E-Cycle: ಒಮ್ಮೆ ಚಾರ್ಜ್ ಮಾಡಿದರೆ 80 Km ಮೈಲೇಜ್, ಸ್ಕೂಟರ್ ಬದಲು ಕಡಿಮೆ ಬೆಲೆಗೆ ಖರೀಧಿಸಿ ಈ ಸೈಕಲ್.
ಒಮ್ಮೆ ಚಾರ್ಜ್ ಮಾಡಿದರೆ 80 Km ಮೈಲೇಜ್ ಕೊಡುವ ಈ ಬೈಕಿಗೆ ಜನರು ಫಿದಾ ಆಗಿದ್ದಾರೆ.
Rad City 5 Electric Cycle: ಮಾರುಕಟ್ಟೆಯಲ್ಲಿ ಹೆಚ್ಚು ಎಲೆಕ್ಟ್ರಿಕ್ ರೂಪಾಂತರವೇ ತುಂಬಿ ಹೋಗಿವೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿರುವ ಕಾರಣ ವಿವಿದ ಕಂಪನಿಗಳು ಎಲೆಕ್ಟ್ರಿಕ್ ಮಾದರಿಯ ಬಿಡುಗಡೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿವೆ. ಇನ್ನು ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆಯ ಏರಿಕೆಯು ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕಾರಣವಾಗುತ್ತಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯಲ್ಲಿ ಕಾರ್, ಬೈಕ್, ಇ- ಬೈಕ್ ಗಳು ಲಭ್ಯವಿದೆ. ಹೌದು ಮಾರುಕಟ್ಟೆಗೆ ಈಗ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಸೈಕಲ್ ಕೂಡ ಬಂದಿದ್ದು ಸ್ಕೂಟರ್ ಬದಲು ಜನರು ಹೆಚ್ಚು ಮೈಲೇಜ್ ಕೊಡುವ ಸೈಕಲ್ ಕೂಡ ಖರೀದಿ ಮಾಡಬಹುದು.
ಮಾರುಕಟ್ಟೆಗೆ ಬರಲಿದೆ ನೂತನ e -Cycle
ಇದೀಗ ಜನಪ್ರಿಯ e -Cycle ತಯಾರಕ ಕಂಪನಿಯಾದ Rad power ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ನೂತನ ಇ- ಸೈಕಲ್ ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳು ಎಂಟ್ರಿ ಕೊಟ್ಟಿದ್ದರೂ ಕೂಡ ಇ- ಸೈಕಲ್ ಗಳು ಯಾವುದೇ ರೀತಿಯ ಬೇಡಿಕೆ ಕಳೆದುಕೊಂಡಿಲ್ಲ. ಇದೀಗ Rad power ಕಂಪನಿಯ ನೂತನ e -Cycle ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಲ್ಲಿ ಯಾವುದೇ ಸಂದೇಹವಿಲ್ಲ.
Rad City 5 Electric Cycle
ಮಾರುಕಟ್ಟೆಯಲ್ಲಿ Rad Power ಕಂಪನಿ ಇದೀಗ ನೂತನ ವಿನ್ಯಾಸದ Rad City 5 Electric Cycle ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ Rad City 5 Electric Cycle ಎರಡು ರೂಪಾಂತರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. Rad City 5 Plus High Step Electric, Rad City 5 High Step Thro Electric ಮಾದರಿಯಲ್ಲಿ ಲಭ್ಯವಾಗಲಿದೆ. ಇನ್ನು Rad Power ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು Rad City 5 Electric Cycle ಅನ್ನು ಬುಕ್ ಮಾಡಿಕೊಳ್ಳಬಹುದು.
Rad City 5 Electric Cycle Price And Mileage
Rad City 5 Electric Cycle ನಲ್ಲಿ 672 whr ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಒಂದೇ ಚಾರ್ಜ್ ನಲ್ಲಿ ಈ ಸೈಕಲ್ ಬರೋಬ್ಬರಿ 70 ರಿಂದ 80 ಕಿಲೋಮೀಟರ್ ರೇಂಜ್ ನೀಡಲಿದೆ. 5 step pedal with 12 magnet sensors ಹೊಂದಿರುವ ಈ Rad City 5 Electric Cycle ಮಾರುಕಟ್ಟೆಯಲ್ಲಿ 1,66,084 ರೂ. ಹೊಂದಿದೆ. ನೀವು ಹೊಸ ಎಲೆಕ್ಟ್ರಿಕ್ ಸೈಕಲ್ ಅನ್ನು ಖರೀದಿಸಲು ಬಯಸಿದರೆ ಈ Rad City 5 Electric Cycle ಉತ್ತಮ ಆಯ್ಕೆಯಾಗಿದೆ.