Image Credit: Original Source
Railway Job Recruitment 2024: ದೇಶದಲ್ಲಿ ನಿರುದ್ಯೋಗಿಗಳ ಸಮಸ್ಯೆ ಈಗಲೂ ಕೂಡ ಹಾಗೆಯೆ ಇದೆ. ಸಾಕಷ್ಟು ವಿದ್ಯಾವಂತರು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಸಿಗದೇ ಇರುವ ಸಲುವಾಗಿ ಇನ್ನು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಇನ್ನು ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ನೆರವಾಗಲು ಯುವ ನಿಧಿ ಯೋಜನೆಯ ಮೂಲಕ ಮಾಸಿಕ ಹಣವನ್ನು ಕೂಡ ನೀಡುತ್ತಿದೆ.
ರಾಜ್ಯ ಸರಕಾರದ ಈ ಯೋಜನೆಯ ಲಾಭವನ್ನು ಸಾಕಷ್ಟು ಜನರು ಪಡೆಯುತ್ತಿದ್ದಾರೆ. ಇನ್ನು ಸರ್ಕಾರ ನಿರುದ್ಯೋಗಿಗಳಿಗೆ ಅನುಕೂಲವಾಗಲು ಆಗಾಗ ಉನ್ನತ ಹುದ್ದೆಗೆ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ. ಸದ್ಯ ರೈಲ್ವೆ ಇಲಾಖೆಯು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಂಡುಕೊಳ್ಳಲು ಒಂದೊಳ್ಳೆ ಅವಕಾಶವನ್ನು ನೀಡಿದೆ.
ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್
ರೈಲ್ವೇ ನೇಮಕಾತಿ ಮಂಡಳಿ (RRB) ಸಹಾಯಕ ಲೋಕೋ ಪೈಲಟ್ (ALP) ಪೋಸ್ಟ್ 2024 ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಮತ್ತು ಗಮನಾರ್ಹ ಹೆಚ್ಚಳವನ್ನು ಪ್ರಕಟಿಸಿದೆ. ಆರಂಭದಲ್ಲಿ 5696 ಹುದ್ದೆಗಳು ಮಾತ್ರ ಲಭ್ಯವಿದ್ದವು. ಈಗ ಈ ಸಂಖ್ಯೆಯನ್ನು ಗಣನೀಯವಾಗಿ 18799 ಹುದ್ದೆಗಳಿಗೆ ಹೆಚ್ಚಿಸಲಾಗಿದೆ. ಖಾಲಿ ಹುದ್ದೆಗಳ ಈ ಗಮನಾರ್ಹ ಹೆಚ್ಚಳವು ಎಲ್ಲಾ 16 ರೈಲ್ವೆ ನೇಮಕಾತಿ ಮಂಡಳಿ ವಲಯಗಳಲ್ಲಿ ಹರಡಿದೆ. RRB ಸ್ವತಃ ಖಾಲಿ ಹುದ್ದೆಗಳ ಹೆಚ್ಚಳದ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ರೈಲ್ವೆ ಇಲಾಖೆಯಲ್ಲಿ 18799 ಹುದ್ದೆಗೆ ನೇಮಕಾತಿ ಆರಂಭ
ಆರಂಭಿಕ ಅಪ್ಲಿಕೇಶನ್ ವಿಂಡೋದಲ್ಲಿ ಅರ್ಜಿ ಸಲ್ಲಿಸಿದವರಿಗೆ ಖಾಲಿ ಹುದ್ದೆಗಳಲ್ಲಿ ಗಣನೀಯ ಹೆಚ್ಚಳವು ಸುವರ್ಣ ಅವಕಾಶವಾಗಿದೆ. RRB ALP ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 1 (CBT 1) ಜೂನ್ ಮತ್ತು ಆಗಸ್ಟ್ 2024 ರ ನಡುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು. ಮೀಸಲಾತಿಗೆ ಒಳಪಟ್ಟು ವಯೋಮಿತಿ ಸಡಿಲಿಕೆ ಲಭ್ಯವಿದೆ.
ಈ ರೀತಿಯಾಗಿ ಹುದ್ದೆಗೆ ಅರ್ಜಿ ಸಲ್ಲಿಸಿ
•ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.rrbapply.gov.in ಗೆ ಭೇಟಿ ನೀಡಿ.
•ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಹೆಸರನ್ನು ನೋಂದಾಯಿಸಿ ಮತ್ತು ಲಾಗಿನ್ ಮಾಡಿ.
•ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
•ನಿರ್ದಿಷ್ಟ ಗಾತ್ರದಲ್ಲಿ ಡಾಕ್ಯುಮೆಂಟ್, ಫೋಟೋಗಳನ್ನು ಅಪ್ ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ನೀಡಿದರೆ ನೀವು ಆನ್ಲೈನ್ ನಲ್ಲಿಯೇ ಸುಲಭವಾಗಿ ಅರ್ಜಿಯನ್ನು ಸಸಲ್ಲಿಸಬಹುದು.
Tata Safari And Tata Harrier Discount Details: ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವು ಟಾಪ್ ಬೆಸ್ಟ್ ಬ್ರಾಂಡ್ ನ…
Yuva Nidhi Latest Update: ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ವೇಳೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವ ಬಗ್ಗೆ…
Good Loan v/s Bad Loan: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಎದುರಾದಾಗ ಪ್ರತಿಯೊಬ್ಬರೂ ಕೂಡ ಸಾಲದ ಮೊರೆ ಹೋಗುತ್ತಾರೆ. ದೇಶದ…
Atal Pension Yojana Investment Details: ನಿವೃತ್ತಿಯ ನಂತರ ಜೀವನ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುವುದು ಸಹಜ. ನಿವೃತ್ತಿಯ ನಂತರ…
Ather Rizta Electric Scooter Price And Feature: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ. ಸದ್ಯ…
Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು…