Railway Coach: ರೈಲಿನಲ್ಲಿ ಜನರಲ್ ಭೋಗಿ ಮೊದಲು ಮತ್ತು ಕೊನೆಯಲ್ಲಿ ಯಾಕಿರುತ್ತದೆ, ನಿಯಮ ಏನು.

ರೈಲಿನಲ್ಲಿ ಜೆನರಲ್ ಭೋಗಿಗಳು ಮೊದಲು ಮತ್ತು ಕೊನೆಯಲ್ಲಿ ಯಾಕಿರುತ್ತದೆ ತಿಳಿದುಕೊಳ್ಳಿ.

Indian Railway General Coach: ದೂರದ ಪ್ರಯಾಣವನ್ನು ಮಾಡುವವರು ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲು ಪ್ರಯಾಣವು ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಇನ್ನು ಇತ್ತೀಚಿಗೆ ರೈಲ್ವೆ ನಿಯಮದಲ್ಲಿ ಸಾಕಷ್ಟು ನಿಯಮಗಳು ಬದಲಾಗಲಿವೆ.

ಜೊತೆಗೆ ಹೊಸ ಹೊಸ ನಿಯಮಗಳು ಕೂಡ ಬಿಡುಗಡೆಯಾಗಿದೆ. ರೈಲಿನ ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯ ಕೂಡ ಬಿಡುಗಡೆಗೊಂಡಿದೆ. ಇನ್ನು ಸಾಮಾನ್ಯವಾಗಿ ಭಾರತೀಯ ರೈಲುಗಳು ಎಲ್ಲವು ಕೂಡ ಒಂದೇ ರೀತಿಯಲ್ಲಿ ಇರುತ್ತದೆ. ರೈಲುಗಳಲ್ಲಿ ಸಾಮಾನ್ಯವಾಗಿ ಜನರಲ್ ಕೋಚ್ ಹಾಗೂ ಎಸಿ ಕೋಚ್ ಗಳು ಇರುತ್ತವೆ. ರೈಲುಗಳಲ್ಲಿ ಇರುವ ವಿವಿಧ ರೀತಿಯ ಕೋಚ್ ಗಳ ಬಗ್ಗೆ ಒಂದಿಷ್ಟು ಮಾಹತಿ ತಿಳಿಯೋಣ.

Indian Railway General Coach
Image Source: India.com

ಜನರಲ್ ಭೋಗಿಯನ್ನು ಮೊದಲು ಮತ್ತು ಕೊನೆಯಲ್ಲಿ ಇರಿಸಲು ಕಾರಣ
ಸಾಮಾನ್ಯವಾಗಿ ಎಲ್ಲಾ ರೈಲುಗಳಲ್ಲಿ ಸಾಮಾನ್ಯ ಕೋಚ್ (General Coach)  ಗಳು ಮುಂಬಾಗದಲ್ಲಿ ಮತ್ತು ಕೊನೆಯಲ್ಲಿ ಇರುತ್ತದೆ. ಹಾಗೆಯೆ ಎಸಿ ಕೋಚ್ (AC Coach) ಗಳು ರೈಲಿನ ಮದ್ಯದಲ್ಲಿ ಇರುತ್ತದೆ. ರೈಲಿನಲ್ಲಿ ಕೋಚ್ ಗಳ ರಚನೆ ಈ ರೀತಿ ಇರಲು ಕಾರಣ ಏನೆಂಬುದನ್ನು ತಿಳಿಯೋಣ.

Indian Railway General Coach
Image Sourcve: Quora

ಸಾಮಾನ್ಯ ಕೋಚ್ ನಲ್ಲಿ ಜನಸಂಖ್ಯೆ ಹೆಚ್ಚಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತುವುದು ಮತ್ತು ಇಳಿಯುವುದು ಮಾಡುವುದರಿಂದ ರೈಲಿನಲ್ಲಿ ಜನರಲ್ ಕೋಚ್ ಗಳು ರೈಲಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಇರುತ್ತದೆ.

ಸ್ಲೀಪರ್ ಮತ್ತು ಎಸಿ ಕೋಚ್ ಗಳಲ್ಲಿ ಸಾಮಾನ್ಯ ಕೋಚ್ ಗಳಿಗಿಂತ ಕಡಿಮೆ ಸಂಖ್ಯೆಯ ಪ್ರಯಾಣಿಕರು ಇರುತ್ತಾರೆ. ಹಾಗಾಗಿ ಸ್ಲೀಪರ್ ಮತ್ತು ಎಸಿ ಕೋಚ್ ಗಳನ್ನೂ ರೈಲಿನ ಮಧ್ಯದಲ್ಲಿ ರಚಿಸಲಾಗಿದೆ. ಒಂದು ವೇಳೆ ಮಧ್ಯದಲ್ಲಿ ಸಾಮಾನ್ಯ ಕೋಚ್ ಗಳನ್ನು ಇರಿಸಿದರೆ ರೈಲಿನ ಮಧ್ಯಭಾಗದಲ್ಲಿಯೇ ಜನರು ಹೆಚ್ಚಾಗಿ ಸೇರುತ್ತಾರೆ. ಆಗ ರೈಲ್ವೆ ನಿಲ್ದಾಣದ ವ್ಯವಸ್ಥೆಯಲ್ಲಿ ತುಂಬಾ ತೊಂದರೆಗಳಾಗುತ್ತವೆ.

Join Nadunudi News WhatsApp Group

Indian Railway General Coach
Image Source: Zee Business

Join Nadunudi News WhatsApp Group