ಬಂತು ಪುಟ್ಟ AI ಡಿವೈಸ್
ಇನ್ನುಮುಂದೆ ಮೊಬೈಲ್ ಬಳಸುವ ಅಗತ್ಯ ಇಲ್ಲ, ಮಾರುಕಟ್ಟೆ ಬಂತು ಅಗ್ಗದ AI ಪುಟ್ಟ ಡಿವೈಸ್
Rabbit R1 AI Device: ದೇಶಿಯ ಮಾರುಕಟ್ಟೆಯಲ್ಲಿ ಎಐ (AI) ತಂತ್ರಜ್ಞಾನದ ಡಿವೈಸ್ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಬಹಳ ಬೇಡಿಕೆ ಹೊಂದಿರುವ ಈ ಡಿವೈಸ್ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಅದರಂತೆ ಈಗ ರಾಬಿಟ್ R1 (Rabbit R1 device) ಸ್ಮಾರ್ಟ್‌ಡಿವೈಸ್ ವಿಭಾಗದಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿದೆ. ಎಐ ಸ್ಟಾರ್ಟ್‌ಅಪ್ ರಾಬಿಟ್ ಬಹುಕ್ರಿಯಾತ್ಮಕ ಡಿವೈಸ್ ಆಗಿರುವ ರಾಬಿಟ್ R1 ಅನ್ನು CES 2024 ನಲ್ಲಿ ಅನಾವರಣ ಮಾಡಿದೆ. ಈ ಡಿವೈಸ್ ನೋಡಲು ಭಿನ್ನವಾಗಿದ್ದರೂ ಸಹ ಸ್ಮಾರ್ಟ್‌ಫೋನ್ ನಂತೆಯೇ ಕೆಲಸ ಮಾಡುತ್ತದೆ.
ರಾಬಿಟ್ R1 ಮೊಬೈಲ್ ನಂತೆಯೇ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತದೆ
CES 2024 ನಲ್ಲಿ ಪಾಕೆಟ್ ಗಾತ್ರದ ಎಐ ಡಿವೈಸ್ ರಾಬಿಟ್ R1 ಲಾಂಚ್ ಆಗಿದ್ದು, ಇದು ಲಾಂಚ್ ಆದ ಬಳಿಕ 10,000 ಯೂನಿಟ್‌ಗಳಿಗಿಂತ ಹೆಚ್ಚು ಸೇಲ್ ಆಗಿದೆ ಎಂದು ತಿಳಿದುಬಂದಿದೆ. ಈ ಡಿವೈಸ್ ಮೂಲಕ ನೀವು ಮೆಸ್ಸೇಜ್ ಮಾಡಬಹುದು, ಕರೆಗಳನ್ನು ಮಾಡಬಹುದು, ಸ್ಪೋಟಿಫೈ ಮತ್ತು ಊಬರ್ ಸೇರಿದಂತೆ ಅನೇಕ ಆಪ್ ಸೇವೆಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ರಾಬಿಟ್ R1ಬಳಕೆ ಮಾಡಬೇಕು ಅಂದರೆ ಸ್ಮಾರ್ಟ್‌ಫೋನ್ ಅಗತ್ಯವಿಲ್ಲ. ಅಂದರೆ ಸ್ವತಂತ್ರವಾಗಿ ಇದು ಕೆಲಸ ಮಾಡುತ್ತದೆ. ಅಲ್ಲದೆ ಸಿರಿ ಮತ್ತು ಅಲೆಕ್ಸಾದಂತೆಯೇ ತನ್ನದೇ ಆದ ವರ್ಚುವಲ್ ಅಸಿಸ್ಟೆಂಟ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಕೆಲಸ ಮಾಡುತ್ತದೆ.
ರಾಬಿಟ್ R1ಸ್ಮಾರ್ಟ್ ಡಿವೈಸ್ ನ ವಿಶೇಷತೆಗಳು
ಈ ಸ್ಮಾರ್ಟ್ ಡಿವೈಸ್ ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡುತ್ತದೆ, ದಿನಸಿಗಾಗಿ ಶಾಪಿಂಗ್ ಮಾಡುತ್ತದೆ. ಈ ಮೂಲಕ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್ ಮಾಡಬಹುದಾದ ಕೆಲಸಗಳನ್ನ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೂಲಕ ಎಲ್ಲಾ ಕೆಲಸಗಳನ್ನು ಏಕೀಕೃತ ಇಂಟರ್ಫೇಸ್‌ನಲ್ಲಿ ಮಾಡಬಹುದು. ಇದರಿಂದಾಗಿ ನೀವು ಬಹು ಆಪ್‌ಗಳು ಮತ್ತು ಲಾಗಿನ್‌ಗಳನ್ನು ಬಳಕೆ ಮಾಡುವ ಅಗತ್ಯ ಇರುವುದಿಲ್ಲ.
ಈ ಡಿವೈಸ್ 2.3GHz ಮೀಡಿಯಾಟೆಕ್ ಹಿಲಿಯೋ P35 ಪ್ರೊಸೆಸರ್ ಬಲ ಪಡೆದಿದ್ದು, 4 GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಜೊತೆಗೆ ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಒಂದು ಪೂರ್ಣ ಚಾರ್ಜಿಂಗ್ ನಲ್ಲಿ ಒಂದು ದಿನ ಬಳಕೆ ಮಾಡಬಹುದಾಗಿದೆ. ಅಲ್ಲದೆ ಈ ಡಿವೈಸ್ ರೊಟೇಟಿಂಗ್ ಕ್ಯಾಮೆರಾವನ್ನು ಹೊಂದಿದ್ದು ಉತ್ತಮವಾದ ಫೋಟೋಗಳನ್ನು ಕ್ಲಿಕ್ ಮಾಡಲು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ.
ರಾಬಿಟ್ R1 ಬೆಲೆ ಹಾಗೂ ಲಭ್ಯತೆ ಹೀಗಿದೆ
ಈ ಪುಟ್ಟ ಡಿವೈಸ್ ಬೆಲೆ $199. ಅಂದರೆ ಭಾರತದಲ್ಲಿ ಅಂದಾಜು 16,500 ರೂ.ಗಳಾಗಿದೆ. ಇದಕ್ಕೆ ನೀವು ಯಾವುದೇ ಚಂದಾದಾರಿಕೆಯ ಪಡೆಯುವ ಅಗತ್ಯ ಇಲ್ಲ. ಅಂದರೆ ಸ್ಮಾರ್ಟ್‌ಫೋನ್ ಬಳಕೆ ಮಾಡಿದ ರೀತಿಯಲ್ಲೇ ಇದನ್ನು ಬಳಕೆ ಮಾಡಬಹುದು. ಸದ್ಯಕ್ಕೆ ಯುಎಸ್ ನಲ್ಲಿ ಮಾತ್ರ ಖರೀದಿಗೆ ಮಾತ್ರ ಲಭ್ಯವಿದ್ದು, ಭಾರತದ ಗ್ರಾಹಕರಿಗೆ ಯಾವಾಗ ಲಭ್ಯವಿರುತ್ತದೆ ಅನ್ನೋದನ್ನು ಇನ್ನು ಕಂಪನಿ ಬಹಿರಂಗಪಡಿಸಿಲ್ಲ.