Railway Facility: ಈ ಖಾಯಿಲೆಗಳು ಇದ್ದವರಿಗೆ ರೈಲಿನಲ್ಲಿ ಸಿಗಲಿದೆ ರಿಯಾಯಿತಿ, ರೈಲ್ವೆ ಇಲಾಖೆಯ ಘೋಷಣೆ.

ಈ ಹತ್ತು ಖಾಯಿಲೆಗಳು ಇದ್ದವರಿಗೆ ಭಾರತೀಯ ರೈಲ್ವೆ ಅಲ್ಲಿ ಟಿಕೆಟ್ ದರದಲ್ಲಿ ರಿಯಾಯಿತಿ ಇದೆ.

Railway Facility For Sick Passengers: ಭಾರತೀಯ ರೈಲ್ವೆ (Indian Railway Rule) ನಿಯಮದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳು ಆಗಿವೆ. ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ.

ಇನ್ನು ರೈಲು ಪ್ರಯಾಣದಲ್ಲಿ ಸಾಕಷ್ಟು ನಿಯಮಗಳು ಕೂಡ ಇರುತ್ತವೆ. ರೈಲಿನಲ್ಲಿ ಪ್ರಯಾಣ ಮಾಡುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಇದೀಗ ರೈಲ್ವೆ ಸಂಚಾರ ಇಲಾಖೆಯು ಅನಾರೋಗ್ಯ ಪೀಡಿತರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ.

Railway Facility For Sick Passengers
Image Source: Zee News

ಅನಾರೋಗ್ಯ ಪೀಡಿತ ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯ
ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ರೈಲ್ವೆ ಇಲಾಖೆ ನೀಡುತ್ತದೆ. ರೈಲು ಪ್ರಯಾಣದಲ್ಲಿ ಅನಾರೋಗ್ಯ ಪೀಡಿತ ಪ್ರಯಾಣಿಕರಿಗಾಗಿ ವಿಶೇಷ ರೀತಿಯ ಸೌಲಭ್ಯ ಇರುತ್ತದೆ. ರೈಲುಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಕೆಲವರು ರೈಲ್ವೆ ಇಲಾಖೆ ಟಿಕೆಟ್ ದರದಲ್ಲಿ ವಿನಾಯಿತಿಯನ್ನು ನೀಡುತ್ತಿದೆ. ಇನ್ನು ಯಾವ ಕಾಯಿಲೆ ಇದ್ದವರಿಗೆ ರೈಲ್ವೆ ಇಲಾಖೆ ರಿಯಾಯಿತಿಯನ್ನು ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Railway Facility For Sick Passengers
Image Source: Scroll.in

ಯಾವ ರೋಗಿಗಳು ರಿಯಾಯಿತಿಯನ್ನು ಪಡೆಯುತ್ತಾರೆ.
ಕ್ಯಾನ್ಸರ್ ರೋಗಿ ಹಾಗೂ ಅವರ ಜೊತೆ ಹೋಗುವ ಅಟೆಂಡರ್ ಗೆ ಬಾಡಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಫಸ್ಟ್ ಕ್ಲಾಸ್ ಸೆಕೆಂಡ್ ಕ್ಲಾಸ್ ನಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ತಲಸ್ಸೇನಿಯ, ಹೃದಯೋಗಿ, ಕಿಡ್ನಿ ರೋಗಿಗಳಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.

ಹೃದಯೋಗಿಗಳು ಹೃದಯ ಚಿಕಿತ್ಸೆಗೆ ಹೋದರೆ ಮತ್ತು ಮೂತ್ರಪಿಂಡದ ರೋಗಿಗಳು ಮೂತ್ರಪಿಂಡ ಕಸಿ ಅಥವಾ ಡಯಾಲಿಸಿಸ್ ಗೆ ಹೋದರೆ, ಪ್ರಯಾಣ ದರದಲ್ಲಿ ವಿನಾಯಿತಿ ಸಿಗುತ್ತದೆ. ಈ ಪರಿಸ್ಥಿತಿಯಲ್ಲಿ ಎಸಿ 3 , ಎಸಿ ಚೆರ್ ಕಾರ್, ಸ್ಲೀಪರ್, ಸೆಕೆಂಡ್ ಕ್ಲಾಸ್ ಫಸ್ಟ್ ಎಸಿಯಲ್ಲಿ ಶೇ. 75 ರಷ್ಟು ವಿನಾಯಿತಿ ದೊರೆಯುತ್ತದೆ.

Join Nadunudi News WhatsApp Group

ಹಿಮೋಫೀಲಿಯಾ ಚಿಕಿತ್ಸೆಗೆ ಹೋಗುವಾಗ ರೋಗಿಗಳಿಗೆ ವಿನಾಯಿತಿ ದೊರೆಯುತ್ತದೆ. ಈ ರೋಗಿಗಳಿಗೆ ಸೆಕೆಂಡ್ ಕ್ಲಾಸ್ ಫಸ್ಟ್ ಎಸಿಯಲ್ಲಿ ಶೇ. 75 ರಷ್ಟು ವಿನಾಯಿತಿ ದೊರೆಯುತ್ತದೆ. ಏಡ್ಸ್ ಹಾಗೂ ವಸ್ಟೋಮಿ ರೋಗಿಗಳಿಗೆ ಎರಡನೇ ತರಗತಿಯಲ್ಲಿ ಶೇ. 50 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗೆಯೆ ರಕ್ತಹೀನತೆ ರೋಗಿಗಳಿಗೆ ಎಸಿ 3 , ಎಸಿ ಚೆರ್ ಕಾರ್, ಸ್ಲೀಪರ್, ಸೆಕೆಂಡ್ ಕ್ಲಾಸ್ ಫಸ್ಟ್ ಎಸಿಯಲ್ಲಿ ಶೇ. 50 ರಷ್ಟು ವಿನಾಯಿತಿ ದೊರೆಯುತ್ತದೆ.

Railway Facility For Sick Passengers
Image Source: The Economic Times

Join Nadunudi News WhatsApp Group