Railway Promotion Exam: ರೈಲ್ವೆ ಪರೀಕ್ಷೆ ಬರೆಯುವ ಕನ್ನಡಿಗರಿಗೆ ಬೇಸರದ ಸುದ್ದಿ, ಹೊಸ ನಿಯಮ ಜಾರಿಗೆ ತಂದ ರೈಲ್ವೆ ಇಲಾಖೆ

ಕನ್ನಡಿಗರಿಗೆ ಬಿಗ್ ಶಾಕ್, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ರೈಲ್ವೆ ಬಡ್ತಿ ಪರೀಕ್ಷೆ ಬರೆಯಲು ಅವಕಾಶ.

Railway Promotion Exam New Update: ಸದ್ಯ ರಾಜ್ಯದಲ್ಲಿ ಕನ್ನಡ ಉಳಿವಿಗಾಗಿ ಈಗಾಗಲೇ ಸಾಕಷ್ಟು ಕ್ರಮ ಕೈಗೊಳಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯ ಹೊರತಾಗಿ ಬೇರೆ ಭಾಷೆಯ ಬಳಕೆಯೇ ಹೆಚ್ಚುತ್ತಿದೆ. ಬೇರೆ ರಾಜ್ಯಗಳಿಂದ ಬಂದವರು ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸುವುದನ್ನು ಬಿಟ್ಟು ಬೇರೆ ಭಾಷೆಯಲ್ಲಿಯೇ ವ್ಯವಹಾರ ಮಾಡುತ್ತಿದ್ದಾರೆ.

ಈ ವಿಷಯಕ್ಕೆ ಸಾಕಷ್ಟು ಪ್ರತಿಭಟನೆ ನಡೆಯುತ್ತಲೇ ಇದೆ. ಕನ್ನಡದ ಉಳಿವಿಗಾಗಿ ಅನೇಕ ಕನ್ನಡ ಪರ ಹೋರಾಟಗಾರರು ಆಗಾಗ ದ್ವನಿಯೆತ್ತುತ್ತ ಇರುತ್ತಾರೆ. ಹೀಗಿರುವ ಸದ್ಯ ಕನ್ನಡ ಭಾಷೆಗೆ ಆದ್ಯತೆ ನೀಡದೆ ಇರುವ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ.

Railway Promotion Exam New Update
Image Credit: Taxscan

ಕನ್ನಡಿಗರಿಗೆ ಬಿಗ್ ಶಾಕ್
ಇನ್ನು ಜನಸಾಮಾನ್ಯರಿಗೆ ಅಗತ್ಯ ಇರುವ ಕಚೇರಿಗಳಲ್ಲಿ ಗ್ರಾಹಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಕನ್ನಡದಲ್ಲಿ ಮಾತನಾಡುವವರನ್ನು ಹೆಚ್ಚಾಗಿ ನೇಮಿಸಿಕೊಳ್ಳುವಂತೆ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಹೀಗಿರುವಾಗ ನೈರುತ್ಯ ರೈಲ್ವೆ ಇಲಾಖೆ ಕನ್ನಡಿಗ ನೌಕರರಿಗೆ ಬಿಗ್ ಶಾಕ್ ನೀಡಿದೆ.

ಹೌದು, ರೈಲ್ವೆ ಬಡ್ತಿ ಪರೀಕ್ಷೆ ನೈರುತ್ಯ ರೈಲ್ವೆ ಇಲಾಖೆ ಕನ್ನಡಿಗರಿಗೆ ಅವಕಾಶವನ್ನು ನೀಡುತ್ತಿಲ್ಲ. ಈ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದರೆ ಈ ಪರೀಕ್ಷೆ ಎದಿರಿಸಲು ಕನ್ನಡಿಗರಿಗೆ ಕಷ್ಟವಾಗುತ್ತದೆ. ಅವರು ಈ ಹುದ್ದೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾಗುತ್ತದೆ. ಇನ್ನು ಈ ಕ್ರಮದ ವಿರುದ್ಧ ಕನ್ನಡಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Railway Promotion Exam
Image Credit: New 18

ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ರೈಲ್ವೆ ಬಡ್ತಿ ಪರೀಕ್ಷೆ ಬರೆಯಲು ಅವಕಾಶ
ಸದ್ಯ ನೈರುತ್ಯ ರೈಲ್ವೆ ಇಲಾಖೆ ಕನ್ನಡಿಗ ನೌಕರರಿಗೆ ಬಿಗ್ ಶಾಕ್ ನೀಡಿದೆ. ಹೌದು, ನೈಋತ್ಯ ರೈಲ್ವೇ ನಡೆಸುವ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಕನ್ನಡಿಗರು ಉನ್ನತ ಹುದ್ದೆಯನ್ನು ಪಡೆಯುವ ಅವಕಾಶ ಕೈತಪ್ಪಿಹೋಗುವಾತಾಗಿದೆ.

Join Nadunudi News WhatsApp Group

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಎಲೆಕ್ಟ್ರಿಕಲ್ ವಿಭಾಗದಿಂದ ಬಡ್ತಿ ಮೀಸಲು ಜೂನಿಯರ್ ಇಂಜಿನಿಯರ್ ಹುದ್ದೆಗಳ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಅಧಿಸೂಚನೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎನ್ನುವ ಬಗ್ಗೆ ಹೇಳಲಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಕನ್ನಡಿಗರಿಗೆ ಅವಕಾಶವಿಲ್ಲ. ಹೀಗಾಗಿ ಕನ್ನಡಿಗ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗಿದೆ.

Railway Promotion Exam Rules Change
Image Credit: Indiamart

Join Nadunudi News WhatsApp Group