RailOne Application 3% Discount: ದೇಶದಲ್ಲಿ ಹೆಚ್ಚಿನ ಜನರು ರೈಲ್ವೆ ಪ್ರಯಾಣವನ್ನು ಆರಿಸಿಕೊಳ್ಳುತ್ತಾರೆ. ಏಕೆಂದರೆ ದೂರ ಊರುಗಳಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಹಾಗೆ ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ ಅನ್ನುವ ಕಾರಣಕ್ಕೆ. ಭಾರತದಲ್ಲಿ ಪ್ರತಿನಿತ್ಯ ಎರಡು ಕೋಟಿಗೂ ಅಧಿಕ ಪ್ರಯಾಣಿಕರು ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ಇತ್ತೀಚಿಗೆ ಭಾರತೀಯ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಇದೀಗ ಭಾರತೀಯ ರೈಲ್ವೆ ಅಲ್ಲಿ ಪ್ರಯಾಣ ಮಾಡುವವರಿಗೆ ಒಂದೊಳ್ಳೆ ಸಿಹಿ ಸುದ್ದಿ ಬಂದಿದೆ. ರೈಲ್ವೆ ಟಿಕೆಟ್ ಬುಕಿಂಗ್ ಮೇಲೆ 3% ರಿಯಾಯಿತಿಯನ್ನ ಘೋಷಣೆ ಮಾಡಲಾಗಿದೆ. ಹಾಗಾದ್ರೆ ನಾವೀಗ ಆ ಯೋಜನೆ ಯಾವುದು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
RailOne app Discount
ಇದೀಗ ಭಾರತೀಯ ರೈಲ್ವೆ ಡಿಜಿಟಲ್ ಟಿಕೆಟ್ ಬುಕಿಂಗ್ ಹೆಚ್ಚಿಸಲು ಹೊಸ ಯೋಜನೆ ಜಾರಿಗೆ ತಂದಿದ್ದು, ರೈಲ್ ಒನ್ ಆಪ್ ಮೂಲಕ ಸಾಮಾನ್ಯ ಟಿಕೆಟ್ ಬುಕ್ ಮಾಡುವವರಿಗೆ ಶೇಕಡಾ 3 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ರಿಯಾಯಿತಿ ಜನವರಿ 14, 2026 ರಿಂದ ಜುಲೈ 14, 2026 ರ ವರೆಗೆ ಲಭ್ಯವಿದೆ.
ಈ ರಿಯಾಯಿತಿ ಪಡೆದುಕೊಳ್ಳುದು ಹೇಗೆ?
RailOne app ನಲ್ಲಿ ಈಗಾಗಲೇ R-Wallet ಮೂಲಕ ಪಾವತಿ ಮಾಡಿದರೆ ಮಾತ್ರ ಶೇ.3 ಕ್ಯಾಶ್ ಬ್ಯಾಕ್ ಸಿಗುತ್ತಿತ್ತು. ಆದರೆ ಇನ್ನುಮುಂದೆ UPI, Debit card, Credit card, Net Banking ಸೇರಿದಂತೆ ಯಾವುದೇ ಡಿಜಿಟಲ್ ಪಾವತಿ ಮಾಡಿದರೂ ನೇರವಾಗಿ ಶೇ.3 ರಿಯಾಯಿತಿ ಸಿಗಲಿದೆ. R-Wallet ಬಳಸಿದರೆ ಹಿಂದಿನ ಕ್ಯಾಶ್ ಬ್ಯಾಕ್ ಮುಂದುವರಿಯಲಿದ್ದು, ಕೆಲವೊಮ್ಮೆ ಒಟ್ಟು ಶೇ.6 ರಷ್ಟು ಲಾಭ ಸಾಧ್ಯ.
ಯಾವುದಕ್ಕೆ ಈ ಆಫರ್ ಅನ್ವಯ?
- Unreserved ಸಾಮಾನ್ಯ ಟಿಕೆಟ್‌ಗಳಿಗೆ ಮಾತ್ರ ಅನ್ವಯ
- RailOne app ಬಿಟ್ಟು ಇತರ app ಅಥವಾ ವೆಬ್ ಸೈಟ್ ನಲ್ಲಿ ಸಾಧ್ಯವಿಲ್ಲ
- ರಿಸರ್ವ್ಡ್ ಟಿಕೆಟ್ ಅಥವಾ ಸ್ಪೆಷಲ್ ಟ್ರೈನ್ ಗಳಿಗೆ ಇದು ಅನ್ವಯಿಸುವುದಿಲ್ಲ
RailOne app Uses
ರೈಲ್ ಒನ್ ಅಪ್ಲಿಕೇಶನ್ ಭಾರತೀಯ ರೈಲ್ವೆಯ ಭಾರತದ ಅಧಿಕೃತ “ಸೂಪರ್ ಅಪ್ಲಿಕೇಶನ್” ಆಗಿದೆ. ಇದು ಅಧಿಕೃತ ಸರ್ಕಾರಿ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಟಿಕೆಟ್ ಬುಕಿಂಗ್ ಜೊತೆಗೆ ರೈಲು ಟ್ರ್ಯಾಕಿಂಗ್, ಆಹಾರ ಆರ್ಡರ್, ದೂರು ನೋಂದಣಿ, ಪೋರ್ಟರ್ ಬುಕಿಂಗ್, ಟ್ಯಾಕ್ಸಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆಪ್ ಮೂಲಕ ನಿಲ್ದಾಣದಲ್ಲಿ ಸಾಲು ಕಡಿಮೆಯಾಗಿ, ಡಿಜಿಟಲ್ ಪಾವತಿ ಹೆಚ್ಚಾಗಲಿದೆ. ಸುಗಮ ಪ್ರಯಾಣದ ಅನುಭವಕ್ಕಾಗಿ RailOne app ಉತ್ತಮ ಆಯ್ಕೆ ಆಗಿದೆ.
ಈ ರೀತಿಯಾಗಿ ಟಿಕೆಟ್ ಬುಕ್ ಮಾಡಿಕೊಳ್ಳಿ
- ಮೊದಲು RailOne app ಡೌನ್ಲೋಡ್ ಮಾಡಿಕೊಳ್ಳಿ
- IRCTC / UTS ಅಥವಾ ಫೋನ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿಕೊಳ್ಳಿ
- “ಟಿಕೆಟ್‌ಗಳನ್ನು ಬುಕ್ ಮಾಡಿ ” ಆಯ್ಕೆ ಮಾಡಿ
- ನಿಲ್ದಾಣಗಳು, ದಿನಾಂಕ, ವರ್ಗವನ್ನು ಆಯ್ಕೆ ಮಾಡಿ
- ಟಿಕೆಟ್ ಪ್ರಕಾರವನ್ನು (ಕಾಯ್ದಿರಿಸಲಾಗಿದೆ/ಕಾಯ್ದಿರಿಸಲಾಗಿಲ್ಲ/ಪ್ಲಾಟ್‌ಫಾರ್ಮ್) ಆಯ್ಕೆ ಮಾಡಿ
- UPI, Debit card, Credit card, Net Banking, R-Wallet ಮೂಲಕ ದರವನ್ನು ಪಾವತಿ ಮಾಡಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

