Liquor Rule: ರೈಲಿನಲ್ಲಿ ಎಷ್ಟು ಮದ್ಯದ ಬಾಟಲಿಗಳಲ್ಲಿ ತಗೆದುಕೊಂಡು ಹೋಗಬಹುದು, ಎಲ್ಲಾ ರೈಲು ಪ್ರಯಾಣಿಕರಿಗೆ ಒಂದೇ ನಿಯಮ.

ರೈಲಿನಲ್ಲಿ ಇದಕ್ಕಿಂತ ಹೆಚ್ಚಿನ ಮದ್ಯದ ಬಾಟಲಿಗಳನ್ನ ತಗೆದುಕೊಂಡು ಹೋಗುವಂತಿಲ್ಲ.

Indian Railway Liquor Rule: ಜನರು ಹೆಚ್ಚಾಗಿ ದೂರದ ಪ್ರಯಾಣಕ್ಕೆ ರೈಲು (Railway) ಪ್ರಯಾಣವನ್ನು ಆರಿಸುತ್ತಾರೆ. ಇನ್ನು ರೈಲಿನಲ್ಲಿ ಪ್ರಯಾಣಿಸುವವರು ರೈಲ್ವೆ ಪ್ರತಿ ನಿಯಮವನ್ನು ಕೂಡ ಅನುಸರಿಸಬೇಕಾಗುತ್ತದೆ. ರೈಲ್ವೆ ಯಾವುದೇ ನಿಯಮವನ್ನು ಕೂಡ ಉಲ್ಲಘಿಸುವಂತಿಲ್ಲ. ಇನ್ನು ರೈಲುಗಳಲ್ಲಿ ಸಂಚಿರುಸುವಾಗ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆಯೇ..? ಎನ್ನುವುದು ಕೆಲವರ ಪ್ರಶ್ನೆಯಾಗಿರಬಹುದು.

ರೈಲ್ವೆ ಇಲಾಖೆ ಈ ಮದ್ಯ ಸಾಗಾಣಿಕೆಗೆ ನಿಯಮವನ್ನು ರೂಪಿಸಿದೆ. ರೈಲ್ವೆ ಇಲ್ಕಎಯ ನಿಯಮವನ್ನು ಉಲ್ಲಂಘಿಸಿ ಮದ್ಯದ ಬಾಟಲಿಗಳನ್ನು ಸಾಗಿಸುವಂತಿಲ್ಲ. ಸದ್ಯ ರೈಲ್ವೆ ನಿಯಮದ ಪ್ರಕಾರ, ರೈಲಿನಲ್ಲಿ ಎಷ್ಟು ಮದ್ಯದ ಬಾಟಲಿಗಳಲ್ಲಿ ತಗೆದುಕೊಂಡು ಹೋಗಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Indian Railway Latest Update
Image Credit: NCR Rules

ರೈಲಿನಲ್ಲಿ ಮದ್ಯದ ಬಾಟಲಿಗಳಲ್ಲಿ ತಗೆದುಕೊಂಡು ಹೋಗುವುದು ಕಾನೂನುಬಾಹಿರವೇ..?
ರೈಲಿನಲ್ಲಿ ಮದ್ಯವನ್ನು ಸಾಗಿಸುವುದು ನೀವು ಯಾವ ರಾಜ್ಯದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಮದ್ಯದ ಬಗ್ಗೆ ತಮ್ಮದೇ ಆದ ನಿಯಮಗಳನ್ನು ಮಾಡಲು ಸಂವಿಧಾನವು ಎಲ್ಲಾ ರಾಜ್ಯಗಳಿಗೆ ಸ್ವಾತಂತ್ರ್ಯವನ್ನು ನೀಡಿದೆ.

ವಿವಿಧ ರಾಜ್ಯದಲ್ಲಿ ಅನೇಕ ರೀತಿಯ ಮದ್ಯದ ನಿಯಮಗಳು ಮತ್ತು ನಿಬಂಧನೆಗಳನ್ನು ಇರಿಸಲಾಗಿದೆ. ಆದ್ದರಿಂದ ಪ್ರತಿ ರಾಜ್ಯವು ತನ್ನ ಮಿತಿಯೊಳಗೆ ಮದ್ಯದ ಮಾರಾಟದಿಂದ ಸೇವನೆಯವರೆಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಿದೆ.

ಈ ರಾಜ್ಯಕ್ಕೆ ಮದ್ಯವನ್ನು ಕೊಂಡೊಯ್ದರೆ ಜೈಲು ಶಿಕ್ಷೆ ಖಚಿತ
ದೇಶದ ಹಲವು ರಾಜ್ಯಗಳಲ್ಲಿ ಮದ್ಯವನ್ನು ನಿಷೇದಿಸಲಾಗಿದೆ. ರೈಲಿನಲ್ಲಿ ಪ್ರಯಾಣ ಮಾಡುವವರು ನಿಷೇಧಿತ ರಾಜ್ಯಗಳಿಗೆ ಮದ್ಯವನ್ನು ಕೊಂಡೊಯ್ಯುವಂತಿಲ್ಲ. ಬಿಹಾರ, ಗುಜರಾತ್, ಲಕ್ಷದ್ವೀಪ ಮತ್ತು ನಾಗಾಲ್ಯಾಂಡ್ ರಾಜ್ಯಕ್ಕೆ ರೈಲು , ಬಸ್ ಅಥವಾ ಇನ್ನಿತರ ಸಾರಿಗೆ ಸೌಲಭ್ಯದ ಮೂಲಕ ಮದ್ಯವನ್ನು ಕೊಂಡೊಯ್ಯುವಂತಿಲ್ಲ. ಈ ರಾಜ್ಯಗಳಲ್ಲಿ ಮದ್ಯದ ಮಾರಾಟ, ಉತ್ಪಾದನೆ ಅಥವಾ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದಾಗ್ಯೂ, ಪ್ರಯಾಣಿಕರು ರೈಲಿನಲ್ಲಿ ಮದ್ಯವನ್ನು ನಿಷೇಧಿಸಿದ ರಾಜ್ಯಕ್ಕೆ ಕೊಂಡೊಯ್ದರೆ ಅವರು ಆ ರಾಜ್ಯದ ಕಾನೂನಿನ ಪ್ರಕಾರ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.

Join Nadunudi News WhatsApp Group

Indian Railway Liquor Rule
Image Source: EI Samay

ರೈಲಿನಲ್ಲಿ ಎಷ್ಟು ಮದ್ಯದ ಬಾಟಲಿಗಳಲ್ಲಿ ತಗೆದುಕೊಂಡು ಹೋಗಬಹುದು
ಒಬ್ಬ ವ್ಯಕ್ತಿಯು ರೈಲಿನಲ್ಲಿ 2 ಲೀಟರ್ ಗಿಂತ ಹೆಚ್ಚಿನ ಮದ್ಯವನ್ನು ಸಾಗಿಸುವಂತಿಲ್ಲ. ಆಲ್ಕೋಹಾಲ್ ಬಾಟಲಿಯನ್ನು ಸಂಪೂರ್ಣವಾಗಿ ಮುಚ್ಚಬೇಕು ಮತ್ತು ಕವರ್ ಪ್ಯಾಕ್ ಮಾಡಬೇಕು. ಇದು ರೈಲಿನಲ್ಲಿ ಯಾವುದೇ ರೀತಿಯಲ್ಲಿ ಯಾರಿಗೂ ಕಾಣಿಸಬಾರದು. ಆದರೆ ಮದ್ಯವನ್ನು ನಿಷೇಧಿಸದ ​​ರಾಜ್ಯದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಮಾತ್ರ ಇದನ್ನು ಅನುಮತಿಸಲಾಗಿದೆ.

ರೈಲ್ವೇ ಕಾಯಿದೆ 1989 ರ ಸೆಕ್ಷನ್ 145 ರ ಪ್ರಕಾರ ರೈಲು, ರೈಲ್ವೇ ಪ್ಲಾಟ್‌ ಫಾರ್ಮ್ ಸೇರಿದಂತೆ ರೈಲ್ವೆ ಆವರಣದಲ್ಲಿ ಎಲ್ಲಿಯಾದರೂ ಯಾರಾದರೂ ಮದ್ಯ ಸೇವಿಸುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿಯ ರೈಲು ಟಿಕೆಟ್ ಅಥವಾ ರೈಲ್ವೇ ಪಾಸ್ ರದ್ದುಪಡಿಸಿ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 500 ರೂ.ವರೆಗೆ ದಂಡ ವಿಧಿಸಲಾಗುತ್ತದೆ.

Join Nadunudi News WhatsApp Group