Free Facilities: ಇನ್ನುಮುಂದೆ ರೈಲಿನಲ್ಲಿ ಈ ಸೇವೆಗಳು ಉಚಿತವಾಗಿ ಸಿಗಲಿದೆ, ರೈಲು ಪ್ರಯಾಣಿಕರಿಗೆ ಹೊಸ ಸೇವೆ ಆರಂಭ.
ರೈಲು ಪ್ರಯಾಣಿಕರಿಗೆ ಇನ್ನುಮುಂದೆ ರೈಲಿನಲ್ಲಿ ಈ ಸೇವೆಗಳು ಉಚಿತವಾಗಿ ಸಿಗಲಿದೆ.
Railway Free Facilities: ಸದ್ಯ ಹಬ್ಬದ ಸೀಸನ್ ಆರಂಭಗೊಂಡಿದ್ದು, ಊರಿಂದ ಊರಿಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚುತ್ತದೆ ಎನ್ನಬಹುದು. ದೂರದ ಪ್ರಯಾಣಕ್ಕೆ ರೈಲು ಪ್ರಯಾಣ ಉತ್ತಮ ಆಯ್ಕೆ ಆಗಿರುವುದರಿಂದ ಪ್ರತಿನಿತ್ಯ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣವನ್ನು ಮಾಡುತ್ತಾರೆ. ಸದ್ಯ ರೈಲುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುವ ಕಾರಣ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ವಿವಿಧ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.
ರೈಲು ಪ್ರಯಾಣಿಕರಿಗೆ ಹೊಸ ಸೇವೆ ಆರಂಭ
ಇದೀಗ ರೇಲ್ವೆ ಇಲಾಖೆಯು ರೈಲ್ವೆ ಟಿಕೆಟ್ ನಲ್ಲಿ ವಿವಿಧ ರೀತಿಯ ರಿಯಾಯಿತಿಯನ್ನು ನೀಡಲು ನಿರ್ಧರಿಸಿದೆ. ರೈಲು ಟಿಕೆಟ್ ಖರೀದಿಸಿದ ಬಳಿಕ ನೀವು ಈ ಎಲ್ಲ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ರೈಲು ಪ್ರಯಾಣಿಕರಿಗೆ ಲಭ್ಯವಿರುವ ಉಚಿತ ಸೇವೆಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ನುಮುಂದೆ ರೈಲಿನಲ್ಲಿ ಈ ಸೇವೆಗಳು ಉಚಿತವಾಗಿ ಸಿಗಲಿದೆ
*ಉಚಿತ ವೈದ್ಯಕೀಯ ಸೌಲಭ್ಯ
ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗಿದ್ದಲ್ಲಿ ಭಾರತೀಯ ರೈಲ್ವೆ ಪ್ರಥಮ ಚಿಕೆತ್ಸೆ ಸೌಲಭ್ಯವನ್ನು ನೀಡಲಿದೆ.
*ನಿರೀಕ್ಷಣಾ ಕೊಠಡಿಯ ಸೌಲಭ್ಯ
ಇನ್ನು ಕೆಲಮೊಮ್ಮೆ ರೈಲು ತಡವಾಗಿ ಸ್ಟೇಷನ್ ತಲುಪುತ್ತದೆ. ಈ ಸಮಯದಲ್ಲಿ ನೀವು ಉಚಿತ ನಿರೀಕ್ಷಣಾ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು. ನೀವು ಹಗಲಿನ ಸಮಯದಲ್ಲಿ ರೈಲು ಆಗಮನದ 2 ಗಂಟೆಗಳ ಮೊದಲು ಮತ್ತು ಪ್ರಯಾಣದ ಅಂತ್ಯದ 2 ಗಂಟೆಗಳ ನಂತರ ಕಾಯುವ ಕೋಣೆಯನ್ನು ಉಚಿತವಾಗಿ ಬಳಸಬಹುದು. ರಾತ್ರಿಯ ಸಮಯದಲ್ಲಿ 6 ಗಂಟೆಗಳ ಕಾಲ ಉಚಿತ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು.
*ಉಚಿತ ವೈ ಫೈ ಸೌಲಭ್ಯ
ಇನ್ನು ರೈಲು ಪ್ರಯಾಣಿಕರಿಗಾಗಿ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಉಚಿತ ವೈ ಫೈ ಸೌಲಭ್ಯ ಸಿಗಲಿದೆ. ಅರ್ಧ ಗಂಟೆಯವರೆಗೆ ಪ್ರಯಾಣಿಕರು ಉಚಿತ ವಿದ್ಯುತ್ ಅನ್ನು ಬಳಸಬಹುದು.
*ಅಗ್ಗದ ಬೆಲೆಯಲ್ಲಿ ಇಂಟರ್ನೆಟ್
ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ 10 ರೂ. ಗೆ 5GB ಡೇಟಾ ಮತ್ತು 15 ರೂ. ಗೆ 10GB ಡೇಟಾ ಲಭ್ಯವಿದ್ದು, ಇದರ ವ್ಯಾಲಿಡಿಟಿ ಒಂದು ದಿನ ಮತ್ತು 34 MBPS ವೇಗ ಲಭ್ಯವಿದೆ.
*ಕ್ಲೋಕ್ ರೂಮ್ ಸೌಲಭ್ಯ
ನಿಮ್ಮ ಬಳಿಯಿರುವ ಪ್ರಮುಖ ವಸ್ತುಗಳನ್ನು ಕ್ಲೋಕ್ ರೂಮ್ ನಲ್ಲಿ ಕಡಿಮೆ ಶುಲ್ಕವನ್ನು ಪಾವತಿಸಿ ಇಟ್ಟುಕೊಳ್ಳಬಹುದು. ಮೊದಲ 24 ಗಂಟೆಗಳವರೆಗೆ 15 ರೂ. ಪಾವತಿಸಬೇಕಾಗುತ್ತದೆ. ಪ್ರಯಾಣಿಕರು ಪ್ರತಿ ಯುನಿಟ್ ಗೆ 10 ರೂ. ಹಾಗು ಮುನಿದಿನ 24 ಗಂಟೆಗಳ ಕಾಲ ಪ್ರತಿ ಯುನಿಟ್ ಗೆ 20 ಮತ್ತು 12 ರೂ. ಪಾವತಿಸಬೇಕಾಗುತ್ತದೆ.