Radhika Pandit Birthday: ಮನೆಯಿಂದ ದೂರ ಇರಲು ನಿರ್ಧಾರ ಮಾಡಿದ ರಾಧಿಕಾ ಪಂಡಿತ್, ಬರ್ತ್ಡೇ ದಿನವೇ ಅಭಿಮಾನಿಗಳಿಗೆ ಬೇಸರದ ಸುದ್ದಿ.

Actress Radhika Pandit Instagram Post: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ತಮ್ಮ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ. ಇನ್ನು ಮಾರ್ಚ್ 7 ನಾಳೆ ರಾಧಿಕಾ ಪಂಡಿತ್ ಅವರ ಹುಟುಹಬ್ಬವಾಗಿದೆ. ಈ ಬಗ್ಗೆ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

Radhika Pandit, who decided to stay away from home, is sad news for her fans on her birthday.
Image Credit: instagram

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಾಧಿಕಾ ಪಂಡಿತ್
ಕನ್ನಡದ ನೆಚ್ಚಿನ ನಟಿ ರಾಧಿಕಾ ಪಂಡಿತ್ ಇದೀಗ ನಾಳೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಆದರೆ ತಮ್ಮ ಹುಟ್ಟುಹಬ್ಬದಂದು ತಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ನಟಿ ಇನ್ಸ್ಟಾಗ್ರಾಮ್ (Radhika Pandit Instagram) ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Actress Radhika Pandit decided to stay away from home on her birthday
Image Credit: instagram

ಬರ್ತ್ ಡೇ ಸಂಭ್ರಮದಂದು ನಾನು ಮನೆಯಲ್ಲಿ ಇರುವುದಿಲ್ಲ ಎಂದ ನಟಿ ರಾಧಿಕಾ
ರಾಧಿಕ್ ಪಂಡಿತ್ ಅವರು ಮಾರ್ಚ್ 7 ರಂದು ತಮ್ಮ 38 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ಬರಿ ನಟಿ ಬರ್ತ್ ಡೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ಸ್ವತಃ ರಾಧಿಕಾ ಪಂಡಿತ್ ತಿಳಿಸಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

Join Nadunudi News WhatsApp Group

ಈ ಕುರಿತು ನಟಿ ಹುಟ್ಟುಹಬ್ಬದ ಮೊದಲ ದಿನವೇ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮೊದಲ ಬಾರಿಗೆ ನಟಿ ಮನೆಯಿಂದ ದೂರ ಇರಲಿದ್ದಾರೆ.

Actress Radhika Pandit said that she will not be at home on her birthday
Image Credit: instagram

“ಮೊದಲ ಬಾರಿಗೆ ನನ್ನ ಬರ್ತ್ ಡೇಗೆ ಮನೆಯಿಂದ ದೂರ ಇರಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದು ನಿರಾಸೆ ಆಗಬಹುದೆಂದು ಗೊತ್ತು.

ಹಾಗಾಗಿ ಇಲ್ಲೊಂದು ಆಕ್ಟಿವಿಟಿ ಇಡುತ್ತೇನೆ. ಈ ಮೂಲಕ ನಾವು ನಾಳೆ ಸಂಪರ್ಕದಲ್ಲಿರಬಹುದು” ಎಂದು ನಟಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ರಾಧಿಕಾ ಪಂಢಿತ್ ಅವರಿಗೆ ಇಂದೇ ಅಡ್ವಾನ್ಸ್ ವಿಶ್ ಮಾಡುತ್ತಿದ್ದಾರೆ.

Join Nadunudi News WhatsApp Group