Railway Exam: ರೈಲ್ವೆ ಪರೀಕ್ಷೆ ಬರೆಯುವ ಕನ್ನಡಿಗರಿಗೆ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ
ರೈಲ್ವೆ ಪರೀಕ್ಷೆ ಬರೆಯುವ ಕನ್ನಡಿಗರಿಗೆ ಗುಡ್ ನ್ಯೂಸ್
Railway Exam New Update: ಸದ್ಯ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಒಂದಿಷ್ಟು ಆದ್ಯತೆ ಕಡಿಮೆ ಇದೆ ಎನ್ನಬಹುದು. ಕೆಲವು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಉದ್ಯೋಗದ ಪರೀಕ್ಷೆಗಳನ್ನು ಕನ್ನಡಲ್ಲಿ ಬರೆಯಲು ಅವಕಾಶ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ನೈರುತ್ಯ ರೈಲ್ವೆ ಇಲಾಖೆ ಕನ್ನಡಿಗ ನೌಕರರಿಗೆ ಬಿಗ್ ಶಾಕ್ ನೀಡಿತ್ತು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಈ ವಿಚಾರವಾಗಿ ಕನ್ನಡಿಗರು ದ್ವನಿಯೆತ್ತಿದ್ದರು. ಸದ್ಯ ಕನ್ನಡಿಗರಿಗೆ ಈ ವಿಚಾರವಾಗಿ ಸಿಹಿ ಸುದ್ದಿ ಲಭಿಸಿದೆ.
ಕನ್ನಡಿಗರಿಗೆ ಸಿಹಿ ಸುದ್ದಿ
ರೈಲ್ವೆ ಬಡ್ತಿ ಪರೀಕ್ಷೆ ನೈರುತ್ಯ ರೈಲ್ವೆ ಇಲಾಖೆ ಕನ್ನಡಿಗರಿಗೆ ಅವಕಾಶವನ್ನು ನೀಡುತ್ತಿಲ್ಲ. ಈ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದರೆ ಈ ಪರೀಕ್ಷೆ ಎದಿರಿಸಲು ಕನ್ನಡಿಗರಿಗೆ ಕಷ್ಟವಾಗುತ್ತದೆ. ಅವರು ಈ ಹುದ್ದೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾಗುತ್ತದೆ. ಇನ್ನು ಈ ಕ್ರಮದ ವಿರುದ್ಧ ಕನ್ನಡಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಎಲೆಕ್ಟ್ರಿಕಲ್ ವಿಭಾಗದಿಂದ ಬಡ್ತಿ ಮೀಸಲು ಜೂನಿಯರ್ ಇಂಜಿನಿಯರ್ ಹುದ್ದೆಗಳ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎನ್ನುವ ಬಗ್ಗೆ ಹೇಳಲಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಕನ್ನಡಿಗರಿಗೆ ಅವಕಾಶವಿಲ್ಲ. ಹೀಗಾಗಿ ಕನ್ನಡಿಗ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ರೈಲ್ವೆ ಸಹಾಯಕ ಸಚಿವ ಸೋಮಣ್ಣ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ
ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಿ ಆದೇಶ ಹೊರಡಿಸುವಂತೆ ರೈಲ್ವೆ ಮಂಡಳಿ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಬಡ್ತಿಗಾಗಿ ನಡೆಸುವ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಿ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ. ಇನ್ನುಮುಂದೆ ನೌಕರರರು ಕನ್ನಡದಲ್ಲಿಯೂ ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.