Flying Kiss: ರಾಹುಲ್ ಗಾಂಧಿಯಿಂದ ಫ್ಲೈಯಿಂಗ್ ಕಿಸ್ ಪಡೆದುಕೊಂಡ ಈಕೆ ಯಾರು…?
ಹೊಸ ವಿವಾದಕ್ಕೆ ಒಳಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
Rahul Gandhi Flying Kiss Controversy: ಈ ಹಿಂದೆ ದೇಶದ ಪ್ರಧಾನಿ ಮೋದಿ (Modi) ಅವರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆ ದೇಶದಲ್ಲಿ ಬಾರಿ ಚರ್ಚೆಯನ್ನು ಹುಟ್ಟುಹಾಕಿತ್ತು.
ಮೋದಿ ಅವರಿಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ರಾಹುಲ್ ಗಾಂಧಿ ಅವರಾಯಿಗೆ ಶಿಕ್ಷೆ ವಿಧಿಸಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ಅವರು ಸಂಸದೀಯ ಸ್ಥಾನವನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ರಾಹುಲ್ ಗಾಂಧಿ ಕಾನೂನು ಹೋರಾಟ ನಡೆಸಿ ಮತ್ತೆ ಅರ್ಹತೆ ಪಡೆದುಕೊಂಡಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಇನ್ನು ರಾಹುಲ್ ಗಾಂಧಿ ಅವರು ರಾಜಕೀಯ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಯ ಸಿದ್ದತೆಯಲ್ಲಿ ರಾಹುಲ್ ಗಾಂಧಿ ತೊಡಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದರು. ನಿನ್ನೆ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪರ ಮಾತನಾಡಿದ್ದಾರೆ. ಈ ವೇಳೆ ರಾಹುಲ್ ಹೊಸ ವಿವಾದಕ್ಕೆ ಒಳಗಾಗಿದ್ದಾರೆ.
ಹೊಸ ವಿವಾದಕ್ಕೆ ಒಳಗಾದ ರಾಹುಲ್ ಗಾಂಧಿ
ಸಂಸತ್ ಸದಸ್ಯ ಅನರ್ಹತೆ ರದ್ದಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ರಾಹುಲ್ ಗಾಂಧಿ ಲೋಕಸಭೆಯಿಂದ ನಿರ್ಗಮಿಸುವ ವೇಳೆ ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಈ ವರ್ತನೆ ಹೊಸ ವಿವಾದವನ್ನು ಸೃಷ್ಟಿಸಿದೆ. ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿದ ಕಾರಣ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಪ್ರೀತಿ ಮತ್ತು ಅಕ್ಕರೆಯ ಸನ್ನೆಯಾಗಿದೆ
ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿರುವ ಬಗ್ಗೆ ವಿವಾದ ಹುಟ್ಟಿಕೊಳ್ಳುತ್ತಿದ್ದಂತೆ ಎಐಸಿಸಿ ಮಾಜಿ ವಕ್ತಾರೆ ಹಾಗೂ ಹಾಲಿ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು ಪ್ರೀತಿ ಮತ್ತು ಅಕ್ಕರೆಯ ಸನ್ನೆ. ರಾಹುಲ್ ಮಾತನಾಡುವಾಗ ಬಿಜೆಪಿ ಸಂಸದರು ಅಡ್ಡಿಪಡಿಸುತ್ತಿರಲಿಲ್ಲ. ಅದರಿಂದ ಏನು ಸಮಸ್ಯೆ? ಅದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ವಿಫಲರಾಗಿ ಏಕೆ ದ್ವೇಷ ಸಾಧಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ನಡೆದ ಘಟನೆ
ಲೋಕಸಭೆಯಿಂದ ಹೊರಡುವಾಗ ರಾಹುಲ್ ಗಾಂಧಿ ಅವರು ಕೆಲವು ಫೈಲ್ ಗಳನ್ನೂ ಕೆಳಗೆ ಬೀಳಿಸಿಕೊಂಡ್ರು. ಅದನ್ನು ಎತ್ತಿಕೊಳ್ಳಲು ಮುಂದಾದಾಗ ಅಲ್ಲೇ ಕೂತಿದ್ದ ಬಿಜೆಪಿ ಸಂಸದರು ಅವರನ್ನು ನೋಡಿ ನಗಲು ಆರಂಭಿಸಿದ್ದರು.
ಇದನ್ನು ಗಮನಿಸಿದ ರಾಹುಲ್ ಗಾಂಧಿ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಮಹಿಳಾ ಸಂಸದರು ರಾಹುಲ್ ಗಾಂಧಿ ನಡೆ ಅನುಚಿತವಾಗಿದೆ. ಅಶ್ಲೀಲ ಮತ್ತು ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂಥ ಉದಾಹರಣೆ ಹಿಂದೆದೂ ಕಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.