Indian Railway: ಮನೆಯಲ್ಲಿ ಪ್ರಾಣಿಗಳನ್ನ ಸಾಕುವವರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ.

ಪ್ರಾಣಿಗಳನ್ನ ರೈಲಿನಲ್ಲಿ ಕರೆದುಕೊಂಡು ಹೋಗುವವರಿಗೆ ಗುಡ್ ನ್ಯೂಸ್.

Railway New Rule For Traveling With Pets: ರೈಲು ಪ್ರಯಾಣ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ದೂರದ ಪ್ರಯಾಣಕ್ಕೆ ಹೆಚ್ಚಿನ ಜನರು ರೈಲು ಪ್ರಯಾಣವನ್ನೇ ಆರಿಸುತ್ತಾರೆ. ರೈಲು ಪ್ರಯಾಣವು ಒಂದು ರೀತಿಯಲ್ಲಿ ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯವನ್ನು ಒದಗಿಸುತ್ತ ಇರುತ್ತದೆ.

ಪ್ರಯಾಣಿಕರಿಗೆ ತಮ್ಮ ಪ್ರಯಾಣದ ವೇಳೆ ಯಾವುದೇ ತೊಂದರೆ ಆಗಬಾರದು ಎನ್ನುವುದು ಇಲಾಖೆಯ ಉದ್ದೇಶವಾಗಿದೆ. ಇನ್ನು ರೈಲು ಸಂಚರಿಸುವವರಿಗೆ ಸಾಕಷ್ಟು ನಿಯಮವನ್ನು ರೂಪಿಸಲಾಗಿದೆ. ಪ್ರಯಾಣ ಮಾಡುವಾಗ ಎಷ್ಟು ಲಗೇಜ್ ಅನ್ನು ಸಾಗಿಸಬೇಕು ಎನ್ನುವುದರಿಂದ ಹಿಡಿದು ರೈಲುಗಳಲ್ಲಿ ಯಾವ ಯಾವ ವಸ್ತುಗಳನ್ನು ಬಳಸಬಹುದು ಎನ್ನುವುದಕ್ಕೂ ಪ್ರತ್ಯೇಕ ನಿಯಮವಿರುತ್ತದೆ.

Railway New Rule For Traveling With Pets
Image Credit: Wagr

ಮನೆಯಲ್ಲಿ ಪ್ರಾಣಿಗಳನ್ನ ಸಾಕುವವರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್
ಇನ್ನು ರೈಲುಗಳಲ್ಲಿ ಸಾಕು ಪ್ರಾಣಿಗಳಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿರಲಿಲ್ಲ. ತಮ್ಮ ಪ್ರೀತಿಯ ನಾಯಿ, ಬೆಕ್ಕು, ಇತ್ಯಾದಿ ಸಾಕುಪ್ರಾಣಿಗಳನ್ನು ರೈಲಿನಲ್ಲಿ ಕರೆದುಕೊಂಡು ಹೋಗಲು ಅನುಮತಿ ಇಲ್ಲದ ಕಾರಣ ಸಾಕಷ್ಟು ಜನರು ರೈಲು ಪ್ರಯಾಣವನ್ನು ಕೈಬಿಟ್ಟುರುವ ಉದಾಹರಣೆಗಳಿವೆ. ಇದೀಗ ರೈಲ್ವೆ ರೈಲ್ವೆ ಇಲಾಖೆ ಸಾಕುಪ್ರಾಣಿಗಳ ಜೊತೆಗಿನ ಪ್ರಯಾಣಕ್ಕಾಗಿ ಹೊಸ ನಿಯಮವನ್ನು ಪರಿಚಯಿಸಿದೆ. ಈ ಮೂಲಕ ಪ್ರಾಣಿ ಪ್ರಿಯರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.

ಇನ್ನುಮುಂದೆ ರೈಲಿನಲ್ಲಿ ಸಾಕುಪ್ರಾಣಿಗಳ ಜೊತೆ ಪ್ರಯಾಣ ಮಾಡಬಹುದು
ಇದೀಗ ರೈಲ್ವೆ ಇಲಾಖೆಯು ಸಾಕು ಪ್ರಾಣಿಗಳ ಜೊತೆ ಪ್ರಯಾಣ ನಡೆಸಲು ಅನುಮತಿ ನೀಡಿದೆ. ಇನ್ನುಮುಂದೆ ರೈಲಿನಲ್ಲಿ ಸಾಕುಪ್ರಾಣಿಗಳ ಜೊತೆ ನೀವು ಪ್ರಯಾಣ ಮಾಡಬಹುದು. ಆದರೆ ನೀವು ರೈಲುಗಳಲ್ಲಿ ಸಾಕುಪ್ರಾಣಿಗಳ ಜೊತೆ ಪ್ರಯಾಣ ಮಾಡಲು ಇಲಕೆಯು ಕೆಲವು ನಿಯಮವನ್ನು ಅಳವಡಿಸಿದೆ. ನೀವು ರೈಲ್ವೆ ಇಲಾಖೆಯ ನಿಯಮಾನುಸಾರವೇ ರೈಲುಗಳಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.

Railway New Rule For Traveling With Pets
Image Credit: India

ಸಾಕುಪ್ರಾಣಿಗಳ ಜೊತೆ ಪ್ರಯಾಣ ಮಾಡಲು ಈ ನಿಯಮ ಕಡ್ಡಾಯ
*ನಿಮ್ಮ ಸಾಕುಪ್ರಾಣಿಗಳನ್ನು ಕರೆದುಕೊಂಡು ಹೋಗಲು ನೀವು ಪಾರ್ಸೆಲ್ ಟಿಕೆಟ್ ಅನ್ನು ಕಾಯ್ದಿರಿಸಬೇಕು.

Join Nadunudi News WhatsApp Group

*ನೀವು ಬೆಕ್ಕುಗಳು ಅಥವಾ ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರೆ, ನೀವು ಅವುಗಳನ್ನು ನಿಮ್ಮೊಂದಿಗೆ ತರಬೇತುದಾರರಿಗೆ ತೆಗೆದುಕೊಳ್ಳಬಹುದು.

*ನಿಮ್ಮ ಸಾಕುಪ್ರಾಣಿಗಳನ್ನು ನೀವು ಮೊದಲ ಎಸಿಯಲ್ಲಿ ಮಾತ್ರ ತೆಗೆದುಕೊಳ್ಳಬಹುದು. *ನಿಮ್ಮ ಸಾಕುಪ್ರಾಣಿಗಾಗಿ ನೀವು ಟಿಕೆಟ್ ಬುಕ್ ಮಾಡುವಾಗ, ಅದರ ತೂಕ ಮತ್ತು ಗಾತ್ರಕ್ಕೆ ಅನುಗುಣವಾಗಿ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

*ನಿಮ್ಮ ಸಾಕುಪ್ರಾಣಿಗಳ ತೂಕಕ್ಕೆ ಅನುಗುಣವಾಗಿ ನೀವು ಲಗೇಜ್ ದರಗಳನ್ನು ಪಾವತಿಸಬೇಕಾಗುತ್ತದೆ.

Indian Railway New Rule
Image Credit: Curlytales

*ನೀವು ಎಸಿ 2 ಟೈರ್, ಎಸಿ 3 ಟೈರ್, ಎಸಿ ಚೇರ್ ಕಾರ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಕೋಚ್‌ ಗಳಲ್ಲಿ ಸಾಕುಪ್ರಾಣಿಗಳ ಜೊತೆ ಪ್ರಯಾಣ ಮಾಡಲು ಅನುಮತಿ ಇರುವುದಿಲ್ಲ.

*ನಿಮ್ಮ ಸಾಕುಪ್ರಾಣಿಗಳಿಗೆ ಆಂಟಿ ರೇಬೀಸ್ ಲಸಿಕೆ ನೀಡಬೇಕು. ಇದರ ಜೊತೆಗೆ ನೀವು ಪಶುವೈದ್ಯಕೀಯ ಪ್ರಮಾಣಪತ್ರವನ್ನು ಹೊಂದುವುದು ಕಡ್ಡಾಯ

Join Nadunudi News WhatsApp Group