Railway Recruitment 2024: 10 ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಬಂಪರ್ ನೇಮಕಾತಿ, 9000 ಉದ್ಯೋಗ ಖಾಲಿ

ರೈಲ್ವೆಯಲ್ಲಿ 9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

Railway Recruitment 2024: ನಿರುದ್ಯೋಗಿಗಳು ಉದ್ಯೋಗವನ್ನು ಪಡೆದುಕೊಳ್ಳಲು ಭಾರತೀಯ ರೈಲ್ವೆ ಆಗಾಗ ಒಂದೊಳ್ಳೆ ಅವಕಾಶವನ್ನು ನೀಡುತ್ತಾ ಇರುತ್ತದೆ. ರೈಲ್ವೆ ಇಲಾಖೆಯು ಉನ್ನತ ಉದ್ದೇಗಳಿಗೆ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಪಡೆದುಕೊಳ್ಳಲು ಅನುವುಮಾಡಿಕೊಳುತ್ತಿದೆ. ಆಸಕ್ತಿ ಹೊಂದಿದವರು ರೈಲ್ವೆ ಇಲಾಖೆಯ ಹುದ್ದೆಗಳಿಹೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು.

ರೈಲ್ವೆ ಇಲಾಖೆಯು ಹುದ್ದೆಗೆ ಅರ್ಜಿ ಆಹ್ವಾನ ಮಾಡುವುದರ ಜೊತೆಗೆ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದೆ. ಅರ್ಜಿ ಸಲ್ಲಿಕೆಗೆ ಬೇಕಾಗಿರುವ ವಿದ್ಯಾರ್ಹತೆ, ವಯಸ್ಸಿಯ ಮಿತಿ, ಅರ್ಜಿ ಸಲ್ಲಿಕೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಿಸಿದ ಎಲ್ಲ ವಿವರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

Railway Recruitment 2024
Image Credit: Shiksha

9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೆ ನೇಮಕಾತಿ ಮಂಡಳಿ (RRB) ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಸ್ತುತ 9 ಸಾವಿರಕ್ಕೂ ಹೆಚ್ಚು ನೇಮಕಾತಿಗಳಿಗೆ ನೋಂದಣಿ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ. ಇನ್ನು ಆನ್‌ ಲೈನ್ ಅರ್ಜಿ ಪ್ರಕ್ರಿಯೆಯು ಮಾರ್ಚ್ 9 2024 ರಿಂದ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 8 2024 ಅನ್ನು ನಿಗದಿಪಡಿಸಲಾಗಿದೆ.

ಈ ಪೈಕಿ 1092 ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಮತ್ತು 8052 ಟೆಕ್ನಿಷಿಯನ್ ಗ್ರೇಡ್-3, ಟೆಕ್ನಿಷಿಯನ್ ಗ್ರೇಡ್-1 ಲೆವೆಲ್-5 ಮತ್ತು ಟೆಕ್ನಿಷಿಯನ್ ಗ್ರೇಡ್-3 ಲೆವೆಲ್-2 ಹುದ್ದೆಗಳಿವೆ. 2018 ರಲ್ಲಿ, 26000 ALP ತಂತ್ರಜ್ಞರನ್ನು ನೇಮಿಸಿಕೊಂಡಾಗ, ತಂತ್ರಜ್ಞರ ಹುದ್ದೆಗೆ ಎರಡು ಹಂತದ CBT ಪರೀಕ್ಷೆಯನ್ನು ತೆಗೆದುಕೊಳ್ಳಲಾಯಿತು. ಆದರೆ, ಈ ಬಾರಿ ಒಂದೇ ಹಂತದಲ್ಲಿ ಪರೀಕ್ಷೆಗಳು ನಡೆಯಲಿವೆ.

Railway New Recruitment Update
Image Credit: Exam News Club

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯ ವಿವರ
ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗೆ ಐಟಿಐ, ಭೌತಶಾಸ್ತ್ರ ಮತ್ತು ಗಣಿತದೊಂದಿಗೆ 10 ನೇ ತೇರ್ಗಡೆಯ ಅಗತ್ಯವಿದೆ. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗೆ ಐಟಿಐ, ಭೌತಶಾಸ್ತ್ರ ಮತ್ತು ಗಣಿತದೊಂದಿಗೆ 10 ನೇ ತೇರ್ಗಡೆಯ ಅಗತ್ಯವಿದೆ.

Join Nadunudi News WhatsApp Group

ಟೆಕ್ನಿಷಿಯನ್ ಗ್ರೇಡ್-1 ಹುದ್ದೆಗಳಿಗೆ ವಯೋಮಿತಿ 18 ರಿಂದ 36 ವರ್ಷಗಳು. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗೆ ವಯೋಮಿತಿ 18 ರಿಂದ 33 ವರ್ಷಗಳು. ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಇನ್ನು ಏಪ್ರಿಲ್ 8, 2024 ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group