Luggage Rule: ಇನ್ನುಮುಂದೆ ರೈಲಿನಲ್ಲಿ ಇದಕ್ಕಿಂತ ಹೆಚ್ಚಿನ ತೂಕದ ಲಗೇಜ್ ತಗೆದುಕೊಂಡು ಹೋಗುವಂತಿಲ್ಲ, ಹೊಸ ರೂಲ್ಸ್.

ರೈಲಿನಲ್ಲಿ ಲಗೇಜ್ ಇರಿಸಲು ಹೊಸ ನಿಯಮ, ಇದಕ್ಕಿಂತ ಹೆಚ್ಚು ತೂಕದ ವಸ್ತುಗಳನ್ನ ತಗೆದುಕೊಂಡು ಹೋಗುವಂತಿಲ್ಲ.

Railway Luggage Rule: ಸದ್ಯ ಭಾರತೀಯ ರೈಲ್ವೆ (Indian Railway) ರೈಲು ಪ್ರಯಾಣಿಕರಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣವನ್ನು ನೀಡುವ ದೃಷ್ಟಿಯಿಂದ ರೈಲ್ವೆ ಇಲಾಖೆ ವಿವದ ಸೌಲಭ್ಯವನ್ನು ಕೂಡ ಪರಿಚಯಿಸುತ್ತ ಇರುತ್ತದೆ.

ಇನ್ನು ಸದ್ಯ ಹಬ್ಬದ ಸೀಸನ್ ಆಗಿರುವುದರಿಂದ ಜನರು ಹೆಚ್ಚಾಗಿ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ. ಹೀಗಾಗಿ ಜನಸಂದಣಿ ಹೆಚ್ಚಿರುವ ಕಾರಣ ರೈಲ್ವೆ ಇಲಾಖೆ ಇದೀಗ ಹೊಸ ನಿಯಮವನ್ನು ಪರಿಚಯಿಸಿದೆ. ಹೌದು ಜನರು ರೈಲಿನಲ್ಲಿ ಲಗೇಜ್ ಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಇದನ್ನ ಪ್ರತಿ ರೈಲು ಪ್ರಯಾಣಿಕರು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

Indian Railway Rules For Luggage
Image Credit: Ixigo

ರೈಲಿನಲ್ಲಿ ಲಗೇಜ್ ಇರಿಸಲು ಹೊಸ ನಿಯಮ
ಇದೀಗ ಭಾರತೀಯ ರೈಲ್ವೆ ಲಗೇಜ್ ಸಂಭಂದಿತ ಹೊಸ ನಿಯಮವನ್ನು ಜಾರಿಗೆ ತಂದಿದೆ. ರೈಲಿನಲ್ಲಿ ಎಷ್ಟು ಲಗೇಜ್ ತಗೆದುಕೊಂಡು ಹೋಗಬೇಕು ಅನ್ನುವುದರ ಬಗ್ಗೆ ನಿಯಮಗಳು ಇದ್ದು ಅದನ್ನ ತಿಳಿದುಕೊಂಡು ರೈಲಿನಲ್ಲಿ ಪ್ರಯಾಣ ಮಾಡುವುದು ಅತ್ಯವಶ್ಯಕವಾಗಿದೆ.

ರೈಲಿನ ಪ್ರಯಾಣಿಕರು ವಿವಿಧ ಕೋಚ್ ಗಳನ್ನೂ ನಿಗದಿಪಡಿಸಿರುತ್ತಾರೆ. ಪ್ರಯಾಣಿಕರು ನಿಗದಿಪಡಿಸಿದ ಕೋಚ್ ಗಳಿಗೆ ಅನುಗುಣವಾಗಿ ಲಗೇಜ್ ಗಳಿಗೆ ಹೊಸ ನಿಯಮವನ್ನು ತರಲಾಗಿದೆ. ವಿವಿಧ ವರ್ಗದ ಕೋಚ್ ಗಳಿಗೆ ನಿಗದಿಪಡಿಸಿದ ಮಿತಿಯ ವರೆಗೆ ಉಚಿತವಾಗಿ ಲಗೇಜ್ ಅನ್ನು ಇರಿಸಬಹುದು. ಮಿತಿಗಿಂತ ಹೆಚ್ಚಿನ ಲಗೇಜ್ ಸಾಗಿಸಿದ್ದಲ್ಲಿ ದಂಡ ವಿದಿಸಬೇಕಾಗುತ್ತದೆ.

Railway Luggage Rule
Image Credit: Zeenews

ಇನ್ನುಮುಂದೆ ರೈಲಿನಲ್ಲಿ ಇದಕ್ಕಿಂತ ಹೆಚ್ಚಿನ ತೂಕದ ಲಗೇಜ್ ತಗೆದುಕೊಂಡು ಹೋಗುವಂತಿಲ್ಲ
ವರ್ಗದ ಆಧಾರ್ ಮೇಲೆ ಲಗೇಜ್ ಗಳನ್ನೂ ಇರಿಸಲಾಗುತ್ತದೆ. ಎಸಿ 1 ಶ್ರೇಣಿಯ ಪ್ರಯಾಣಿಕರು 70 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 150 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಎಸಿ 2 ಶ್ರೇಣಿಯ ಪ್ರಯಾಣಿಕರು 50 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 100 ಕೆಜಿ ಲಗೇಜ್ ಅನ್ನು ಸಾಗಿಸಬಹುದು.

Join Nadunudi News WhatsApp Group

ಎಸಿ 3 ಅಥವಾ ಎಸಿ ಚೆರ್ ಕಾರ್ ಶ್ರೇಣಿಯ ಪ್ರಯಾಣಿಕರು 40 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 40 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಸ್ಲೀಪರ್ ಕೋಚ್ ನ ಪ್ರಯಾಣಿಕರು 40 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 80 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಎರಡನೇ ತರಗತಿಯ ಪ್ರಯಾಣಿಕರು 35 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 70 ಕೆಜಿ ಲಗೇಜ್ ಅನ್ನು ಸಾಗಿಸಬಹುದು.

Join Nadunudi News WhatsApp Group